AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ನಿರಾಕರಿಸಿ ಬ್ರೇಕ್ ಅಪ್ ಎಂದಿದ್ದ ಯುವತಿಯನ್ನು ಕೊಲ್ಲಲು ದೆಹಲಿಯಿಂದ ಬಂದಿದ್ದ ಪ್ರೇಮಿ ಅರೆಸ್ಟ್​​

ಬೆಂಗಳೂರಿನ ಜೆಬಿ ನಗರದಲ್ಲಿ ನಡೆದಿದ್ದ ಟೆಕ್ಕಿ ಅಕಾಂಕ್ಷ ಬಿದ್ಯಾಸಾರ ಕೊಲೆ ಪ್ರಕರಣದ ಆರೋಪಿ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ‌. ಜೂನ್ 6 ರಂದು ಕೃತ್ಯ ಎಸಗಿ ಬರೋಬ್ಬರಿ 27 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಆತನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರೀತಿ ನಿರಾಕರಿಸಿ ಬ್ರೇಕ್ ಅಪ್ ಎಂದಿದ್ದ ಯುವತಿಯನ್ನು ಕೊಲ್ಲಲು ದೆಹಲಿಯಿಂದ ಬಂದಿದ್ದ ಪ್ರೇಮಿ ಅರೆಸ್ಟ್​​
ಬಂಧಿತ ಆರೋಪಿ ಅರ್ಪಿತ್, ಮೃತ ಅಕಾಂಕ್ಷ ಬಿದ್ಯಾಸಾರ
Kiran HV
| Edited By: |

Updated on: Jul 05, 2023 | 4:03 PM

Share

ಬೆಂಗಳೂರು: ಈ ಹಿಂದೆ ಒಂದೇ ಕಂಪೆನಿಯಲ್ಲಿ ಸಹದ್ಯೋಗಿಯಾಗಿದ್ದ ಅಕಾಂಕ್ಷ ಮತ್ತು ಅರ್ಪಿತ್ ನಡುವೆ ಸ್ನೇಹ ಬೆಳೆದಿತ್ತು. ಆ ಬಳಿಕ ಸ್ನೇಹ ಪ್ರೀತಿಗೆ (love) ತಿರುಗಿ ಇಬ್ಬರು ಒಂದೇ ಪ್ಲಾಟ್​ನಲ್ಲಿ ಲಿವಿಂಗ್ ಟೂಗೆದರ್ ರಿಲೇಶನ್​ನಲ್ಲಿದ್ದರು. ಈ ವೇಳೆ ಪ್ರೇಯಸಿ ಅಕಾಂಕ್ಷ ಅರ್ಪಿತ್​ಗೆ ಮದುವೆಯಾಗುವುದಾಗಿ ಹೇಳಿದ್ದಳಂತೆ. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಪಿತ್​ ಅಕಾಂಕ್ಷ ಬ್ರೇಕ್ ಅಪ್ ಅಂದಿದ್ದಕ್ಕೆ ಹೌಹಾರಿದ್ದ. ದೆಹಲಿಯಲ್ಲಿದ್ದಾಗಲೇ ತನಗೆ ಸಿಗದ ಪ್ರೇಯಸಿ ಅಕಾಂಕ್ಷ ಮತ್ಯಾರಿಗೂ ಸಿಗಬಾರದೆಂದು, ಆಕೆಯನ್ನು ಕೊಲೆ ಮಾಡಲೇಬೇಕು ನಿರ್ಧರಿಸಿ ಬೆಂಗಳೂರಿಗೆ ಬಂದಿದ್ದ.

ಅಕಾಂಕ್ಷಳನ್ನ ಕೊನೆಯದಾಗಿ ಭೇಟಿ ಮಾಡಿ ಮಾತನಾಡುವ ನೆಪ ಮಾಡಿಕೊಂಡು ಜೆಬಿ ನಗರದಲ್ಲಿ ಅಕಾಂಕ್ಷಳ ಫ್ಲಾಟ್​ಗೆ ಬಂದವನು ಜೂನ್ 6 ರಂದು ಫ್ಲಾಟ್​ನ ಕೋಣೆಯಲ್ಲಿ ಅಕಾಂಕ್ಷಳನ್ನ ದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಎಸ್ಕೇಪ್ ಆಗಿದ್ದ.

ಪೊಲೀಸರಿಗೆ ಯಾವುದೇ ಕ್ಲ್ಯೂ, ಸಾಕ್ಷ್ಯ ಸಿಗದಂತೆ ಮಾಡಲೆತ್ನಿಸಿದ್ದ ಖತರ್ನಾಕ್..!

ಜೂನ್ 6 ರಂದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಅರ್ಪಿತ್ ಜೆಬಿನಗರ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದಿದ್ದು ಬರೋಬ್ಬರಿ 27 ದಿನಗಳು. ಮೊಬೈಲ್ ಬಳಸಿದರೆ ಪೊಲೀಸರಿಗೆ ಸಿಕ್ಕಿಬೀಳುವ ಬಗ್ಗೆ ಅರಿತಿದ್ದ ಆರೋಪಿ ಅರ್ಪಿತ್ ಮೊಬೈಲ್ ಅನ್ನು ಬೆಂಗಳೂರಿಗೆ ಬರುವಾಗ ತಂದಿರಲಿಲ್ಲ‌. ದೆಹಲಿಯಿಂದ ಬೆಂಗಳೂರಿಗೆ ಹೊರಡುವ ಮುನ್ನ ತನ್ನಿಬ್ಬರು ಸ್ನೇಹಿತರ ಬೆಂಗಳೂರಿಗೆ ಅಕಾಂಕ್ಷಳನ್ನ ಮೀಟ್ ಮಾಡುವುದಾಗಿ ಇನ್ಸ್ ಟಾಗ್ರಾಮ್ ಹೇಳಿದ್ದನ್ನು ಡಿಲೀಟ್ ಮಾಡಿದ್ದ. ಆ ಬಳಿಕ ಪಕ್ಕಾ ಪ್ರೀಪ್ಲಾನ್ ಮಾಡಿಕೊಂಡೆ, ಕೊಲೆ ಬಳಿಕ ಎಸ್ಕೇಪ್ ಆಗಲು ಕೇವಲ 5 ಸಾವಿರ ಹಣ ಮತ್ತು 7-8 ಜೊತೆ ಬಟ್ಟೆಗಳನ್ನ ಪ್ಯಾಕ್ ಮಾಡಿ ವಿಜಯವಾಡದಲ್ಲಿ ಇರಿಸಿ ಬಂದಿದ್ದ.

ಬೆಂಗಳೂರಿನ ಜೆಬಿ ನಗರದ ಅಕಾಂಕ್ಷ ಪ್ಲಾಟ್ ತೆರಳುವ ಮಾರ್ಗದಲ್ಲಿ ಇದ್ದ ರಸ್ತೆ ಬದಿ ಹಾಗೂ ಏರಿಯಾದ ಮನೆಗಳ ಸಿಸಿ ಕ್ಯಾಮಾರ ಗಮನಿಸಿ, ವೆಹಿಕಲ್ ಗಳಲ್ಲಿ ಓಡಾಡಿದ್ರೆ ಪೊಲೀಸರಿಗೆ ಸುಳಿವು ಸಿಕ್ಕಿ ಆ ಬಳಿಕ ಸಿಕ್ಕಿಬೀಳಬಹುದೆಂದು ನಡೆದುಕೊಂಡೆ ಪ್ಲಾಟ್ ಗೆ ಬಂದಿದ್ದ, ನಂತರ ಅಕಾಂಕ್ಷಳನ್ನ ಕೊಲೆ ಮಾಡಿ, ಫ್ಲಾಟ್ ನಿಂದ ಹೊರಬಂದವ ಅಕಾಂಕ್ಷಳ ಫ್ಲಾಟ್ ಗೆ ಆಕೆ ಸ್ನೇಹಿತೆ ಬಂದು ಹತ್ಯೆ ವಿಚಾರ ಆಕೆಗೆ ತಿಳಿಯುವ ವರೆಗೂ ಪ್ಲಾಟ್ ಬಳಿಯೇ ಮರೆಯಲ್ಲಿ ನಿಂತು ನೋಡಿ, ಆ ಬಳಿಕ ಬರೋಬ್ಬರಿ 8 ಕಿ.ಮೀ ನಡೆದು ಬಂದು ಬೆಂಗಳೂರಿನಿಂದ ಟ್ರೈನ್ ಮೂಲಕ ಆರೋಪಿ ಅರ್ಪಿತ್ ಹೈದರಾಬಾದ್ ಗೆ ತೆರಳಿದ್ದ.

ಇದನ್ನೂ ಓದಿ: Bengaluru News: ಇಬ್ಬರ ಜಗಳದ ಮಧ್ಯೆ ಬಂದ ಮೂರನೇ ವ್ಯಕ್ತಿ ದುರಂತ ಅಂತ್ಯ

ತಾನು ಕೆಲಸ ಮಾಡುವ ದೆಹಲಿಗೆ ತೆರಳಿದ್ರೆ ಪೊಲೀಸರು ಮೊದಲು ದೆಹಲಿಗೆ ಹುಡುಕಿ ಬರುವ ಸಾಧ್ಯತೆಗಳನ್ನ ಅಂದಾಜಿಸಿ ಸಿಕ್ಕಿ ಬೀಳುವ ಆತಂಕದಿಂದ, ಹೈದರಾಬಾದ್ ಗೆ ಹೋಗಿದ್ದ. ಆ ಬಳಿಕ ಹೈದರಾಬಾದ್ ನಿಂದ ಪ್ಯಾಕ್ ಮಾಡಿ ರೆಡಿ ಇಟ್ಟಿದ್ದ ಬಟ್ಟೆಗಳ ಬ್ಯಾಗ್ ಮತ್ತು ಖರ್ಚಿಗೆ 5 ಸಾವಿರ ಹಣ ತೆಗೆದುಕೊಂಡು ದೆಹಲಿಗೆ ಹೊರಡುವ ಟ್ರೈನ್ ಏರಿದ್ದಾನೆ.

ಈ ನಡುವೆ ಮೊಬೈಲ್ ಇಲ್ಲದ ಕಾರಣ ಇಂಟರ್ ನೆಟ್ ಮೂಲಕ ತನ್ನ ಸ್ನೇಹಿತರನ್ನು ಸಂಪರ್ಕಿಸಲು ಯತ್ನಿಸಿದ್ದಾನೆ‌. ಅವ್ರ ಸಹಾಯ ಪಡೆಯಲು ಅರ್ಪಿತ್ ನಡೆಸಿದ್ದ ಯತ್ನ ಕೈಗೂಡದೆ ಸ್ನೇಹಿತರಿಂದ ಯಾವುದೇ ರೆಸ್ಪಾನ್ಸ್ ಬಾರದ ಹಿನ್ನಲೆ ತಲೆಮರೆಸಿಕೊಳ್ಳಲು ಯೂಟರ್ನ್ ಹೊಡೆದಿದ್ದಾನೆ.

ಆದ್ರೆ ಹೈದರಾಬಾದ್ ನಿಂದ ದೆಹಲಿಗೆ ತೆರಳದೆ, ಮಾರ್ಗ ಮಧ್ಯೆ ಭೂಪಾಲ್ ನಲ್ಲಿ ಇಳಿದು ಅಸ್ಸಾಂಗೆ ಡೈವರ್ಟ್ ಆಗಿ ಅಲ್ಲಿಯೇ ಕೆಲ ದಿನಗಳ ಕಾಲ ತಂಗಿದ್ದ, ಖರ್ಚಿಗೆ ಹಣವಿಲ್ಲದೇ ಪರದಾಡಿದ್ದ ಅರ್ಪಿತ್ , ಯಾರಿಗೂ ಅನುಮಾನ ಬಾರದಂತೆ ಕೂಲಿ ಕೆಲಸ ಮಾಡುತ್ತಾ, ರಸ್ತೆ ಬದಿ ತರಕಾರಿ ವ್ಯಾಪಾರ ಮಾಡುತ್ತಾ ದಿನಕಳೆದಿದ್ದಾನೆ.

ಇದನ್ನೂ ಓದಿ: ಬೆಳಗಾವಿಯ ಗ್ರೇಡ್-2 ತಹಶೀಲ್ದಾರ್ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್; ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಪತ್ತೆ

25 ದಿನಗಳ ಕಾಲ ಅಲೆದಾಡಿದ್ದ ಆರೋಪಿ ಅರ್ಪಿತ್ ಗುರ್ಜಾಲ್, ಕೊನೆಗೆ ವಿಜಯವಾಡಕ್ಕೆ ಹಿಂದಿರುಗಿದ್ದ. ವಿಜಯವಾಡದಲ್ಲಿ ಸ್ನೇಹಿತ ಮೋಟಾರ್ ಡ್ರೈವಿಂಗ್ ಸ್ಕೂಲ್ ನಲ್ಲಿ ಶೆಲ್ಟರ್ ಪಡೆದಿದ್ದಾನೆ. ಮೊಬೈಲ್ ಇಲ್ಲದ ಕಾರಣ ಮತ್ತೆ ಸಹಾಯಕ್ಕಾಗಿ ಇಂಟರ್ ನೆಟ್ ಮೂಲಕ ಸಂಪರ್ಕಿಸಿ ಯಾವುದೇ ಸಹಾಯ ಸಿಗದೆ ಸುಮ್ಮನಾಗಿದ್ದ. ಈ ವೇಳೆ ವಿಜಯವಾಡದಲ್ಲಿ ಸ್ನೇಹಿತ ಅರ್ಪಿತ್ ನ ತಾಯಿಗೆ ಕರೆಮಾಡಿ ತಮ್ಮ ಮಗ ವಿಜಯವಾಡದಲ್ಲಿ ಇರುವ ಬಗ್ಗೆ ಮಾಹಿತಿ ನೀಡಿದ್ದಾನೆ.

ಆರೋಪಿ ಅರ್ಪಿತ್ ಬಂಧನಕ್ಕೆ ಬಲೆ ಬೀಸಿ ಹುಡುಕಾಡ್ತಿದ್ದ ಪೊಲೀಸರಿಗೆ ಅರ್ಪಿತ್ ಸ್ನೇಹಿತ ಆತನ ತಾಯಿಗೆ ಕರೆ ಮಾಡ್ತಿದ್ದಂತೆ ಮಹತ್ವದ ಸುಳಿವು ಸಿಕ್ಕಿದ್ದು, ವಿಜಯವಾಡದಲ್ಲಿ ತಲೆಮರೆಸಿಕೊಂಡಿದ್ದ ಅರ್ಪಿತ್ ನ ಚಲನವಲನ ಗಮನಿಸಿ ಕನ್ಫರ್ಮ್ ಆಕ್ತಿದ್ದಂತೆ ಲಾಕ್ ಮಾಡಿ ಬೆಂಗಳೂರಿಗೆ ಕರೆತಂದಿದ್ದಾರೆ. ಅನುಮಾನ ಬರದಂತೆ, ಪೊಲೀಸರಕೈಗೆ ಸಿಗದಂತೆ ಎಷ್ಟೇಲ್ಲಾ ಸರ್ಕಸ್ ಮಾಡಿದ್ದರು, ಹಂತಕ ಪಾಗಲ್ ಪ್ರೇಮಿ ಅರ್ಪಿತ್ ಗುರ್ಜಾಲ್ ನನ್ನ ಸೆರೆಹಿಡಿಯುವಲ್ಲಿ ಕೊನೆಗೂ ಜೀವನ್ ಭೀಮಾ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.