AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore News: ಅನುಮಾನಸ್ಪದ ರೀತಿಯಲ್ಲಿ ಫೈನಾನ್ಸ್ ಕಂಪನಿಯ ಬಿಲ್ ಕಲೆಕ್ಟರ್​ನ ಶವ ಪತ್ತೆ

ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಬಳಿ 21 ವರ್ಷದ ಕೊಳಗಟ್ಟ ಗ್ರಾಮದ ಅರುಣ್ ಕುಮಾರ್ ಎಂಬಾತನ ಶವ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.

Mysore News: ಅನುಮಾನಸ್ಪದ ರೀತಿಯಲ್ಲಿ ಫೈನಾನ್ಸ್ ಕಂಪನಿಯ ಬಿಲ್ ಕಲೆಕ್ಟರ್​ನ ಶವ ಪತ್ತೆ
ಹುಣಸೂರು ತಾಲೂಕಿನಲ್ಲಿ ಅನುಮಾನಸ್ಪದ ರೀತಿಯಲ್ಲಿ ಶವ ಪತ್ತೆ
Follow us
ರಾಮ್​, ಮೈಸೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 05, 2023 | 9:53 AM

ಮೈಸೂರು: ಜಿಲ್ಲೆಯ ಹುಣಸೂರು(Hunsur) ತಾಲೂಕಿನ ಬಿಳಿಕೆರೆ ಗ್ರಾಮದ ಬಳಿ 21 ವರ್ಷದ ಕೊಳಗಟ್ಟ ಗ್ರಾಮದ ಅರುಣ್ ಕುಮಾರ್ ಎಂಬಾತನ ಶವ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಇತ ಖಾಸಗಿ ಫೈನಾನ್ಸ್ ಕಂಪನಿ(Finance Company)ಯಲ್ಲಿ ಬಿಲ್ ಕಲೆಕ್ಟರ್ ಆಗಿ, ಕೆಲಸ ಮಾಡುತ್ತಿದ್ದ. ನಿನ್ನೆ(ಜು.4) ಮ್ಯಾನೇಜರ್ ಕರೆಯುತ್ತಿದ್ದಾರೆಂದು ಮನೆಯಿಂದ ಹೋಗಿದ್ದ ಅರುಣ್, ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಹುಡುಕಾಟ ಕುಟುಂಬಸ್ಥರು, ಸ್ನೇಹಿತರು ಹುಡುಕಾಟ ಆರಂಭಿಸಿದ್ದರು. ಬಳಿಕ ಅರುಣ್​ ಶವ ಕೆರೆ ಬಳಿ ಸಿಕ್ಕಿದ್ದು, ಯಾರೋ ಕೊಲೆ ಮಾಡಿ ಶವವನ್ನ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಿಳಿಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆಯಿಂದಾಗಿ ನೀರಿನಲ್ಲಿ ಕಾಲು ಜಾರಿ ಬಿದ್ದು ವೃದ್ಧೆ ಸಾವು

ಉತ್ತರ ಕನ್ನಡ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ಇಂದು(ಜು.5) ಈ ಮೂರು ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅದರಂತೆ ಇದೀಗ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ಅರಗಾದಲ್ಲಿ ಮಳೆಯಿಂದ ಮನೆ ಅಂಗಳದಲ್ಲಿ ನೀರು ತುಂಬಿದ್ದು, ವೃದ್ದ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ತಾರಮತಿ ನಾಯ್ಕ (75)ಮೃತ ಮಹಿಳೆ. ಮನೆಯ ಅಂಗಳದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಮೃತರಾಗಿದ್ದಾರೆ.

ಇದನ್ನೂ ಓದಿ: ರಾಜಕಾಲುವೆಯಲ್ಲಿ ಶವ ಪತ್ತೆ ಪ್ರಕರಣ; ಪಟಾಕಿ ಖರೀದಿಸಿ ಬರ್ತೀನಿ ಎಂದು ಹೋದ ಯುವಕನ ಬರ್ಬರ ಹತ್ಯೆ

ಉಡುಪಿಯಲ್ಲಿ ರಜೆ ಘೋಷಣೆ

ಇನ್ನು ಕರಾವಳಿ ಜಿಲ್ಲೆಗಳಲ್ಲೊಂದಾದ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನಲೆ ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳು, ಪಿಯು ಕಾಲೇಜಿಗೆ ಇಂದು ರಜೆ ನೀಡಿ ಉಡುಪಿ ಡಿಸಿ ಕೂರ್ಮಾರಾವ್‌ ಆದೇಶಿಸಿದ್ದರು. ಇನ್ನು ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೂಡ ಭಾರಿ ಮಳೆ ಹಿನ್ನೆಲೆ ಜಿಲ್ಲೆಯಾದ್ಯಂತ ನಿನ್ನೆಯೇ ರಜೆ ಘೋಷಣೆ ಮಾಡಲಾಗಿತ್ತು. ಇಂದು ಕೂಡ ಮಳೆ ಮುಂದುವರಿದ ಕಾರಣ ರಜೆಯನ್ನ ವಿಸ್ತರಿಸಲಾಗಿದೆ. ಎಂದು ದಕ್ಷಿಣ ಕನ್ನಡ ಡಿಸಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:41 am, Wed, 5 July 23