ಇನ್ಸ್ಟಾಗ್ರಾಂನಲ್ಲಿ ಪರಿಚಯವಾದವಳನ್ನು ಭೇಟಿಯಾಗಲು ಬಂದ ವಿದ್ಯಾರ್ಥಿ, ಆತನನ್ನೇ ಕಿಡ್ನ್ಯಾಪ್ ಮಾಡಿ 50 ಲಕ್ಷಕ್ಕೆ ಬೇಡಿಕೆ ಇಟ್ಟ ಅಪ್ರಾಪ್ತ ಬಾಲಕಿ
ನಿವೃತ್ತ ಪಶುವೈದ್ಯರ ಮೊಮ್ಮಗನನ್ನು ಅಪಹರಿಸಿ ಬಾಲಕಿಯೊಬ್ಬಳು 50 ಲಕ್ಷ ರೂ. ಗೆ ಬೇಡಿಕೆ ಇಟ್ಟಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.
ನಿವೃತ್ತ ಪಶುವೈದ್ಯರ ಮೊಮ್ಮಗನನ್ನು ಅಪಹರಿಸಿ ಬಾಲಕಿಯೊಬ್ಬಳು 50 ಲಕ್ಷ ರೂ. ಗೆ ಬೇಡಿಕೆ ಇಟ್ಟಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ. ಅಪಹರಣಕ್ಕೊಳಗಾದವನು ಡಿಪ್ಲೊಮಾ ವಿದ್ಯಾರ್ಥಿ, ಆತ ಇನ್ಸ್ಟಾಗ್ರಾಂನಲ್ಲಿನಲ್ಲಿ ಬಾಲಕಿಯನ್ನು ಭೇಟಿಯಾಗಿದ್ದ, ಆಕೆಯನ್ನು ಭೇಟಿ ಮಾಡಲು ಗಯಾದಿಂದ ಪಾಟ್ನಾಗೆ ಬಂದಿದ್ದ, ಆಗ ಬಾಲಕಿ ಆತನನ್ನು ಅಪಹರಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ.
ಈ ಘಟನೆ ಕುರಿತು ಕುಟುಂಬದವರು ಪೊಲೀಸರಿಗೆ ದೂರು ನೀಡಿ, ಎಫ್ಐಆರ್ ದಾಖಲಿಸಿದ್ದರು. ವಿಷಯದ ಗಂಭೀರತೆಯನ್ನು ಅರಿತ ಎಸ್ಎಸ್ಪಿ ಆಶಿಶ್ ಭಾರ್ತಿ ಅವರು ಬೆಳಗಂಜ್ ಪೊಲೀಸ್ ಠಾಣೆಗೆ ಆಗಮಿಸಿ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಂಪೂರ್ಣ ತನಿಖೆ ನಡೆಸಿದ್ದಾರೆ.
ರಿಷಭ್ ಕುಮಾರ್ ಬೈಕ್ನಲ್ಲಿ ಪಾಟ್ನಾಗೆ ಹೋಗಿದ್ದರು, ರಿಷಬ್ ಮೊಬೈಲ್ ಲೊಕೇಷನ್ ಅಲ್ಲಿಯೇ ತೋರಿಸುತ್ತಿತ್ತು. ಶನಿವಾರ ಬೆಳಗ್ಗೆ 7 ಗಂಟೆಗೆ ರಿಷಬ್ ಮೊಬೈಲ್ನಿಂದ ಕುಟುಂಬ ಸದಸ್ಯರಿಗೆ ಕರೆ ಬಂದಿತ್ತು, ನಿಮ್ಮ ಮಗ ಜೀವಂತ ಬೇಕೆಂದರೆ 50 ಲಕ್ಷ ರೂ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆತನ ಸ್ನೇಹಿತರ ಬಳಿ ಮಾತನಾಡಿದಾಗ ರಿಷಬ್ ಇನ್ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳನ್ನು ಭೇಟಿಯಾಗಿದ್ದ, ಆಕೆಯನ್ನು ಬೇಟಿಯಾಗಲು ಹೋಗಿದ್ದಾಗಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ವಿಪರೀತ ಸಾಲ, ದಿನ ಬೆಳಗಾದರೆ ನೂರಾರು ಫೋನ್ಕಾಲ್ಗಳು, ಅಪಹರಣ ನಾಟಕವಾಡಿ ತಂದೆ ಬಳಿ ಹಣಕ್ಕೆ ಬೇಡಿಕೆ ಇಟ್ಟ
ರಿಷಭ್‌ನ ಮೊಬೈಲ್ ಫೋನ್ ಅನ್ನು ಟ್ರೇಸ್ ಮಾಡುವುದರಿಂದ ಪಾಟ್ನಾದ ಸಂಪತ್‌ಚಕ್‌ನಲ್ಲಿ ಅವನ ಕೊನೆಯ ಸ್ಥಳವನ್ನು ತೋರಿಸಲಾಯಿತು. ಬಳಿಕ ಫೋನ್ ಸ್ವಿಚ್ ಆಫ್ ಆಗಿತ್ತು. ಬಾಲಕಿಯನ್ನು ಪಾಟ್ನಾದ ಗಾರ್ಡನಿಬಾಗ್‌ನಲ್ಲಿ ಬಂಧಿಸಲಾಯಿತು ಮತ್ತು ಪೊಲೀಸರು ಆಕೆ ಅಪ್ರಾಪ್ತ ವಯಸ್ಕಳು ಎಂಬುದು ತಿಳಿದುಬಂದಿದೆ.
ಆಕೆಯ ಸುಳಿವು ಅನುಸರಿಸಿ, ರಿಷಬ್‌ನ ಅಪಹರಣಕ್ಕೆ ಸಹಾಯ ಮಾಡಿದ ಆಕೆಯ ಮೂವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ