ವಿಪರೀತ ಸಾಲ, ದಿನ ಬೆಳಗಾದರೆ ನೂರಾರು ಫೋನ್ಕಾಲ್ಗಳು, ಅಪಹರಣ ನಾಟಕವಾಡಿ ತಂದೆ ಬಳಿ ಹಣಕ್ಕೆ ಬೇಡಿಕೆ ಇಟ್ಟ
ವಿಪರೀತ ಸಾಲ ಮಾಡಿಕೊಂಡು ತೀರಿಸಲಾಗದೆ ಒದ್ದಾಡುತ್ತಿದ್ದ ವ್ಯಕ್ತಿಯೊಬ್ಬ, ತಾನೇ ಅಪಹರಣವಾಗಿದ್ದೇನೆ ಎಂದು ನಾಟಕವಾಗಿ ತಂದೆಯ ಬಳಿ ಹಣಕ್ಕೆ ಬೇಡಿಕೆಯಿಟ್ಟ ಘಟನೆ ಮುಂಬೈನಲ್ಲಿ ನಡೆದಿದೆ.
ವಿಪರೀತ ಸಾಲ ಮಾಡಿಕೊಂಡು ತೀರಿಸಲಾಗದೆ ಒದ್ದಾಡುತ್ತಿದ್ದ ವ್ಯಕ್ತಿಯೊಬ್ಬ, ತಾನೇ ಅಪಹರಣವಾಗಿದ್ದೇನೆ ಎಂದು ನಾಟಕವಾಗಿ ತಂದೆಯ ಬಳಿ ಹಣಕ್ಕೆ ಬೇಡಿಕೆಯಿಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. ಸಾಲವನ್ನು ತೀರಿಸಲು ತಂದೆಯ ಬಳಿ ಸುಲಿಗೆ ಮಾಡಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಜಿತೇಂದ್ರ ಜೋಷಿ ಎಂದು ಗುರುತಿಸಲಾಗಿದೆ ಎಂದು ಮುಂಬೈ ಉಪ ಪೊಲೀಸ್ ಆಯುಕ್ತ ಅಜಯ್ ಬನ್ಸಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಿತೇಂದ್ರ ಜೋಶಿ ಎಂಬ 27 ವರ್ಷದ ವ್ಯಕ್ತಿ ತಾನೇ ಅಪಹರಣವಾಗಿದ್ದೇನೆಂದು ಸುಳ್ಳು ಹೇಳಿ ತಂದೆಯ ಬಳಿ 5 ಲಕ್ಷ ರೂ ಬೇಡಿಕೆ ಇಟ್ಟಿದ್ದ. ಜೋಶಿ ಅವರ ಪತ್ನಿಗೆ ವಾಟ್ಸ್‌ಆ್ಯಪ್ ಕರೆ ಬಂದಿದ್ದು, ಪತಿಯನ್ನು ಅಪಹರಿಸಲಾಗಿದೆ ಮತ್ತು 5 ಲಕ್ಷ ರೂ. ಪರಿಹಾರ ನೀಡುವಂತೆ ಬೆದರಿಕೆ ಹಾಕಲಾಗಿದೆ ಎಂದು ತಿಳಿಸಲಾಗಿದೆ. ಆರೋಪಿಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮತ್ತಷ್ಟು ಓದಿ: ವೈರಲ್ ನ್ಯೂಸ್: ಕಾಲೇಜಿನಿಂದ ಬರುವಾಗ ಯುವತಿಯ ಅಪಹರಣ, ಆ ಮೇಲೆ ಆಗಿದ್ದೇನು?
12 ಗಂಟೆಯೊಳಗೆ ಜೋಶಿ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ಆತ ತನ್ನ ತಂದೆಯಿಂದ ಹಣ ಪಡೆಯಲು ಅಪಹರಣ ನಾಟಕವಾಡಿದ್ದಾಗಿ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯದಿಂದ ಜೂನ್ 3ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ