ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಸರಬರಾಜುಗಾರರ ಬಂಧನ

|

Updated on: Nov 17, 2019 | 12:55 PM

ಬೆಂಗಳೂರು: ಸಿಸಿಬಿ ಪೊಲೀಸರು ಮೂವರು ಅಂತರ್​ ರಾಜ್ಯ ಮಾದಕ ವಸ್ತು ಸರಬರಾಜುಗಾರರನ್ನು ಬಂಧಿಸಿದ್ದಾರೆ. ಶಾಖೀರ್, ನಜೀಲ್, ಮಹಮ್ಮದ್ ಜಿಯಾದ್ ಬಂಧಿತ ಆರೋಪಿಗಳು. ಆಂಧ್ರದ ಡ್ರಗ್ ಪೆಡ್ಲರ್​ಗಳ ಮೂಲಕ ಖರೀದಿಸಿ ಬೆಂಗಳೂರಿಗೆ ಮಾದಕ ವಸ್ತುಗಳನ್ನು ಆರೋಪಿಗಳು ತರುತ್ತಿದ್ದರು. ಬಂಧಿತ ಆರೋಪಿಗಳಿಂದ 1 ಕೆ.ಜಿ 125 ಗ್ರಾಂ ಹ್ಯಾಶಿಶ್ ಆಯಿಲ್, 2 ಕೆ.ಜಿ 200 ಗ್ರಾಂ‌ಂ ಗಾಂಜಾ, 12 ಗ್ರಾಂ ಎಂಡಿಎಂಎ, 3 ಮೊಬೈಲ್, 1 ಕಾರು, 2 ಬೈಕು ಜಪ್ತಿ ಮಾಡಿದ್ದಾರೆ. ಒಟ್ಟಾರೆಯಾಗಿ ಸುಮಾರು 10 ಲಕ್ಷ ಮೌಲ್ಯದ […]

ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಸರಬರಾಜುಗಾರರ ಬಂಧನ
Follow us on

ಬೆಂಗಳೂರು: ಸಿಸಿಬಿ ಪೊಲೀಸರು ಮೂವರು ಅಂತರ್​ ರಾಜ್ಯ ಮಾದಕ ವಸ್ತು ಸರಬರಾಜುಗಾರರನ್ನು ಬಂಧಿಸಿದ್ದಾರೆ. ಶಾಖೀರ್, ನಜೀಲ್, ಮಹಮ್ಮದ್ ಜಿಯಾದ್ ಬಂಧಿತ ಆರೋಪಿಗಳು. ಆಂಧ್ರದ ಡ್ರಗ್ ಪೆಡ್ಲರ್​ಗಳ ಮೂಲಕ ಖರೀದಿಸಿ ಬೆಂಗಳೂರಿಗೆ ಮಾದಕ ವಸ್ತುಗಳನ್ನು ಆರೋಪಿಗಳು ತರುತ್ತಿದ್ದರು.

ಬಂಧಿತ ಆರೋಪಿಗಳಿಂದ 1 ಕೆ.ಜಿ 125 ಗ್ರಾಂ ಹ್ಯಾಶಿಶ್ ಆಯಿಲ್, 2 ಕೆ.ಜಿ 200 ಗ್ರಾಂ‌ಂ ಗಾಂಜಾ, 12 ಗ್ರಾಂ ಎಂಡಿಎಂಎ, 3 ಮೊಬೈಲ್, 1 ಕಾರು, 2 ಬೈಕು ಜಪ್ತಿ ಮಾಡಿದ್ದಾರೆ. ಒಟ್ಟಾರೆಯಾಗಿ ಸುಮಾರು 10 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.