ಚಾಮರಾಜಪೇಟೆಯ ಕಿಷ್ಕಿಂಧೆಯಿಂದ ಬೆಂಗಳೂರು CCB ಕಚೇರಿ ಸ್ಥಳಾಂತರ?

ಬೆಂಗಳೂರು: ತನಿಖೆ ನಡೆಸಲು ಸೂಕ್ತ ಜಾಗವಿಲ್ಲದ ಕಾರಣ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯನ್ನು ಬೇರೆಡೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಭಾಸ್ಕರ್ ರಾವ್,  ಡೋಂಟ್ ವರಿ ಸಿಸಿಬಿ ಕಚೇರಿ ಇಲ್ಲಿ ಇರಲ್ಲ ಎಂದು ಹೇಳಿದ್ದಾರೆ. ಸಿಸಿಬಿ ಕಚೇರಿಯನ್ನು ಶಿಫ್ಟ್​ ಮಾಡಲು ಆಯುಕ್ತ ಭಾಸ್ಕರ್ ರಾವ್ ಹಾಗೂ ಸಿಸಿಬಿ ಜಂಟಿ‌ ಆಯುಕ್ತ ಸಂದೀಪ್ ಪಾಟೀಲ್​ ಅವರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಸಿಬಿ ಕಚೇರಿ ಶಿಫ್ಟ್ ಜೊತೆಗೆ ಗುಜರಿ‌ ವಾಹನಗಳ ಕ್ರಷಿಂಗ್ ವ್ಯವಸ್ಥೆಗೂ ಸಿದ್ಧತೆ […]

ಚಾಮರಾಜಪೇಟೆಯ ಕಿಷ್ಕಿಂಧೆಯಿಂದ ಬೆಂಗಳೂರು CCB ಕಚೇರಿ ಸ್ಥಳಾಂತರ?

Updated on: Nov 30, 2019 | 1:46 PM

ಬೆಂಗಳೂರು: ತನಿಖೆ ನಡೆಸಲು ಸೂಕ್ತ ಜಾಗವಿಲ್ಲದ ಕಾರಣ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯನ್ನು ಬೇರೆಡೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಭಾಸ್ಕರ್ ರಾವ್,  ಡೋಂಟ್ ವರಿ ಸಿಸಿಬಿ ಕಚೇರಿ ಇಲ್ಲಿ ಇರಲ್ಲ ಎಂದು ಹೇಳಿದ್ದಾರೆ.

ಸಿಸಿಬಿ ಕಚೇರಿಯನ್ನು ಶಿಫ್ಟ್​ ಮಾಡಲು ಆಯುಕ್ತ ಭಾಸ್ಕರ್ ರಾವ್ ಹಾಗೂ ಸಿಸಿಬಿ ಜಂಟಿ‌ ಆಯುಕ್ತ ಸಂದೀಪ್ ಪಾಟೀಲ್​ ಅವರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಸಿಬಿ ಕಚೇರಿ ಶಿಫ್ಟ್ ಜೊತೆಗೆ ಗುಜರಿ‌ ವಾಹನಗಳ ಕ್ರಷಿಂಗ್ ವ್ಯವಸ್ಥೆಗೂ ಸಿದ್ಧತೆ ಮಾಡಲಾಗುತ್ತಿದೆ.

ಜೆ.ಪಿ. ಭವನ ಬಳಿಯ ಜಕ್ಕರಾಯನಕೆರೆಯ 3 ಎಕರೆ ಮೈದಾನದಲ್ಲಿ
ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಪಕ್ಷದ ಜೆ.ಪಿ. ಭವನ ಬಳಿಯ ಜಕ್ಕರಾಯನಕೆರೆಯ 3 ಎಕರೆ ಮೈದಾನದಲ್ಲಿ ಸಿಸಿಬಿ ಕಚೇರಿ ಶಿಫ್ಟ್ ಮಾಡುವ ಪ್ಲಾನ್ ಇದೆ. ಅಲ್ಲದೆ, ನಗರದ ಎಲ್ಲಾ ಠಾಣೆಗಳಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಪೊಲೀಸರು ಇದೇ ಮೈದಾನದಲ್ಲಿ ವಿಲೇವಾರಿ ಮಾಡುತ್ತಿದ್ದಾರೆ. ಹಾಗಾಗಿ ಇದೇ ಮೈದಾನದಲ್ಲಿ ಪರೇಡ್ ಗ್ರೌಂಡ್ ಹಾಗೂ ವಾಹನಗಳ ಹರಾಜು ಪ್ರಕ್ರಿಯೆ ನಡೆಸಲು ಪ್ಲಾನ್ ಮಾಡಲಾಗುತ್ತಿದೆ ಎನ್ನಲಾಗಿದೆ.

Published On - 1:37 pm, Sat, 30 November 19