ಬೆಂಗಳೂರು: ಮನೆಗೆ ನುಗ್ಗಿ ಪ್ರಿಯತಮೆಯನ್ನೇ ಕೊಂದ ಪಾಗಲ್ ಪ್ರೇಮಿ, ಕಾರಣವೇನು?

|

Updated on: Mar 15, 2023 | 12:53 PM

ಪ್ರೀತಿಸಿದ ಹುಡುಗಿಯನ್ನ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಇಬ್ಬರು ಭೇಟಿಯಾಗಿದ್ದಾರೆ. ಬಳಿಕ ಇಬ್ಬರ ನಡುವೆ ಜಗಳವಾಗಿ ಪ್ರಿಯಕರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಬೆಂಗಳೂರು: ಮನೆಗೆ ನುಗ್ಗಿ ಪ್ರಿಯತಮೆಯನ್ನೇ ಕೊಂದ ಪಾಗಲ್ ಪ್ರೇಮಿ, ಕಾರಣವೇನು?
ಆರೋಪಿ ಮನೋಜ್​
Follow us on

ಬೆಂಗಳೂರು: ಪ್ರೀತಿಸಿದ ಹುಡುಗಿಯನ್ನ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಾಲಿನಿ ಎಂಬಾಕೆಯೇ ಕೊಲೆಯಾದ ಯುವತಿ, ಶಾಲಿನಿ ಮತ್ತು ಆಕೆಯ ಪ್ರಿಯಕರ ಆರೋಪಿ ಮನೋಜ್ ಇಬ್ಬರು ಪ್ರೀತಿ ಮಾಡುತ್ತಿದ್ದರು. ಆದರೆ ಶಾಲಿನಿಗೆ ಬೇರೆ ಮದುವೆ ಫಿಕ್ಸ್ ಮಾಡಲಾಗಿತ್ತು. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಕೂಡ ಆಗಿತ್ತು. ನಿನ್ನೆ(ಮಾ.14) ಸಂಜೆ ಶಾಲಿನಿ ನಿವಾಸಕ್ಕೆ ಬಂದಿದ್ದ ಮನೋಜ್. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಇಬ್ಬರು ಭೇಟಿಯಾಗಿದ್ದಾರೆ. ಈ ವೇಳೆ ಮನೋಜ್ ‘ನೀನು ಒಪ್ಪಿಕೊಂಡಿದ್ದಿಯಾ ಮನೆಯವರು ತೋರಿಸಿದ ಹುಡುಗನನ್ನ ಎಂದು ಗಲಾಟೆ ಮಾಡಿದ್ದನಂತೆ. ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಅಲ್ಲಿಂದ ಕೆ.ಪಿ ಅಗ್ರಹಾರದ ಮನೆಗೆ ಹೋಗಿದ್ದ ಮನೋಜ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಮನೋಜ್​ನನ್ನು ಕುಟುಂಬದವರು ಅಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇತ್ತ ಶಾಲಿನಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಕೆಯ ಕುಟುಂಬದವರು ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ. ಇನ್ನು ರಾತ್ರಿಯೇ ಮೃತ ಶಾಲಿನಿಯನ್ನ ಅಸ್ಪತ್ರೆಗೆ ದಾಖಲು ಮಾಡಿಸಿದ್ದ ಕುಟುಂಬ, ಈ ವೇಳೆ ಯುವತಿಯ ಗುಪ್ತಾಂಗದಲ್ಲಿ ರಕ್ತಸ್ರಾವ ಹಾಗೂ ಗಾಯದ ಗುರುತು ಪತ್ತೆಯಾಗಿದೆ. ಸದ್ಯ ವೈದ್ಯಕೀಯ ಪರೀಕ್ಷೆ ವೇಳೆ ಬಲವಂತದ ಲೈಂಗಿಕ ಕ್ರಿಯೆ ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಹದಿನಾಲ್ಕು ವರ್ಷಗಳಿಂದ ಕಳ್ಳತನ, 24 ಕೇಸ್, ಮತ್ತೆ ಕಳ್ಳತನ, ಅರೋಪಿ ಅರೆಸ್ಟ್

ಬೆಂಗಳೂರು: ಹದಿನಾಲ್ಕು ವರ್ಷಗಳಿಂದ ಕಳ್ಳತನ ಮಾಡಿ 24 ಕೇಸ್​ನಲ್ಲಿ ವಾರೆಂಟ್ ಕೂಡ ಬಾಕಿ ಇದ್ದು ಮತ್ತೆ ಕಳ್ಳತನ ಮಾಡುತ್ತಿದ್ದ ಅರೋಪಿಗಳಾದ ಇಮ್ರಾನ್ ಅಲಿಯಾಸ್ ಚೋರ್ ಇಮ್ರಾನ್ ಮತ್ತು ನೂರುಲ್ಲಾ ಮುಲ್ಲಾನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಬಳಿಯಿಂದ ಕಳ್ಳತನ ಮಾಡಿದ್ದ ಸುಮಾರು 70 ಲಕ್ಷ ಮೌಲ್ಯದ ಚಿನ್ನಾಭರಣಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಇವರ ಮೇಲೆ ಹಲಸೂರು ಗೇಟ್, ಕೆ ಪಿ ಅಗ್ರಹಾರ, ಎಸ್ ಆರ್ ನಗರ, ಕೋಣನಕುಂಟೆ, ಕೆ.ಆರ್​.ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳು ಬಯಲಿಗೆ ಬಂದಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ