Bengaluru: ​ಗಾಡಿ ಕಳೆದೋಗಿದೆ ಎಂದು ದೂರು ನೀಡಿದ ಕಾನ್​ಸ್ಟೇಬಲ್: ಹೆಡ್​​​ ಕಾನ್​ಸ್ಟೇಬಲ್ ಪತ್ನಿ ಬಳಿ ವಾಹನ ಪತ್ತೆ, ಇಲ್ಲಿದೆ ಪೊಲೀಸರ ಕಳ್ಳಾಟ

|

Updated on: Mar 04, 2023 | 8:37 AM

ಪೊಲೀಸರೊಬ್ಬರು ಒಬ್ಬರು ಕಳ್ಳತನವಾದ ಗಾಡಿಯನ್ನು ಹರಾಜಿನಲ್ಲಿ ಕಡಿಮೆ ಹಣಕ್ಕೆ ತೆಗೆದುಕೊಂಡು, ಕಳುವಾಗಿರುವ ಗಾಡಿಯ ಬಗ್ಗೆ ಮಾಹಿತಿಯನ್ನೇ ನೀಡದೆ ಕರ್ತವ್ಯ ಲೋಪ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bengaluru: ​ಗಾಡಿ ಕಳೆದೋಗಿದೆ ಎಂದು ದೂರು ನೀಡಿದ ಕಾನ್​ಸ್ಟೇಬಲ್: ಹೆಡ್​​​ ಕಾನ್​ಸ್ಟೇಬಲ್ ಪತ್ನಿ ಬಳಿ ವಾಹನ ಪತ್ತೆ, ಇಲ್ಲಿದೆ ಪೊಲೀಸರ ಕಳ್ಳಾಟ
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: ವಾಹನಗಳು ಕಳ್ಳತನವಾದರೇ ವಾಹನ ಸವಾರರು ಕಂಪ್ಲೆಂಟ್‌ ಮಾಡಿ ಸುಮ್ಮನಾಗಿ ಬಿಡುತ್ತಾರೆ.‌ ಇದನ್ನೆ ಬಂಡಾವಾಳ‌ ಮಾಡಿಕೊಂಡಂತಹ ಪೊಲೀಸರೊಬ್ಬರು ಒಬ್ಬರು ಕಳ್ಳತನವಾದ ಗಾಡಿಯನ್ನು ಹರಾಜಿನಲ್ಲಿ ಕಡಿಮೆ ಹಣಕ್ಕೆ ತೆಗೆದುಕೊಂಡು, ಕಳುವಾಗಿರುವ ಗಾಡಿಯ ಬಗ್ಗೆ ಮಾಹಿತಿಯನ್ನೇ ನೀಡದೆ ಕರ್ತವ್ಯ ಲೋಪ ಎಸಗಿದ್ದಾರೆ.

ಹೌದು, ಜನರಿಗೆ ಸಮಸ್ಯೆಯಾದರೇ ನ್ಯಾಯಕ್ಕೊಸ್ಕರ ಪೊಲೀಸರ ಬಳಿ ಹೋಗುತ್ತಾರೆ. ಆದರೆ ಪೊಲೀಸರೇ ಜನರಿಗೆ ಮೋಸ ಮಾಡದರೇ ಜನರ ಪಾಡೇನು ಹೇಳಿ. ‌2 ವರ್ಷಗಳ ಹಿಂದೆ ನಾಗಾರಾಜ್ ಎಂಬುವವರು ತಮ್ಮ ಗಾಡಿ ಡಿಡೋ ಹೋಂಡಾ ಕಳೆದು ಹೋಗಿರುವ ಬಗ್ಗೆ ಕಮ್ಮಗೊಂಡನಹಳ್ಳಿಯ ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ನೀಡಿದ ಬಳಿಕ ಗಾಡಿ‌ ಸಿಕ್ಕಿದ್ಯ ಇಲ್ವ ಅಂತ ಗಾಡಿ ಮಾಲೀಕ ನಾಗಾರಾಜು ಅಗಾಗ ವಿಚಾರಿಸುತ್ತಿದ್ದರು. ಆಗ ಗಂಗಮ್ಮಗುಡಿ ಪೋಲಿಸರು, ಗಾಡಿ ಸಿಗುತ್ತೆ ಅಂತ ದಿನ ಮುಂದೂಡಿಕೆ ಮಾಡಿತ್ತಲೇ ಇದ್ದರು. ಅದಾದ ನಂತರ 4 ತಿಂಗಳಿಗೆ ಗಾಡಿ ಸಿಕ್ಕಿಲ್ಲ ಎಫ್​ಐಆರ್ ದಾಖಾಲಿಸಿ ಸಿ ರಿಪೋರ್ಟ್ ದಾಖಾಲಿಸಿ ಅಂತ ಪೊಲೀಸರು ಹೇಳಿದರಂತೆ. ‌ಆದರೆ ಗಾಡಿ‌ ಮಾಲೀಕ ನಾಗಾರಾಜ್ ಎಫ್​ಐಆರ್ ಮಾತ್ರ ದಾಖಲಿಸಿ ಗಾಡಿ ಸಿಗಬಹುದು ಅಂತ ಸಿ ರಿಪೋರ್ಟ್ ದಾಖಾಲು ಮಾಡದೆ ಎರಡು ವರ್ಷಗಳಿಂದ ಕಾಯುತ್ತಿದ್ದರು.‌

ದೇ ವೇಳೆ ಟ್ರಾಫಿಕ್ ಇಲಾಖೆ ಕಳೆದ ತಿಂಗಳು ಶೇ 50 ರಷ್ಟು ದಂಡ ಕಟ್ಟುವುದಕ್ಕೆ ಆಫರ್​​ ನೀಡಿದಾಗ ಗಾಡಿ‌ಮಾಲೀಕ ನಾಗಾರಾಜು ಸುಮ್ಮನೇ ಗಾಡಿಯ ಪೈನ್‌ ಎಷ್ಟಿದೆ ಅಂತ ನೋಡಲು ಹೋದಾಗ ತಮ್ಮ ಹೋಂಡಾ ಗಾಡಿಯನ್ನು ಒಬ್ಬ ಮಹಿಳೆ ಓಡಿಸುತ್ತಿದ್ದು, ಟ್ರಾಫಿಕ್ ರೂಲ್ಸ್ ಪಾಲಿಸದೇ ದಂಡ ಹಾಕಿರುವುದು ಪತ್ತೆಯಾಗಿದೆ. ಇದರಿಂದ ಆಶ್ಚರ್ಯಗೊಂಡ ಮಾಲಿಕ, ನನ್ನ ಗಾಡಿ ಕಳದಿದೆ ಆದ್ರೂ ದಂಡ ಹೇಗೆ ಬಿದ್ದಿದೆ ಎಂಬ ಅನುಮಾನ ಮೂಡಿದೆ. ಆಗ ಪ್ರಕರಣದ ಜಾಡು ಹಿಡಿದು ಹೊರಟಾಗ ಬಯಲಾಗಿದೆ ಹೆಡ್ ಕಾನ್ಸ್ ಸ್ಟೇಬಲ್ ಕೈವಾಡ.

ಹೌದು, ಶೇ 50ರಷ್ಟು ದಂಡ ಕಟ್ಟುವುದಕ್ಕೆ ನಾಗಾರಾಜು ಮುಂದಾದಾಗ ಹೆಲ್ಮೆಟ್ ಹಾಕದೆ ಇರುವ ಪೋಟೋ ಒಂದು ಇತ್ತು. ಪ್ರಕರಣವನ್ನು ಪತ್ತೆ ಮಾಡಲು ಮುಂದಾದಾಗಾ ಪೊಲೀಸ್​​ ಕ್ವಾಟರ್ಸ್​​​ನಲ್ಲಿ ರಾತ್ರಿ ನಿಲ್ಲಿಸಿರುವುದು ಪತ್ತೆಯಾಗಿದೆ. ಯಾರು ಆ ಪೊಲೀಸ್ ಅಂತ ನೋಡಿದಾಗಾ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಹೆಡ್​ ಕಾನ್ಸ್​ಸ್ಟೇಬಲ್ ಎನ್ನುವುದು ತಿಳಿದುಬಂದಿದೆ. ಇನ್ನು ನಾಗಾರಾಜ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಹೋಗಿ, ದೂರುದಾರ ನಾಗಾರಾಜ್ ವಿಚಾರಿಸಿದಾಗ ಪೊಲೀಸ್ ಇನ್ಸ್ ಸ್ಪೇಕ್ಟರ್ ರಜೀವ್ ಹಾಗೂ ಹೆಡ್ ಕಾನ್ಸ್ ಸ್ಟೇಬಲ್ ರವಿ ದಬಾಯಿಸಿದ್ದಾರೆ. ಆಗ ಪೋಟೋ ತೋರಿಸಿದ್ದಕ್ಕೆ ಈ ಗಾಡಿ ಹಾರಾಜಾಗಿದೆ‌‌. ಹೆಡ್​ ಕಾನ್ಸ್​ಸ್ಟೇಬಲ್​​ ರವಿ ಅವರೇ ಗಾಡಿಯನ್ನು ಖರೀದಿಸಿದ್ದಾರೆ ಅಂತ ಹೇಳಿದ್ದಾರೆ.

ಗಾಡಿಯ ಬಗ್ಗೆ ಮಾಲೀಕರಿಗೆ ಮಾಹಿತಿಯನ್ನು ಕೊಡದೆ ಹೇಗೆ ಹಾರಾಜು ಹಾಕಿದ್ರಿ ಅಂತ ನಾಗಾರಾಜು ಪ್ರಶ್ನಿಸಿದ್ದಕ್ಕೆ ಗಾಡಿ ಈಗ ರವಿಯವರ ಪತ್ನಿ ಹೆಸರಿನಲ್ಲಿದೆ ಅಂದಿದ್ದಾರೆ. ಈ ವೇಳೆ ನಾಗಾರಾಜು ಆರ್​​​ಟಿಒ ಅಧಿಕಾರಿ ಪ್ರಶ್ನಿಸಿದಾಗ ಸುಳ್ಳು ಮಾಹಿತಿ ನೀಡಿ ಗಾಡಿಯನ್ನು ರಿಜಿಸ್ಟರ್ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಬಗ್ಗೆ ನಾಗಾರಾಜು ಪ್ರಶ್ನಿಸಿದಾಗ, ಹೆಡ್​ ಕಾನ್ಸ್​ಸ್ಟೇಬಲ್​​ ರವಿ ಗದರಿಸಿದ್ದಾರೆ. ಆಗ ನಾಗರಾಜು ನಾನು ಕೂಡ ಹೆಡ್​ ಕಾನ್ಸ್​ಸ್ಟೇಬಲ್, ಈ ಕುರಿತು‌ ನಾನು ಪೊಲೀಸ್​​ ಕಮಿಷನರ್ ಅವರಿಗೆ ದೂರು ನೀಡುತ್ತೇನೆ ಅಂದಾಗ ಹೆಡ್​ ಕಾನ್ಸ್​ಸ್ಟೇಬಲ್​​​ ರವಿ ಸಂದಾನಕ್ಕೆ ಮುಂದಾಗಿದ್ದು, ಹಾಗೇ ಹೆಂಡತಿ ಸಮೇತ ನಾಗಾರಾಜು ಅವರ ಮನೆಗೆ ಬಂದು ಗಾಡಿ ಕೊಟ್ಟುಹೋಗಿದ್ದಾರೆ.

ಕಾನ್ಸ್​ಸ್ಟೇಬಲ್ ನಾಗರಾಜು:-

ಆದರೆ ಪೊಲೀಸರು ರಕ್ಷಣೆ ಮಾಡಬೇಕು. ನಾನು ಕೂಡ ​ಕಾನ್ಸ್​ಸ್ಟೇಬಲ್, ನನ್ನನ್ನೇ ಹೀಗೆ ಆಟಾ ಆಡಿಸಿದವರು ಸಾಮಾನ್ಯ ಜನರಿರನ್ನು ಎಷ್ಟರ ಮಟ್ಟಿಗೆ ಆಟಾ ಆಡಿಸಬಹದು. 2020 ರಲ್ಲಿ 85 ಸಾವಿರ ಕೊಟ್ಟು ಈ ಹೊಂಡಾ ಡಿಯೋ ಗಾಡಿಯನ್ನು ಖರೀದಿಸ್ವಿ. ಆದರೆ ಈ ಗಾಡಿಯನ್ನು ಕೇವಲ 4 ಸಾವಿರಕ್ಕೆ ಹೆಡ್​ ಕಾನ್ಸ್​ಸ್ಟೇಬಲ್​​​ ಖರೀದಿ ಮಾಡಿದ್ದಾರೆ. ಗಾಡಿಯ ಕಂಡಿಷನ್ ಸಹ ಹಾಳಾಗಿದೆ ಅಂತ ನಾಗಾರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣದ ಕುರಿತು ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರನ್ನು ಪ್ರಶ್ನಿಸಿದಕ್ಕೆ ನಾಗಾರಾಜು ಅವರ ವಿಚಾರದಲ್ಲಿ ಹೆಡ್​ ಕಾನ್ಸ್​ಸ್ಟೇಬಲ್​​​ ಹಾಗೂ ಇನ್ಸ್ ಸ್ಪೆಕ್ಟರ್ ಇಬ್ನರು ತಪ್ಪು ಮಾಡಿದ್ದಾರೆ. ಈ ಕುರಿತಾಗಿ ಪರಿಶೀಲನೆ ನಡೆಸಿ ಪೊಲೀಸ್​​ಆಯುಕ್ತರಿಗೆ ರಿಪೋರ್ಟ್ ನೀಡಿದ್ದೇವೆ. ಅವರು ಏನು ಕ್ರಮ ತೆಗದುಕೊಳ್ಳುತ್ತಾರೆ ಎಂದು ಕಾದುನೋಡಬೇಕು ಎಂದು ಮಾಹಿತಿ ನೀಡಿದರು.

ಒಟ್ಟಿನಲ್ಲಿ, ಎಲ್ಲ ಪೊಲೀಸ್​​ ಠಾಣೆಗಳಲ್ಲಿ ನೂರಾರು ಕಳ್ಳತನವಾಗಿರಿವ ಗಾಡಿಗಳು, ಸೀಜ್ ಮಾಡಿದ ಗಾಡಿಗಳನ್ನು ಸಲಾಗಿ ಜೋಡಿಸಿ ಇಟ್ಟಿರುತ್ತಾರೆ. ಸಾಮಾನ್ಯವಾಗಿ ಈ ಕಳ್ಳತನದ ಗಾಡಿಗಳಿಗೆ ಹಾರಾಜು ಕೂಗುವಾಗ ಪೊಲೀಸರು ಯಾರು ಕೂಡ ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತಿಲ್ಲ. ‌ಆದರೆ ಈ ಪ್ರಕರಣದಲ್ಲಿ ಹೆಡ್​ ಕಾನ್ಸ್​ಸ್ಟೇಬಲ್​​​ ರವಿ ಪಾಲ್ಗೊಂಡಿರುವುದಲ್ಲದೆ, ತಪ್ಪು ಮಾಹಿತಿ ನೀಡಿ ರಿಜಿಸ್ಟರ್ ಮಾಡಿಸಿಕೊಂಡು ಕರ್ತವ್ಯ ಲೋಪ ಎಸಗಿದ್ದು, ಪೋಲಿಸ್ ಆಯುಕ್ತರು ಏನು ಕ್ರಮ ತೆಗೆದುಕೊಳ್ತಾರೆ ಎಂದು ಕಾದುನೋಡಬೇಕಿದೆ.

ಪೂರ್ಣಿಮಾ ಟಿವಿ‌೯ ಬೆಂಗಳೂರು

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ