ಯುವಕನಿಗೆ ವಂಚನೆ, ಪೊಲೀಸರ ಬಲೆಗೆ ಬಿದ್ದ ಟಿಕ್ ಟಾಕ್ ಸುಂದರಿ
ಬೆಂಗಳೂರು: ಟಿಕ್ ಟಾಕ್ ಮೂಲಕ ಪರಿಚಯ ಮಾಡಿಕೊಂಡು ಲಕ್ಷಾಂತರ ರೂಪಾಯಿ ವಂಚಿಸಿದ್ದ ಟಿಕ್ ಟಾಕ್ ಸುಂದರಿ ಡಿ.ಜೆ.ಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ವಿಜಯ ಲಕ್ಷ್ಮೀ ಅಲಿಯಾಸ್ ಲಯನ್ ಲಕ್ಷ್ಮೀ ಬಂಧಿತ ಮಹಿಳೆ. ಟಿಕ್ ಟಾಕ್ ಮೂಲಕ ಶಿವಕುಮಾರ್ ಎಂಬಾತನನ್ನು ಪರಿಚಯ ಮಾಡಿಕೊಂಡಿದ್ದಳು. ನಂತರ ಶಿವಕುಮಾರ್ನನ್ನು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದಿದ್ದಾಳೆ. ಮುಂದೆ, ಹಣ ವಾಪಸ್ ನೀಡದೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಹಾಕಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೋಸ ಹೋದ ಯುವಕ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ದೂರು […]
Follow us on
ಬೆಂಗಳೂರು: ಟಿಕ್ ಟಾಕ್ ಮೂಲಕ ಪರಿಚಯ ಮಾಡಿಕೊಂಡು ಲಕ್ಷಾಂತರ ರೂಪಾಯಿ ವಂಚಿಸಿದ್ದ ಟಿಕ್ ಟಾಕ್ ಸುಂದರಿ ಡಿ.ಜೆ.ಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ವಿಜಯ ಲಕ್ಷ್ಮೀ ಅಲಿಯಾಸ್ ಲಯನ್ ಲಕ್ಷ್ಮೀ ಬಂಧಿತ ಮಹಿಳೆ.
ಟಿಕ್ ಟಾಕ್ ಮೂಲಕ ಶಿವಕುಮಾರ್ ಎಂಬಾತನನ್ನು ಪರಿಚಯ ಮಾಡಿಕೊಂಡಿದ್ದಳು. ನಂತರ ಶಿವಕುಮಾರ್ನನ್ನು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದಿದ್ದಾಳೆ. ಮುಂದೆ, ಹಣ ವಾಪಸ್ ನೀಡದೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಹಾಕಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೋಸ ಹೋದ ಯುವಕ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.