“ನನ್ನ ಸಾವಿಗೆ ಯುವತಿ ಕಾರಣ”; ಬಿಯರ್ ಬಾಟಲ್​ನಿಂದ ತಲೆಗೆ ಚಚ್ಚಿಕೊಂಡು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಪೊಲೀಸರ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಸರ್ಜಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಅಸ್ವಸ್ಥ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನನ್ನ ಸಾವಿಗೆ ಯುವತಿ ಕಾರಣ; ಬಿಯರ್ ಬಾಟಲ್​ನಿಂದ ತಲೆಗೆ ಚಚ್ಚಿಕೊಂಡು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಆತ್ಮಹತ್ಯೆಗೆ ಯತ್ನಿಸಿದ ಸುರೇಶ್ ಯುವತಿಯ ಜೊತೆ
Updated By: Rakesh Nayak Manchi

Updated on: Feb 10, 2023 | 2:30 PM

ಆನೇಕಲ್: ಪೊಲೀಸರ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆಗೆ ಯತ್ನಿಸಿದ (Suicide Attempt) ಘಟನೆ ಬೆಂಗಳೂರು ನಗರದ ಸರ್ಜಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಹುನ್ನಾರ ನಡೆದಿದೆ. ನನ್ನ ಸಾವಿಗೆ ಯುವತಿಯೇ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬಾಟಲ್​ನಲ್ಲಿ ತಲೆಗೆ ಚಚ್ಚಿಕೊಂಡು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಸುರೇಶ್ ಎಂಬಾತ ಹಲವು ದಿನಗಳಿಂದ ಕಾಡುಗೋಡಿ ಸಮೀಪದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಯುವತಿಯೂ ಪ್ರೀತಿಯ ಬಲೆಗೆ ಬಿದ್ದಿದ್ದಳು. ಆದರೆ ಇಬ್ಬರ ಪ್ರೀತಿ ವಿಚಾರ ಯುವತಿಯ ಪೋಷಕರಿಗೆ ಗೊತ್ತಾಗಿ ಪೊಲೀಸರಿಗೆ ಹೇಳಿಸಿ ಕರೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನನ್ನ ಮೇಲೆ ಅತ್ಯಾಚಾರ ಪ್ರಕರಣ ಹಾಕಿಸಲು ಹುನ್ನಾರ ನಡೆದಿದೆ. ಠಾಣೆಗೆ ಆಗಮಿಸುವಂತೆ ಬೆದರಿಸುತ್ತಿರುವುದಾಗಿ ಇನ್​ಸ್ಟಾಗ್ರಾಮ್ (Instagram) ಖಾತೆಯಲ್ಲಿ ಸುರೇಶ್ ಆರೋಪಿಸಿದ್ದಾನೆ.

ಇದನ್ನೂ ಓದಿ: Cheating Case: ಐದು ವರ್ಷದಿಂದ ಪರಾರಿಯಾಗಿದ್ದ ಕೇರಳ ಮೂಲದ ಮಹಿಳೆ ಬಂಧನ

ನನ್ನ ಸಾವಿಗೆ ಯುವತಿಯೇ ಕಾರಣ ಎಂದು ಆರೋಪಿಸಿ ಮೊಬೈಲ್ ಕ್ಯಾಮೆರಾ ಮುಂದೆಯೇ ಸುರೇಶ್ ಬಾಟಲ್ ಮೂಲಕ ತಲೆಗೆ ಚಚ್ಚಿಕೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಚಾರ ತಿಳಿದ ಮಂದಿ, ಗಾಯಾಳು ಅಸ್ವಸ್ಥ ಸುರೇಶ್​ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ