ಬೆಂಗಳೂರು: ಬೆಂಗಳೂರಿನ ಕೆ.ಜಿ.ಹಳ್ಳಿ ಸಂಡೇ ಮಾರ್ಕೆಟ್ ರಸ್ತೆಯಲ್ಲಿ ಆಗಸ್ಟ್ 31ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ರವಿ ನಾಯ್ಡು ಎಂಬಾತನನ್ನು ಆಗಸ್ಟ್ 31ರಂದು ಮಧ್ಯಾಹ್ನದ ವೇಳೆಯಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿತ್ತು, ದುಷ್ಕೃತ್ಯದ ವಿಚಾರವಾಗಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರವಿ ನಾಯ್ಡು ಕೊಲೆಯಾಗಲು ಕಾರಣ ಏನು ಎಂಬುದನ್ನು ಹುಡುಕಿದಾಗ ಆಘಾತಕಾರಿ ಅಂಶವೊಂದು ಬಯಲಾಗಿದ್ದು, ಆರೋಪಿಗಳ ಕಡೆಯವನನ್ನು ರೇಗಿಸಿದ್ದಕ್ಕಾಗಿ ಈ ದುಷ್ಕೃತ್ಯ ನಡೆದಿರುವುದು ತಿಳಿದುಬಂದಿದೆ. 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಕೇಸ್ ಒಂದರಲ್ಲಿ ಆರೋಪಿಯಾಗಿದ್ದ ಜಾರ್ಜ್ ಎಂಬಾತ ತನ್ನ ನಾಲ್ವರು ಗೆಳೆಯರ ಜತೆ ಬಂಧನಕ್ಕೊಳಗಾಗಿದ್ದ. ಕೆಲ ಸಮಯದ ಬಳಿಕ ಜೈಲಿನಿಂದ ಬಿಡುಗಡೆಯಾದ ನಂತರವೂ ಇದೇ ವಿಚಾರವಾಗಿ ರವಿ ರೇಗಿಸುತಿದ್ದ. ಆಗಾಗ ರೇಪಿಸ್ಟ್ ಎಂದು ಚುಡಾಯಿಸುತ್ತಿದ್ದ. ಹೀಗಾಗಿ ಈ ವಿಚಾರವನ್ನು ಜಾರ್ಜ್ ತನ್ನ ಸಹೋದರ ಕಾರ್ತಿಕ್ಗೆ ಹೇಳಿದ್ದ. ಇದನ್ನೇ ಕಾರಣವಾಗಿಟ್ಟುಕೊಂಡು ಆರೋಪಿಗಳು ರವಿಯನ್ನು ಹತ್ಯೆಗೈದಿದ್ದಾರೆ ಎನ್ನುವುದು ಗೊತ್ತಾಗಿದೆ.
ಕಮ್ಮನಹಳ್ಳಿಯಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸರಿಂದ 2017 ರಲ್ಲಿ ಜಾರ್ಜ್ ಬಂಧನವಾಗಿತ್ತು. ಲೈಂಗಿಕ ದೌರ್ಜನ್ಯ ಎಸಗಿದ ಕೇಸ್ ಆದ ನಂತರ ರೌಡಿ ಪಟ್ಟಿಗೂ ಹೆಸರು ಸೇರಿತ್ತು. ಈ ವಿಚಾರದಲ್ಲಿ ಹೊರ ಬಂದ ಬಳಿಕ ರವಿ ಜಾರ್ಜ್ನನ್ನು ರೇಪಿಸ್ಟ್ ಎಂದು ರೇಗಿಸಿದ್ದೇ ಕೊಲೆಗೆ ಕಾರಣವಾಗಿದೆ. ಕೆ.ಜಿ ಹಳ್ಳಿ ಸಂಡೆ ಮಾರ್ಕೆಟ್ ರಸ್ತೆಯಲ್ಲಿ ರವಿ ನಾಯ್ಡು ಹತ್ಯೆ ನಡೆದಿದ್ದು, ಜಾರ್ಜ್, ಡ್ಯಾನಿಯಲ್ ಹಾಗೂ ಕಾರ್ತಿಕ್ ಎಂಬ ಮೂವರ ಬಂಧನ ಆಗಿದೆ. ಬಂಧಿತ ಜಾರ್ಜ್ ಹಾಗೂ ಕಾರ್ತಿಕ್ ಅಣ್ಣ, ತಮ್ಮಂದಿರು ಎನ್ನುವುದೂ ತಿಳಿದುಬಂದಿದೆ.
ಇದನ್ನೂ ಓದಿ:
Crime News: ಹುಡುಗಿಗೆ ಮೆಸೇಜ್ ಕಳಿಸಿದ್ದಕ್ಕೆ ಕೇರಳದ ಯುವಕನ ಕತ್ತು ಹಿಸುಕಿ ಕೊಲೆ
(Bengaluru Murder case two brothers arrested by Police)