AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಮ್ಸ್​ ಕಾರ್ಯದರ್ಶಿ ಶಶಿಕುಮಾರ್​ ಕೊಲೆಗೆ ಸುಪಾರಿ ನೀಡಿದ್ದ ಆರ್​ಟಿಐ ರವಿ ಬಂಧನ; ಚಾಮರಾಜನಗರ ಕಾಡಿನಲ್ಲಿ ಅಡಗಿದ್ದ ರವಿ

ಶಶಿಕುಮಾರ್ ಸತ್ತರೆ ತನಗೆ ಕ್ಯಾಮ್ಸ್​ನಲ್ಲಿ ಒಳ್ಳೆಯ  ಸ್ಥಾನ ಸಿಗುತ್ತದೆ ಎಂದು ಭಾವಿಸಿದ್ದ  ರವಿ ಅಲಿಯಾಸ್​ ಆರ್​ಟಿಐ ರವಿ ಸುಪಾರಿ ನೀಡಿದ್ದ ಎನ್ನುವುದು ಗೊತ್ತಾಗಿದೆ. ಘಟನೆ ಬಳಿಕ ಆಗಸ್ಟ್ 3 ನೇ ತಾರೀಖಿನಂದು ಐದು ಅರೋಪಿಗಳನ್ನು ಅರೆಸ್ಟ್ ಮಾಡಿದ್ದ ಜಾಲಹಳ್ಳಿ ಪೊಲೀಸರು ಇದೀಗ ರವಿ ಸೇರಿದಂತೆ ಆರು ಜನರನ್ನು ವಶಕ್ಕೆ ಪಡೆದಿದ್ದಾರೆ.

ಕ್ಯಾಮ್ಸ್​ ಕಾರ್ಯದರ್ಶಿ ಶಶಿಕುಮಾರ್​ ಕೊಲೆಗೆ ಸುಪಾರಿ ನೀಡಿದ್ದ ಆರ್​ಟಿಐ ರವಿ ಬಂಧನ; ಚಾಮರಾಜನಗರ ಕಾಡಿನಲ್ಲಿ ಅಡಗಿದ್ದ ರವಿ
ಸಿಸಿಟಿವಿಯಲ್ಲಿ ಸೆರೆಯಾದ ಹಲ್ಲೆ ದೃಶ್ಯಾವಳಿ
TV9 Web
| Updated By: Skanda|

Updated on: Sep 08, 2021 | 7:03 AM

Share

ಬೆಂಗಳೂರು: ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 29 ರಂದು ಶಶಿಕುಮಾರ್ ಮೇಲೆ ಅಟ್ಯಾಕ್ ನಡೆದಿದ್ದು, ತೀವ್ರ ತನಿಖೆಯ ಬಳಿಕ ಆಗಸ್ಟ್ ಮೂರರಂದು ಐದು ಅರೋಪಿಗಳನ್ನು ಜಾಲಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದರು. ಆದರೆ, ಶಶಿಕುಮಾರ್ ಕೊಲೆಗೆ ಸುಪಾರಿ ನೀಡಿದ್ದ ರವಿ ಅಲಿಯಾಸ್​ ಆರ್​ಟಿಐ ರವಿ ತಲೆಮರೆಸಿಕೊಂಡಿದ್ದ. ನಿರಂತರ ಹುಡುಕಾಟದ ಬಳಿಕ ಇದೀಗ ಆತನನ್ನು ವಶಕ್ಕೆ ಪಡೆಯಲಾಗಿದೆ.

ಶಶಿಕುಮಾರ್ ಹತ್ಯೆಗೆ ಸುಪಾರಿ ನೀಡಿದ್ದ ಆರ್‌ಟಿಐ ರವಿ ಘಟನೆ ಬಳಿಕ ಬೆಂಗಳೂರು ಬಿಟ್ಟು ಚಾಮರಾಜನಗರ ಜಿಲ್ಲೆಯ ಕಾಡಿನಲ್ಲಿ ಅಡಗಿದ್ದ. ಬರೋಬ್ಬರಿ 40 ದಿನಗಳ ಕಾಲ ರವಿಗೆ ಹುಡುಕಾಟ ನಡೆಸಿದ್ದ ಪೊಲೀಸರ ಒಂದು ತಂಡವನ್ನು ಚಾಮರಾಜನಗರ ಕಾಡಿನಲ್ಲೇ ಇರಿಸಲಾಗಿತ್ತು. ಈ ಹಿಂದೆಯೂ ಕೇಸ್ ಒಂದರಲ್ಲಿ ಆರು ತಿಂಗಳು ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಅಗಿದ್ದ ರವಿ ಈಗಲೂ ಕಣ್ಣಾಮುಚ್ಚಾಲೆ ಆಟ ಶುರುಮಾಡಿದ್ದ. ಪೊಲೀಸರು ಬೆನ್ನುಹತ್ತಿರುವ ವಿಚಾರ ತಿಳಿದು ಎಸ್ಕೇಪ್ ಅಗಿದ್ದ ಆತನ ಜತೆಗೆ ಸದ್ಯ ಇನ್ನೂ ಐವರನ್ನು ಬಂಧಿಸಲಾಗಿದೆ.

ಶಶಿಕುಮಾರ್ ಸತ್ತರೆ ತನಗೆ ಕ್ಯಾಮ್ಸ್​ನಲ್ಲಿ ಒಳ್ಳೆಯ  ಸ್ಥಾನ ಸಿಗುತ್ತದೆ ಎಂದು ಭಾವಿಸಿದ್ದ  ರವಿ ಅಲಿಯಾಸ್​ ಆರ್​ಟಿಐ ರವಿ ಸುಪಾರಿ ನೀಡಿದ್ದ ಎನ್ನುವುದು ಗೊತ್ತಾಗಿದೆ. ಘಟನೆ ಬಳಿಕ ಆಗಸ್ಟ್ 3 ನೇ ತಾರೀಖಿನಂದು ಐದು ಅರೋಪಿಗಳನ್ನು ಅರೆಸ್ಟ್ ಮಾಡಿದ್ದ ಜಾಲಹಳ್ಳಿ ಪೊಲೀಸರು ಇದೀಗ ರವಿ ಸೇರಿದಂತೆ ಆರು ಜನರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲಿಗೆ ಶಶಿಕುಮಾರ್ ಮೇಲೆ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ಹನ್ನೊಂದು ಜನರು ಬಂಧನಕ್ಕೆ ಒಳಗಾಗಿದ್ದಾರೆ. ಆರೋಪಿ ಬಳಿಯಿಂದ ಮೂರು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು ಲಾಂಗ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜುಲೈ 29ರಂದು ಏನಾಗಿತ್ತು? ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ (KAMS General secretary), ಶಶಿಕುಮಾರ್ ಮೇಲೆ ಜುಲೈ 29ರ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಬೆಂಗಳೂರಿನ ಮುತ್ಯಾಲನಗರದ ನಿವಾಸದ ಎದುರು ದುಷ್ಕೃತ್ಯ ಸಂಭವಿಸಿದ್ದು, ಹಲ್ಲೆಕೋರರು ದಾಳಿ ಮಾಡುತ್ತಿದ್ದಂತೆಯೇ ಎಚ್ಚೆತ್ತ ಶಶಿಕುಮಾರ್ (Shashikumar) ತಮ್ಮ ಬಳಿ ಇದ್ದ ಪರವಾನಗಿ ಹೊಂದಿದ ಗನ್ (Licensed Gun)​ ತೆಗೆದು ತೋರಿಸಿದ್ದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದರು. ಕತ್ತಲಾಗಿದ್ದರಿಂದ ಹಲ್ಲೆ ಮಾಡಿದವರ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಶಶಿಕುಮಾರ್ ಹೇಳಿದ್ದು, ಹಳೇ ವೈಶಮ್ಯದ ಹಿನ್ನೆಲೆಯಲ್ಲಿ ಹಲ್ಲೆಗೆ ಮುಂದಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು.

ಬೆಂಗಳೂರಿನ ಜಾಲಹಳ್ಳಿ ವ್ಯಾಪ್ತಿಯ ಮುತ್ಯಾಲನಗರದ ನಿವಾಸಕ್ಕೆ ಕಾರಿನಲ್ಲಿ ಆಗಮಿಸಿದ ಶಶಿಕುಮಾರ್ ಕಾರಿನ ಬಾಗಿಲು ತೆರೆದು ಕೆಳಗಿಳಿಯುತ್ತಿದ್ದಂತೆಯೇ ಹಲ್ಲೆಕೋರರು ಮುತ್ತಿಗೆ ಹಾಕಿ ದಾಳಿ ನಡೆಸಿದ್ದರು. ಮಾರಕಾಸ್ತ್ರಗಳನ್ನು ಹೊಂದಿದ್ದ ಮೂರು ಜನ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಶಶಿಕುಮಾರ್ ಲೈಸೆನ್ಸ್ಡ್​ ಗನ್ ತೋರಿಸಿದ ತಕ್ಷಣ ಹೆದರಿ ಕಾಲ್ಕಿತ್ತಿದ್ದರು. ಇಡೀ ಪ್ರಕರಣ 5 ರಿಂದ 7 ಸೆಕೆಂಡ್​ಗಳ ಕಾಲಾವಧಿಯಲ್ಲಿ ನಡೆದಿದ್ದು, ರಾತ್ರಿಯೂ ಆಗಿತ್ತಾದ್ದರಿಂದ ಶಶಿಕುಮಾರ್​ಗೆ ಅವರನ್ನು ಪತ್ತೆ ಹಚ್ಚುವುದು ಸಾಧ್ಯವಾಗಿರಲಿಲ್ಲ.

ಆ ಕುರಿತು ಪ್ರತಿಕ್ರಿಯೆ ನೀಡಿದ್ದ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ನನ್ನ ಮೇಲೆ ಹಲ್ಲೆ ನಡೆದಿದೆ. ಯಾರು ನಡೆಸಿದ್ದು ಎಂದು ಸ್ಪಷ್ಟತೆ ಇಲ್ಲ. ಆದರೆ, ಬೆದರಿಕೆ ಇದ್ದಿದ್ದು ನಿಜ. ಆರ್​ಟಿಇ, ಆರ್​ಟಿಐ, ಪೋಷಕರ ಸಂಘಗಳಿಂದ ಹಾಗೂ ಕೆಲ ಖಾಸಗಿ ಶಾಲಾ ಒಕ್ಕೂಟದ ಹೆಸರಿನಲ್ಲಿ ಬೆದರಿಕೆ ಇದೆ. ಏಕಾಏಕಿ ದುಷ್ಕರ್ಮಿಗಳಿಂದ ದಾಳಿ ಆಗಿದೆ. ಕತ್ತಲಾಗಿದ್ದರಿಂದ ಆರೋಪಿಗಳನ್ನು ಗುರುತಿಸಲು ಆಗಲಿಲ್ಲ. ಇಡೀ ಘಟನೆ 5-7 ಸೆಕೆಂಡಿನಲ್ಲಿ ಆಗಿದೆ. ನನ್ನ ಬಳಿ ಗನ್​ ಇದ್ದಿದ್ದರಿಂದ ನಾನು ಬಚಾವ್​ ಆಗಿದ್ದೇನೆ ಎಂದಿದ್ದರು.

ಇದನ್ನೂ ಓದಿ: ಕ್ಯಾಮ್ಸ್​ ಕಾರ್ಯದರ್ಶಿ ಶಶಿಕುಮಾರ್​ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಗನ್​ ತೋರಿಸಿ ಬಚಾವ್; ಸಿಸಿಟಿವಿಯಲ್ಲಿ ದೃಶ್ಯ ಸೆರೆ 

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ; ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ 7ನೇ ಆರೋಪಿಯ ಬಂಧನ

(Police arrests RTI Ravi for giving supari to kill KAMS General secretary Shashikumar)