AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಮ್ಸ್​ ಕಾರ್ಯದರ್ಶಿ ಶಶಿಕುಮಾರ್​ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಗನ್​ ತೋರಿಸಿ ಬಚಾವ್; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರಿನ ಜಾಲಹಳ್ಳಿ ವ್ಯಾಪ್ತಿಯ ಮುತ್ಯಾಲನಗರದ ನಿವಾಸಕ್ಕೆ ಕಾರಿನಲ್ಲಿ ಆಗಮಿಸಿದ ಶಶಿಕುಮಾರ್ ಕಾರಿನ ಬಾಗಿಲು ತೆರೆದು ಕೆಳಗಿಳಿಯುತ್ತಿದ್ದಂತೆಯೇ ಹಲ್ಲೆಕೋರರು ಮುತ್ತಿಗೆ ಹಾಕಿ ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಮೂರು ಜನ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಶಶಿಕುಮಾರ್ ಲೈಸೆನ್ಸ್ಡ್​ ಗನ್ ತೋರಿಸಿದ ತಕ್ಷಣ ಹೆದರಿ ಕಾಲ್ಕಿತ್ತಿದ್ದಾರೆ.

ಕ್ಯಾಮ್ಸ್​ ಕಾರ್ಯದರ್ಶಿ ಶಶಿಕುಮಾರ್​ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಗನ್​ ತೋರಿಸಿ ಬಚಾವ್; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಸಿಸಿಟಿವಿಯಲ್ಲಿ ಸೆರೆಯಾದ ಹಲ್ಲೆ ದೃಶ್ಯಾವಳಿ
TV9 Web
| Edited By: |

Updated on: Jul 30, 2021 | 7:00 AM

Share

ಬೆಂಗಳೂರು: ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ (KAMS General secretary), ಶಶಿಕುಮಾರ್ ಮೇಲೆ ನಿನ್ನೆ (ಜುಲೈ 29) ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಮುತ್ಯಾಲನಗರದ ನಿವಾಸದ ಎದುರು ದುಷ್ಕೃತ್ಯ ಸಂಭವಿಸಿದ್ದು, ಹಲ್ಲೆಕೋರರು ದಾಳಿ ಮಾಡುತ್ತಿದ್ದಂತೆಯೇ ಎಚ್ಚೆತ್ತ ಶಶಿಕುಮಾರ್ (Shashikumar) ತಮ್ಮ ಬಳಿ ಇದ್ದ ಪರವಾನಗಿ ಹೊಂದಿದ ಗನ್ (Licensed Gun)​ ತೆಗೆದು ತೋರಿಸಿದ್ದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕತ್ತಲಾಗಿದ್ದರಿಂದ ಹಲ್ಲೆ ಮಾಡಿದವರ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಶಶಿಕುಮಾರ್ ಹೇಳಿದ್ದು, ಹಳೇ ವೈಶಮ್ಯದ ಹಿನ್ನೆಲೆಯಲ್ಲಿ ಹಲ್ಲೆಗೆ ಮುಂದಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಬೆಂಗಳೂರಿನ ಜಾಲಹಳ್ಳಿ ವ್ಯಾಪ್ತಿಯ ಮುತ್ಯಾಲನಗರದ ನಿವಾಸಕ್ಕೆ ಕಾರಿನಲ್ಲಿ ಆಗಮಿಸಿದ ಶಶಿಕುಮಾರ್ ಕಾರಿನ ಬಾಗಿಲು ತೆರೆದು ಕೆಳಗಿಳಿಯುತ್ತಿದ್ದಂತೆಯೇ ಹಲ್ಲೆಕೋರರು ಮುತ್ತಿಗೆ ಹಾಕಿ ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಮೂರು ಜನ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಶಶಿಕುಮಾರ್ ಲೈಸೆನ್ಸ್ಡ್​ ಗನ್ ತೋರಿಸಿದ ತಕ್ಷಣ ಹೆದರಿ ಕಾಲ್ಕಿತ್ತಿದ್ದಾರೆ. ಇಡೀ ಪ್ರಕರಣ 5 ರಿಂದ 7 ಸೆಕೆಂಡ್​ಗಳ ಕಾಲಾವಧಿಯಲ್ಲಿ ನಡೆದಿದ್ದು, ರಾತ್ರಿಯೂ ಆಗಿತ್ತಾದ್ದರಿಂದ ಶಶಿಕುಮಾರ್​ಗೆ ಅವರನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ.

KAMS SHASHIKUMAR WITH POLICE

ಪೊಲೀಸರಿಗೆ ಮಾಹಿತಿ ನೀಡುತ್ತಿರುವ ಶಶಿಕುಮಾರ್

ಕ್ಯಾಮ್ಸ್​ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್​ಗೆ ಜೀವ ಬೆದರಿಕೆ ಇದ್ದು, ಎರಡು ವರ್ಷಗಳ ಹಿಂದೆಯೇ ಅವರ ಹತ್ಯೆಗೆ ಯೋಜನೆ ರೂಪಿಸಿದ್ದರು ಎಂಬ ವಿಷಯವೂ ಹೊರಬಿದ್ದಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದ್ದು, ಆರ್​ಟಿಐ ಕಾರ್ಯಕರ್ತರೊಬ್ಬರ ಜತೆ ಶಶಿಕುಮಾರ್ ವೈಷಮ್ಯ ಹೊಂದಿದ್ದಾರೆ ಎನ್ನಲಾಗಿದೆ. ಆರ್​ಟಿಐ, ಆರ್​ಟಿಇ, ಪೋಷಕರ ಸಂಘ, ಕೆಲ ಖಾಸಗಿ ಶಾಲಾ ಒಕ್ಕೂಟದ ಹೆಸರಿನಲ್ಲಿ ಈಗಲೂ ಬೆದರಿಕೆ ಇದೆ ಎಂಬ ವಿಚಾರವೂ ತಿಳಿದು ಬಂದಿದ್ದು, ಹಲ್ಲೆಯ ಕುರಿತು ಸಾಕಷ್ಟು ಅನುಮಾನಗಳೆದ್ದಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ನನ್ನ ಮೇಲೆ ಹಲ್ಲೆ ನಡೆದಿದೆ. ಯಾರು ನಡೆಸಿದ್ದು ಎಂದು ಸ್ಪಷ್ಟತೆ ಇಲ್ಲ. ಆದರೆ, ಬೆದರಿಕೆ ಇದ್ದಿದ್ದು ನಿಜ. ಆರ್​ಟಿಇ, ಆರ್​ಟಿಐ, ಪೋಷಕರ ಸಂಘಗಳಿಂದ ಹಾಗೂ ಕೆಲ ಖಾಸಗಿ ಶಾಲಾ ಒಕ್ಕೂಟದ ಹೆಸರಿನಲ್ಲಿ ಬೆದರಿಕೆ ಇದೆ. ಇಂದು ಏಕಾಏಕಿ ದುಷ್ಕರ್ಮಿಗಳಿಂದ ದಾಳಿ ಆಗಿದೆ. ಕತ್ತಲಾಗಿದ್ದರಿಂದ ಆರೋಪಿಗಳನ್ನು ಗುರುತಿಸಲು ಆಗಲಿಲ್ಲ. ಇಡೀ ಘಟನೆ 5-7 ಸೆಕೆಂಡಿನಲ್ಲಿ ಆಗಿದೆ. ನನ್ನ ಬಳಿ ಗನ್​ ಇದ್ದಿದ್ದರಿಂದ ನಾನು ಬಚಾವ್​ ಆಗಿದ್ದೇನೆ. ಘಟನೆ ಬಗ್ಗೆ ಪೊಲೀಸರಿಗೆ ಸಂಪೂರ್ಣ ಮಾಹಿತಿ‌ ನೀಡಿದ್ದೇನೆ. ತನಿಖೆಗೆ ಸಹಕರಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಶಾಲಾ ಶುಲ್ಕವನ್ನು ಕಡಿಮೆ ಮಾಡಲ್ಲ; ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ 

ಕಡಿಮೆ ಬೆಲೆಗೆ ತರಕಾರಿ ಕೊಟ್ಟಿಲ್ಲ ಎಂದು ಮಂಡಿ ಮಾಲೀಕನ ಮೇಲೆ ಹಲ್ಲೆ; 1.25 ಲಕ್ಷ ರೂಪಾಯಿ ದೋಚಿ ಪರಾರಿ

(Attack on KAMS General secretary Shashikumar in front of his house in Bengaluru)

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ