ಕೆಲಸಕ್ಕಾಗಿ ಉತ್ತರಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಯುವಕ ಲಿಫ್ಟ್​ನಲ್ಲಿ ಸಿಲುಕಿ ಸಾವು

|

Updated on: Apr 27, 2023 | 8:00 AM

ಬೆಂಗಳೂರಿನ ಜೆ.ಸಿ.ರಸ್ತೆ ಭರತ್ ಸರ್ಕಲ್​ ಬಳಿಯ ಕಮರ್ಷಿಯಲ್​ ಬಿಲ್ಡಿಂಗ್​ನ ಲಿಫ್ಟ್​​ನಲ್ಲಿ ಸಿಲುಕಿ ಉತ್ತರಪ್ರದೇಶ ಮೂಲದ ವಿಕಾಸ್​(26) ಎಂಬ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

ಕೆಲಸಕ್ಕಾಗಿ ಉತ್ತರಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಯುವಕ ಲಿಫ್ಟ್​ನಲ್ಲಿ ಸಿಲುಕಿ ಸಾವು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸಾಮಾನ್ಯವಾಗಿ ಇತ್ತೀಚೆಗೆ ಬಹುತೇಕ ಕಟ್ಟಡಗಳಲ್ಲಿ ಲಿಫ್ಟ್ ಅಳವಡಿಸಲಾಗಿರುತ್ತೆ. ಬಹುತೇಕರು ಮೆಟ್ಟಿಲುಗಳಿದ್ದರೂ ಲಿಫ್ಟನ್ನೇ ಬಳಸುತ್ತಾರೆ. ಆದ್ರೆ ಅದೇ ಲಿಫ್ಟ್ ಯುವಕನನ್ನು ಬಲಿ ಪಡೆದಿದೆ. ಬೆಂಗಳೂರಿನ ಜೆ.ಸಿ.ರಸ್ತೆ ಭರತ್ ಸರ್ಕಲ್​ ಬಳಿಯ ಕಮರ್ಷಿಯಲ್​ ಬಿಲ್ಡಿಂಗ್​ನ ಲಿಫ್ಟ್​​ನಲ್ಲಿ ಸಿಲುಕಿ ಉತ್ತರಪ್ರದೇಶ ಮೂಲದ ವಿಕಾಸ್​(26) ಎಂಬ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

ಸಂಜಯ್ ಆಟೋಮೊಬೈಲ್​​ ಶಾಪ್​ನಲ್ಲಿ ಕೆಲಸ ಮಾಡ್ತಿದ್ದ ವಿಕಾಸ್​​, ಆರು ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದ. ಸಂಜೆ ಏಳು ಗಂಟೆ ಸುಮಾರಿಗೆ ಕಮರ್ಷಿಯಲ್​ ಬಿಲ್ಡಿಂಗ್​ನ ಲಿಫ್ಟ್​​ನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಮಗನ ಸಾವಿನ ವಿಚಾರ ಪೋಷಕರಿಗೆ ತಿಳಿಸಿದ್ದಾರೆ. ವಿಕಾಸ್ ಪೋಷಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಪೋಷಕರಿಗೆ ಹಸ್ತಾಂತರಿಸಲಾಗುತ್ತೆ.

ಸಿಲಿಕಾನ್ ಸಿಟಿಯಲ್ಲಿ ಪುಡಿ ರೌಡಿಗಳ ಪುಂಡಾಟ

ಏಪ್ರಿಲ್ 25 ರಂದು ತಡರಾತ್ರಿ ವ್ಯಕ್ತಿಗೆ ಚಾಕು ಇರಿದು ಕಾರು ಗ್ಲಾಸ್ ಒಡೆದು ಪುಡಿ ರೌಡಿಗಳು ಪುಂಡಾಟ ಮೆರೆದಿದ್ದಾರೆ. ನರಸಿಂಹ @ ಕೋಸೆ ಎಂಬ ಗ್ಯಾಂಗ್ ವೆಂಕಟೇಶ್ ಎಂಬಾತನಿಗೆ ಚಾಕುವಿನಿಂದ ಇರಿದು ಅಟ್ಟಹಾಸ ಮೆರೆದಿದ್ದಾರೆ. ನಿತೀಶ್ ಎಂಬಾತನ ಕಾರಿನ ಗ್ಲಾಸ್ ಪೀಸ್ ಪೀಸ್ ಮಾಡಲಾಗಿದೆ. ಘಟನೆ ಸಂಬಂಧ ಗಿರಿನಗರ ಠಾಣೆಯಲ್ಲಿ ಐಪಿಸಿ 307,324 ಅಡಿಯಲ್ಲಿ ಎರಡು ಎಫ್ಐಆರ್ ದಾಖಲಾಗಿದೆ. ನರಸಿಂಹ, ಯೋಗೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೆ ಮೂವರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಬಂಧಿತ ಆರೋಪಿ ನರಸಿಂಹ ಗಿರಿನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ. ಏರಿಯಾದಲ್ಲಿ ಹವಾ ಇಡಲು ಕಂಡ ಕಂಡ ಕಡೆ ಅಟ್ಟಹಾಸ ಮೆರೆಯುತ್ತಾನೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:45 am, Thu, 27 April 23