AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಕೋಟೆ: ತಮ್ಮನ ಹಿತ ಕಾಯಲು ಹೋದ ಗಂಡ, ಭಂಡನಾಗಿ ಪತ್ನಿಯ ಜೀವವನ್ನೆ ಬಲಿಪಡೆದಿದ್ದಾನೆ! ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು

ಹೆಂಡತಿಯ ತಂಗಿಯನ್ನು ತನ್ನ ತಮ್ಮನಿಗೆ ಕೊಡಲಿಲ್ಲವೆಂದು ಗಂಡನ ರೋಷಾವೇಷ, ಅತ್ತೆ ಮನೆಯವರಿಂದ ಕಿರುಕುಳ, ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು

ಹೊಸಕೋಟೆ: ತಮ್ಮನ ಹಿತ ಕಾಯಲು ಹೋದ ಗಂಡ, ಭಂಡನಾಗಿ ಪತ್ನಿಯ ಜೀವವನ್ನೆ ಬಲಿಪಡೆದಿದ್ದಾನೆ! ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು
ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Apr 26, 2023 | 10:24 AM

Share

ಅದು ಅತ್ತೆ ಮಾವ ಮೈದುನ ಗಂಡ ಹೆಂಡತಿ ಜೊತೆಗೆ ಎರಡು ಮಕ್ಕಳ ಜೊತೆ ಒಂದೇ ಮನೆಯಲ್ಲಿ ವಾಸವಿದ್ದ ಸುಂದರ ಕುಟುಂಬ. ತಾವಾಯಿತು ತಮ್ಮ ಕೆಲಸವಾಯಿತು ಅಂತಿದ್ದ ಆ ಕುಟುಂಬದಲ್ಲಿ ಪತ್ನಿಯ (Wife) ತಂಗಿಯ ಮದುವೆಯ ವಿಚಾರವೇ ಬಿರುಗಾಳಿಯನ್ನು ಎಬ್ಬಿಸಿಬಿಟ್ಟಿದೆ. ತಮ್ಮನ ಹಿತ ಕಾಯಲು ಹೋದ ಗಂಡ (Husband), ಭಂಡನಾಗಿ ಪತ್ನಿಯ ಜೀವವನ್ನೆ ಬಲಿಪಡೆದುಕೊಂಡಿದ್ದಾನೆ! ಗ್ರಾಮದ ರಸ್ತೆಯಲೆಲ್ಲ ಜನರು ಅಲ್ಲಿ ಜಮಾಯಿಸಿದ್ದಾರೆ. ಶಾಂತವಾಗಿದ್ದ ಮನೆಯ ಮುಂದೆ ಆಕ್ರೋಶ ಆಕ್ರಂದನ ಮುಗಿಲು ಮುಟ್ಟಿದ್ದರೆ ಇತ್ತ ಮನೆಯಲ್ಲಿ ಮಕ್ಕಳ ಜೊತೆಯಲ್ಲಿರಬೇಕಾದ ಗೃಹಿಣಿ ಮನೆ ಮುಂದೆ ಶವವಾಗಿ ಮಲಗಿದ್ದಾಳೆ! ಗಂಡನ ಮನೆಯವರ ವಿರುದ್ದ ಹೆತ್ತವರ ಆಕ್ರೋಶ ಎಷ್ಟು ಜೋರಾಗಿತ್ತೆಂದರೆ ಜೆಸಿಬಿ ಸಹ ಮನೆ ಮುಂದೆಗೆ ಬಂದಿದ್ದು ದೊಡ್ಡ ಹೈಡ್ರಾಮವೆ ಮನೆ ಮುಂದೆ ನಡೆದಿದೆ. ಹೌದು ಅಂದಹಾಗೆ ಇಷ್ಟೆಲ್ಲ ಆಕ್ರೋಶ ಆಕ್ರಂದನಕ್ಕೆ ಕಾರಣವಾಗಿದ್ದು ಪವಿತ್ರಾ ಅನ್ನೂ ಈ ಗೃಹಿಣಿಯ ಸಾವು.

ಅಂದಹಾಗೆ ಮೇಲಿನ ಪೋಟೋದಲ್ಲಿರುವ ಇವರ ಹೆಸರು ಪವಿತ್ರಾ ಮತ್ತು ಮುರಳಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ (Hoskote) ತಾಲೂಕಿನ (Nandagudi) ದಳಸಗೆರೆ ಗ್ರಾಮದಲ್ಲಿ ವಾಸವಿದ್ದ ಈ ಜೋಡಿ, ಕಳೆದ ಐದು ವರ್ಷದ ಹಿಂದೆ ವಿವಾಹವಾಗಿದ್ದು ಮನೆಯಲ್ಲಿ ಅತ್ತೆ ಮಾವ ಮೈದುನ ಹಾಗೂ ಗಂಡ ಎಲ್ಲರನ್ನೂ ಒಗ್ಗೂಡಿಸಿಕೊಂಡಿದ್ದ ಸೊಸೆಯಾಗಿ ಬಂದಿದ್ದ ಪವಿತ್ರಾ ತನ್ನ ಗಂಡನ ಮನೆಯಲ್ಲಿ ಇಬ್ಬರು ಮಕ್ಕಳ ಜೊತೆ ಸುಖ ಸಂಸಾರ ನಡೆಸುತ್ತಿದ್ದಳು. ಆದ್ರೆ ಈ ನಡುವೆ ಅತ್ತೆಯ ಮನೆಯವರು ಮೈದುನನಿಗೆ ತನ್ನ ತಂಗಿಯನ್ನ ಕೊಡಿಸುವಂತೆ ಪವಿತ್ರಾ ಮೇಲೆ ಒತ್ತಡ ಹೇರಿದ್ದು ಬಾಣಂತನಕ್ಕೆ ಹೋದ ವೇಳೆಯೂ ಸಂಬಂಧ ಫಿಕ್ಸ್ ಮಾಡಿಕೊಂಡೆ ಬರಬೇಕು ಅಂತ ಹೇಳಿ ಕಳಿಸಿದ್ರಂತೆ.

ಆದ್ರೆ ಒಂದೇ ಮನೆಗೆ ಎರಡನೆ ಮಗಳನ್ನ ಕೊಡಲು ಇಷ್ಟವಿಲ್ಲದ ಪವಿತ್ರ ತವರು ಮನೆಯವರು ವಿರೋಧ ವ್ಯಕ್ತಪಡಿಸಿದ್ದು, ಮೈದುನನಿಗೆ ಬೇರೆ ಕಡೆ ಸಂಬಂಧ ಫಿಕ್ಸ್ ಮಾಡಿದ್ರಂತೆ. ಜತೆಗೆ ಕಳೆದ ಭಾನುವಾರ ಮಗಳ ಲಗ್ನ ಪತ್ರಿಕೆಯನ್ನ ತೆಗೆದುಕೊಂಡು ಪವಿತ್ರ ತಂದೆ ಮಗಳ ಊರಿಗೆ ಬಂದಿದ್ದು ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ನೀಡ್ತಿದ್ರಂತೆ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದ್ದು ಗಂಡ, ತನ್ನ ಪತ್ನಿ ಪವಿತ್ರ ಮೇಲೆ ಹಲ್ಲೆ ಸಹ ಮಾಡಿದ್ರಂತೆ. ಜತಗೆ ಈ ವೇಳೆ ಎಲ್ಲರೂ ಜಗಳ ಬಿಡಿಸಿ ಕಳಿಸಿದ್ದು ಅಂದು ರಾತ್ರಿಯೇ ಪವಿತ್ರ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪಿದ್ದಾರೆ.

ಭಾನುವಾರ ನೇಣು ಬಿಗಿದುಕೊಂಡು ಪವಿತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಗಂಡನ ಕುಟುಂಬಸ್ಥರು ಪವಿತ್ರಾಳ ಮೃತದೇಹವನ್ನ ಹೊಸಕೋಟೆಯ ಆಸ್ಪತ್ರೆಗೆ ತಂದಿದ್ದು ನಂತರ ಆಸ್ಪತ್ರೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಜೊತೆಗೆ ಮೊನ್ನೆ ರಾತ್ರಿ ಪವಿತ್ರಾ ಕುಟುಂಬಸ್ಥರಿಗೆ ವಿಚಾರ ತಿಳಿದಿದ್ದಾರೆ. ಆಸ್ಪತ್ರೆ ಹಾಗೂ ಗಂಡನ ಮನೆಯ ಬಳಿ ನೋಡಿದಾಗ ಎಲ್ಲರೂ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿರುವುದು ಗೊತ್ತಾಗಿದೆ.

ಹೀಗಾಗಿ ನಿನ್ನೆ ಮಂಗಳವಾರ ಮೃತದೇಹದ ಶವಪರೀಕ್ಷೆ ನಡೆಸಿ ಗಂಡನ ಮನೆ ಬಳಿ ಬಂದ ಕುಟುಂಬಸ್ಥರು ಮನೆ ಮುಂದೆಯೆ ಜೆಸಿಬಿಯಿಂದ ಗುಂಡಿ ಅಗೆಸಿ ಅಲ್ಲಿಯೇ ಶವ ಸಂಸ್ಕಾರ ಮಾಡಲು ಮುಂದಾಗಿದ್ದಾರೆ. ಆದ್ರೆ ಈ ವೇಳೆ ಗ್ರಾಮದ ಕೆಲವರು ಮೃತಳ ಸಂಬಂಧಿಕರಿಗೆ ಸಮಾಧಾನ ಮಾಡಿ ನಂತರ ಗಂಡನ ಜಮೀನಿನಲ್ಲಿ ಪವಿತ್ರಾಳ ಅಂತ್ಯ ಸಂಸ್ಕಾರ ನೇರವೇರಿಸಿದ್ದಾರೆ. ಇನ್ನು ಗೃಹಿಣಿ ಪವಿತ್ರಾದು ಆತ್ಮಹತ್ಯೆಯಲ್ಲ ಕೊಲೆ ಅನ್ನುವ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ನಂದಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಒಟ್ಟಾರೆ ಮನೆ ಬೆಳಗಲು ಬಂದಿದ್ದ ಹೆಣ್ಣು ಮಗಳನ್ನ ಸಂತೋಷದಿಂದ ನೋಡಿಕೊಳ್ಳೋದನ್ನ ಬಿಟ್ಟು ಮತ್ತೊಬ್ಬಳನ್ನ ಕೊಡಿಸಲಿಲ್ಲ ಅಂತ ಆಕೆಯ ಮೇಲೆ ಗಂಡನ ಕುಟುಂಬಸ್ಥರು ಕ್ರೌರ್ಯ ಮೆರೆದಿರುವುದು ದುರಂತವೇ ಸರಿ. ಇನ್ನು ಈ ಬಗ್ಗೆ ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ತನಿಖೆಯ ನಂತರ ಪವಿತ್ರಾಳದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದು ಗೊತ್ತಾಗಬೇಕಿದೆ.

ವರದಿ: ನವೀನ್, ಟಿವಿ 9, ದೇವನಹಳ್ಳಿ 

Published On - 10:24 am, Wed, 26 April 23

Follow Us
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’