ಶೀಲ ಶಂಕಿಸಿ ಪತ್ನಿಯ ಹತ್ಯೆ, ಪ್ರಿಯಕರನನ್ನೂ ಕೊಲೆ ಮಾಡುವುದಾಗಿ ಆಕೆಯ ಅಣ್ಣನಿಗೆ ಮೆಸೇಜ್ ಕಳುಹಿಸಿ ಆರೋಪಿ ಪರಾರಿ

ಶೀಲ ಶಂಕಿಸಿ ಪತ್ನಿಯನ್ನು ಹತ್ಯೆಗೈದ ಪತಿ ಪ್ರಿಯಕರನನ್ನೂ ಕೊಲ್ಲುವುದಾಗಿ ಆಕೆಯ ಅಣ್ಣನಿಗೆ ಬೆದರಿಕೆ ಸಂದೇಶ ಕಳುಹಿಸಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ

ಶೀಲ ಶಂಕಿಸಿ ಪತ್ನಿಯ ಹತ್ಯೆ, ಪ್ರಿಯಕರನನ್ನೂ ಕೊಲೆ ಮಾಡುವುದಾಗಿ ಆಕೆಯ ಅಣ್ಣನಿಗೆ ಮೆಸೇಜ್ ಕಳುಹಿಸಿ ಆರೋಪಿ ಪರಾರಿ
ಕೊಲೆಯಾದ ನಜ್​ ಮತ್ತು ನಜ್ ಪತಿಯೂ ಆಗಿರುವ ಕೊಲೆ ಆರೋಪಿ ನಾಸೀರ್ ಹುಸೇನ್
Updated By: Rakesh Nayak Manchi

Updated on: Jan 16, 2023 | 10:33 PM

ಬೆಂಗಳೂರು: ಶೀಲ ಶಂಕಿಸಿ ಪತ್ನಿಯನ್ನು ಹತ್ಯೆಗೈದ ಪತಿ (Husband kills wife) ಪ್ರಿಯಕರನನ್ನೂ ಕೊಲ್ಲುವುದಾಗಿ ಆಕೆಯ ಅಣ್ಣನಿಗೆ ಬೆದರಿಕೆ ಸಂದೇಶ ಕಳುಹಿಸಿ ಪರಾರಿಯಾದ ಘಟನೆ ನಗರದ ತಾವರೆಕೆರೆಯ ಸುಭಾಷ್ ನಗರದಲ್ಲಿ ನಡೆದಿದೆ. ನಾಜ್(22) ಕೊಲೆಯಾದ ಗೃಹಿಣಿಯಾಗಿದ್ದು, ಈಕೆಯ ಪತಿ ನಾಸೀರ್ ಹುಸೇನ್ ಕೊಲೆ ಆರೋಪಿಯಾಗಿದ್ದಾನೆ. ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸುದ್ದುಗುಂಟೆ ಠಾಣಾ ಪೊಲೀಸರು ಆರೋಪಿಯ ಬಂಧನಕ್ಕೆ ತನಿಖೆ ಆರಂಭಿಸಿದ್ದಾರೆ.

ನಾಜ್ ಮತ್ತು ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ನಾಸೀರ್ ಹುಸೇನ್ ಪರಸ್ಪರ ಪ್ರೀತಿಸುತ್ತಿದ್ದರು. ನಾಸೀರ್​ಗೆ ತಂದೆ ಮತ್ತು ತಾಯಿ ಯಾರೂ ಇಲ್ಲದ ಹಿನ್ನಲೆ ಆತನ ಗುಣ ಸ್ವಭಾವ ಮೆಚ್ಚಿದ ನಾಜ್ ಪೋಷಕರು ಪ್ರೇಮ ವಿವಾಹಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕಳೆದ ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ದಂಪತಿ ತಾವರೆಕೆರೆಯ ಸುಭಾಷ್ ನಗರದಲ್ಲಿ ಫ್ಲ್ಯಾಟ್​ವೊಂದರಲ್ಲಿ ವಾಸವಿದ್ದರು.

ಇದನ್ನೂ ಓದಿ: Murder: ದೃಶ್ಯ ಸಿನಿಮಾ ರೀತಿಯಲ್ಲೇ ಕೊಲೆ; ಗಂಡನನ್ನು ಕೊಂದು, ಶವದ ಮೇಲೆ ಟ್ಯಾಂಕ್ ಕಟ್ಟಿದ ಹೆಂಡತಿ!

ಪ್ರೀತಿಸಿ ಮದುವೆಯಾಗಿದ್ದ ಜೋಡಿ ಹಕ್ಕಿಯ ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು. ಆದರೆ ಇತ್ತೀಚೆಗೆ ನಾಜ್ ಗರ್ಭಿಣಿಯಾದಗ ಪತಿ ನಾಸೀರ್​ಗೆ ಅನುಮಾನದ ಪೆಂಡ ಭೂತ ತಲೆಗೆ ಹೊಕ್ಕಿದೆ. ಪತ್ನಿ ಗರ್ಭಿಣಿಯಾಗಿರುವುದು ದೃಢಪಡುತ್ತಿದ್ದಂತೆ ಹೆಂಡತಿ ಮೇಲೆ ಸಂದೇಹ ಪಟ್ಟಿದ್ದ ಪತಿ ನಾಸೀರ್, ಅದು ತನ್ನ ಮಗುವಲ್ಲ ಎಂದು ಕಿರಿಕ್ ಮಾಡಲು ಆರಂಭಿಸಿದ್ದಾನೆ. ಇದರ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ.

ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ನಾಸೀರ್ ಪತ್ನಿ ನಾಜ್​ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸದ್ದುಗುಂಟೆಪಾಳ್ಯ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ನಾಜ್​ಳ ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಪತ್ನಿಯ ಪ್ರಿಯಕರನನ್ನು ಕೊಲ್ಲುವುದಾಗಿ ಮೆಸೇಜ್ ಮಾಡಿದ ಆರೋಪಿ

ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಕೊಲೆ ಮಾಡಿದ್ದಲ್ಲದೆ, ಆಕೆಯ ಅಣ್ಣನಿಗೆ ಬೆದರಿಕೆ ಸಂದೇಶವೊಂದನ್ನು ಕಳುಹಿಸಿ ಪರಾರಿಯಾಗಿದ್ದಾನೆ. ನಾಜ್​ಳ ಪ್ರಿಯಕರನನ್ನು ಕೂಡ ಕೊಲ್ಲುವುದಾಗಿ ಮೆಸೇಜ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಸೀರ್​ ಬಂಧನಕ್ಕೆ ಶೋಧಕಾರ್ಯ ನಡೆಸುತ್ತಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:31 pm, Mon, 16 January 23