
ಬೆಂಗಳೂರು: ಉದ್ಯಮಿಗಳಿಗೆ ವಂಚಿಸುತ್ತಿದ್ದ ವಂಚಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೇರಳ ಮೂಲದ ಅಮ್ಜದ್, ಖುಷಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ FIR ದಾಖಲು. ಉದ್ಯಮಿಗಳನ್ನೆ ಟಾರ್ಗೆಟ್ ಮಾಡಿ ಮಕ್ಮಲ್ ಟೋಪಿ ಹಾಕ್ತಿದ್ದ ಅಂತರರಾಜ್ಯ ವಂಚಕರಿವರು.
ಅಷ್ಟೆ ಅಲ್ಲದೆ ಈ ಕಿಡಿಗೇಡಿಗಳು ಕಾರನ್ನ 18 ಲಕ್ಷ ವೆಚ್ಚವಾಗುವಷ್ಟು ಹಾಳು ಮಾಡಿದ್ದಾರೆ. ಕೇರಳ ಸೇರಿದಂತೆ ರಾಜ್ಯದ ಹಲವೆಡೆ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ವಂಚನೆಗೆ ಒಳಗಾದ ಶಾಜೀ ಜಾರ್ಜ್ ಥಾಮಸ್ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ ವಂಚಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
Published On - 7:02 am, Sat, 13 June 20