AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ನಿಮಿಷಗಳಲ್ಲಿ ಎಟಿಎಂ ಒಡೆಯುವುದನ್ನು ಯುವಕರಿಗೆ ಹೇಳಿಕೊಟ್ಟ ‘ಎಟಿಎಂ ಬಾಬಾ’; ಲಕ್ನೋ ಪೊಲೀಸರು ಶಾಕ್!

ಲಕ್ನೋ ಎಟಿಎಂ ದರೋಡೆ: ಬಿಹಾರದ ಛಾಪ್ರಾ ಜಿಲ್ಲೆಯ ಸುಧೀರ್ ಮಿಶ್ರಾ ಎಂಬಾತನಿಂದ ತರಬೇತಿ ಪಡೆದ್ದರು ಎಂದು ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸುಮಾರು ಸಾವಿರ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ್ದಾರೆ, ಮೊಬೈಲ್ ಡೇಟಾವನ್ನು ವಿಶ್ಲೇಷಿಸಿದ್ದಾರೆ ಮತ್ತು ಕಳ್ಳರನ್ನು ಹಿಡಿಯಲು ಲಕ್ನೋದ ಸುತ್ತಮುತ್ತಲಿನ ಟೋಲ್ ಬೂತ್‌ಗಳನ್ನು ಟ್ರ್ಯಾಕ್ ಮಾಡಿದ್ದಾರೆ.

15 ನಿಮಿಷಗಳಲ್ಲಿ ಎಟಿಎಂ ಒಡೆಯುವುದನ್ನು ಯುವಕರಿಗೆ ಹೇಳಿಕೊಟ್ಟ 'ಎಟಿಎಂ ಬಾಬಾ'; ಲಕ್ನೋ ಪೊಲೀಸರು ಶಾಕ್!
ಸಾಂದರ್ಭಿಕ ಚಿತ್ರImage Credit source: Shutterstock
ನಯನಾ ಎಸ್​ಪಿ
|

Updated on: Apr 27, 2023 | 4:11 PM

Share

ಎಟಿಎಂ ದರೋಡೆಕೋರರು (ATM Robbery) ಕೇವಲ 15 ನಿಮಿಷದಲ್ಲಿ ಎಟಿಎಂ (ATM) ಒಡೆಯುವ ತರಬೇತಿ ಪಡೆದಿದ್ದೇವೆ ಎಂದು ಹೇಳಿದಾಗ ಲಕ್ನೋ ಪೊಲೀಸರು (Lucknow Police) ಆಶ್ಚರ್ಯಚಕಿತರಾದರು. ಏಪ್ರಿಲ್ 4 ರಂದು ಎಟಿಎಂನಿಂದ 39.58 ಲಕ್ಷ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ನಾಲ್ವರು ವ್ಯಕ್ತಿಗಳಿಂದ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸುಶಾಂತ್ ಗೋಲ್ಡ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆ ನಡೆದಿದೆ. ಮಂಗಳವಾರ (ಏಪ್ರಿಲ್ 25) ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಯುವಕರು ಬಿಹಾರದ ಛಾಪ್ರಾ ಜಿಲ್ಲೆಯ ಸುಧೀರ್ ಮಿಶ್ರಾ ಅವರಿಂದ ತರಬೇತಿ ಪಡೆದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎಟಿಎಂ ಬಾಬಾ ಎಂದು ಕರೆಯಲ್ಪಡುವ ಸುಧೀರ್ ಮಿಶ್ರಾ ಅವರು ಹಲವಾರು ನಿರುದ್ಯೋಗಿ ಯುವಕರಿಗೆ ಕೇವಲ 15 ನಿಮಿಷಗಳಲ್ಲಿ ಎಟಿಎಂಗಳನ್ನು ಒಡೆಯುವ ಬಗ್ಗೆ ತರಬೇತಿ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈ ಖತರ್ನಾಕ್ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಎನ್ನಲಾದ ಸುಧೀರ್ ಮಿಶ್ರಾ ಅಲಿಯಾಸ್ ‘ಎಟಿಎಂ ಬಾಬಾ’ಗಾಗಿ ಪೊಲೀಸರು ಇದೀಗ ಹುಡುಕಾಟ ನಡೆಸಿದ್ದಾರೆ. ಪೊಲೀಸರು ಸುಮಾರು ಸಾವಿರ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ್ದಾರೆ, ಮೊಬೈಲ್ ಡೇಟಾವನ್ನು ವಿಶ್ಲೇಷಿಸಿದ್ದಾರೆ ಮತ್ತು ಕಳ್ಳರನ್ನು ಹಿಡಿಯಲು ಲಕ್ನೋದ ಸುತ್ತಮುತ್ತಲಿನ ಟೋಲ್ ಬೂತ್‌ಗಳನ್ನು ಟ್ರ್ಯಾಕ್ ಮಾಡಿದ್ದಾರೆ.

ಪೊಲೀಸ್ ಅಧಿಕಾರಿಯ ಪ್ರಕಾರ, ಆರೋಪಿಗಳು ನಗರದಿಂದ ಪರಾರಿಯಾದ ನೀಲಿ ಬಣ್ಣದ ಕಾರನ್ನು ಲೂಟಿ ಮಾಡಿದ ಎಟಿಎಂ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದ ಸಹಾಯದಿಂದ ಪತ್ತೆಹಚ್ಚಲಾಗಿದೆ.

ಇದನ್ನೂ ಓದಿ: 150 ವರ್ಷ ಹಳೆಯ ಪೇಂಟಿಂಗ್​ನಲ್ಲಿದ್ದ ಹುಡುಗಿಯ ಕೈಲಿತ್ತು ಸ್ಮಾರ್ಟ್​ಫೋನ್ ಇದು ಹೇಗೆ ಸಾಧ್ಯ?

ಪೊಲೀಸರು ಸುಲ್ತಾನ್‌ಪುರ ರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಧೀರ್ ಮಿಶ್ರಾ ಅವರಿಂದ ಎಟಿಎಂ ಒಡೆಯುವ ತಂತ್ರಗಳನ್ನು ಕಲಿತಿದ್ದೇನೆ ಎಂದು ನೀರಜ್, ಗುರುತಿಸಲಾದ ಆರೋಪಿಗಳಲ್ಲಿ ಒಬ್ಬರು ಪೊಲೀಸರಿಗೆ ತಿಳಿಸಿದ್ದಾರೆ. ನೀರಜ್ ಗ್ಯಾಂಗ್‌ನ ಖಾಯಂ ಸದಸ್ಯನಾಗಿದ್ದು, ಆತನ ವಿರುದ್ಧ ಐದು ಪ್ರಕರಣಗಳಿವೆ ಎಂದು ಎಸ್‌ಎಚ್‌ಒ ಗಾಲ್ಫ್ ಸಿಟಿ ಪೊಲೀಸ್ ಠಾಣೆಯ ಶೈಲೇಂದ್ರ ಗಿರಿಯನ್ನು ವರದಿ ಉಲ್ಲೇಖಿಸಿದೆ. ಗ್ಯಾಂಗ್ ಕಿಂಗ್‌ಪಿನ್ ಸುಧೀರ್ ಮಿಶ್ರಾ ಗ್ಯಾಂಗ್ ನಡೆಸುತ್ತಿದ್ದರು ಮತ್ತು ವಿವಿಧ ರಾಜ್ಯಗಳ ಜನರನ್ನು ನೇಮಿಸಿಕೊಳ್ಳುತ್ತಿದ್ದರು ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್