ವಧುದಕ್ಷಿಣೆ ಪಡೆದು ವಧು ಕೊಡದೆ ಮೋಸ: ಜಿಗಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ ವರ

|

Updated on: May 30, 2023 | 6:01 PM

ವಧುದಕ್ಷಿಣೆ ಪಡೆದು ನಂತರ ವಧು ನೀಡದೆ ವರನಿಗೆ ವಂಚಿಸಿದ ಆರೋಪ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಧುದಕ್ಷಿಣೆ ಪಡೆದು ವಧು ಕೊಡದೆ ಮೋಸ: ಜಿಗಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ ವರ
ವಧುದಕ್ಷಿಣೆ ಪಡೆದು ವಧು ಕೊಡದೇ ವಂಚಿಸಿದ್ದಾಗಿ ಆರೋಪಿಸಿ ಯುವತಿ ಕುಟುಂಬಸ್ಥರ ವಿರುದ್ಧ ದೂರು ದಾಖಲು
Image Credit source: istock
Follow us on

ಆನೇಕಲ್: ವರದಕ್ಷಿಣೆ (Dowry) ಪಡೆಯುವುದೇ ಕಾನೂನು ಪ್ರಕಾರ ಅಪರಾಧ. ಹೀಗಿದ್ದಾಗಲೂ ವರದಕ್ಷಿಣೆ ನೀಡುವುದು ಸಾಮಾನ್ಯವಾಗಿದೆ. ಈ ನಡುವೆ ವಧುದಕ್ಷಿಣೆ ಪಡೆದು ನಂತರ ವಧು ನೀಡದೆ ವರನಿಗೆ ವಂಚಿಸಿದ ಆರೋಪ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನಲ್ಲಿ ಕೇಳಿಬಂದಿದ್ದು, ಯುವತಿ ಮತ್ತು ಆಕೆಯ ಕುಟುಂಬಸ್ಥರ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2021‌‌ ಮಾರ್ಚ್ ತಿಂಗಳಲ್ಲಿ ಜಿಗಣಿಯ ನಾರಾಯಣ‌ ನಾಯಕ್ ಎಂಬುವರ ಜೊತೆ ರಾಯಚೂರು ಜಿಲ್ಲೆಯ ಸಿಂಧನೂರು‌‌ ತಾಲೂಕಿನ ಯುವತಿಯ ಮದುವೆ ಮಾತುಕತೆ ನಡೆದಿತ್ತು. ಅಂದು ನಮ್ಮ ಬಳಿ ಹಣ ಇಲ್ಲ ಹೀಗಾಗಿ 2 ವರ್ಷದ ನಂತರ ಮದುವೆ ಮಾಡುವುದಾಗಿ ಮದುವೆಗೆ ವಿಳಂಭ ಮಾಡಿದ್ದರು. ಇದೇ ವೇಳೆ ವಧುದಕ್ಷಿಣೆಯಾಗಿ 2 ಲಕ್ಷ ರೂ. ಕೂಡ ಕೇಳಲಾಗಿತ್ತು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Viral Video: ವರದಕ್ಷಿಣೆ ಕೇಳ್ತೀಯಾ… ಮಗಳು, ನೆಂಟರಿಷ್ಟರ ಎದುರೇ ಅಳಿಯನಿಗೆ ಬಿತ್ತು ಮಾವನಿಂದ ಚಪ್ಪಲಿ ಏಟು!

ಎರಡು ವರ್ಷ ಕಳೆದರೂ ಮದುವೆ ತೆಗೆಯುವ ಏರ್ಪಾಟಿನಲ್ಲಿ ಇಲ್ಲದ ಹಿನ್ನೆಲೆ ವಿಚಾರಿಸಿದಾಗ ಮದುವೆ ಬೇಡ ಎಂಬ ನಿಲುವಿಗೆ ಯುವತಿ ಮತ್ತು ಆಕೆಯ ಕುಟುಂಬಸ್ಥರು ಬಂದಿದ್ದರು. ಸದ್ಯ ನಾವು ಕೊಟ್ಟ ವಧುದಕ್ಷಿಣೆ ವಾಪಸ್ ನೀಡುವಂತೆ ಜಿಗಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅದರಂತೆ ವಧುವಿನ ಸಂಬಂಧಿಕರಾದ ಲಕ್ಕಪತಿ ರವಿ ವಿರುದ್ಧ ದೂರು ದಾಖಲಾಗಿದೆ.

ಇತ್ತ ವಧುವಿನ ಕಡೆಯಿಂದಲೂ ಸ್ಪಷ್ಟನೆ ನೀಡಲಾಗಿದ್ದು, ನಾರಾಯಣ ನಾಯಕ್ ಸುಳ್ಳು ಹೇಳಿ ಮದುವೆ ಆಗಲು ಮುಂದಾಗಿದ್ದರು. ಊರಲ್ಲಿ ಬಹಳಷ್ಟು ಆಸ್ತಿಪಾಸ್ತಿ‌ ಇದೆ ಅಂತ ಹೇಳಿದ್ದರು. ಆದರೆ ನಾವು ಊರಿಗೆ ಭೇಟಿ ನೀಡಿದಾಗ ಅಂಥಾದ್ದೇನು ಇರಲಿಲ್ಲ. ತಂದೆ ತಾಯಿ‌ ಮಗಳ ಭವಿಷ್ಯ ನೋಡಿ ಬೇಡ ಅಂದಿದ್ದಾರೆ ಅಂತ ವಧುವಿನ ಅಕ್ಕ ಹಾಗೂ ಸಂಬಂಧಿಕರು ಹೇಳಿದ್ದಾರೆ. ಸದ್ಯ ಮದುವೆ ಬೇಡವೆಂದಿದ್ದರೆ ವಧುದಕ್ಷಿಣೆ ಯಾಕೆ ಪಡೆಯಬೇಕಿತ್ತು ಅಂತ ಪ್ರಶ್ನೆ ಎದಿದ್ದು, ಜಿಗಣಿ ಪೊಲೀಸರು ವರನ ಕಡೆಯಿಂದ ದೂರು ಸ್ವೀಕರಿಸಿದ್ದಾರೆ.

ಕ್ರೈಂ ನ್ಯೂಸ್​ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Tue, 30 May 23