ಸ್ನೇಹಿತನ ಹತ್ಯೆಗೆ ಪ್ರತೀಕಾರ: ಕೊಲೆ ಮಾಡಿದವನ ತಮ್ಮ ಹತನಾದ

|

Updated on: May 08, 2020 | 6:55 PM

ಮೈಸೂರು: ಲಾಕ್​ಡೌನ್​ ಸಂದರ್ಭದಲ್ಲೂ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿ ಸ್ನೇಹಿತನ ಕೊಲೆಗೆ ಪ್ರತೀಕಾರ ತೀರಿಸಿಕೊಂಡಿರುವ ಘಟನೆ ಮೈಸೂರಿನ ಜ್ಯೋತಿನಗರದಲ್ಲಿ ನಡೆದಿದೆ. 22 ವರ್ಷದ ಅಭಿಷೇಕ್ ಕೊಲೆಯಾದ ದುರ್ದೈವಿ. ಹಳೆ ದ್ವೇಷದ ಹಿನ್ನೆಲೆ ಕ್ಯಾತಮಾರನಹಳ್ಳಿಯಲ್ಲಿ ಮೊನ್ನೆ ಸತೀಶ್ ಎಂಬ ಯುವಕನ ಕೊಲೆಯಾಗಿತ್ತು. ಮಧು ಮತ್ತು ಕಿರಣ್ ಎಂಬುವರು ಸತೀಶ್​ನನ್ನು ಹತ್ಯೆ ಮಾಡಿದ್ದರು. ಹೀಗಾಗಿ ಕೊಲೆಗೆ ಪ್ರತೀಕಾರವಾಗಿ ಕಿರಣ್ ಸಹೋದರ ಅಭಿಷೇಕ್​ನನ್ನು ಬಟನ್ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಇರ್ಫಾನ್, ಮಹೇಶ್​ನನ್ನು ಪೊಲೀಸರು […]

ಸ್ನೇಹಿತನ ಹತ್ಯೆಗೆ ಪ್ರತೀಕಾರ: ಕೊಲೆ ಮಾಡಿದವನ ತಮ್ಮ ಹತನಾದ
Follow us on

ಮೈಸೂರು: ಲಾಕ್​ಡೌನ್​ ಸಂದರ್ಭದಲ್ಲೂ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿ ಸ್ನೇಹಿತನ ಕೊಲೆಗೆ ಪ್ರತೀಕಾರ ತೀರಿಸಿಕೊಂಡಿರುವ ಘಟನೆ ಮೈಸೂರಿನ ಜ್ಯೋತಿನಗರದಲ್ಲಿ ನಡೆದಿದೆ. 22 ವರ್ಷದ ಅಭಿಷೇಕ್ ಕೊಲೆಯಾದ ದುರ್ದೈವಿ.

ಹಳೆ ದ್ವೇಷದ ಹಿನ್ನೆಲೆ ಕ್ಯಾತಮಾರನಹಳ್ಳಿಯಲ್ಲಿ ಮೊನ್ನೆ ಸತೀಶ್ ಎಂಬ ಯುವಕನ ಕೊಲೆಯಾಗಿತ್ತು. ಮಧು ಮತ್ತು ಕಿರಣ್ ಎಂಬುವರು ಸತೀಶ್​ನನ್ನು ಹತ್ಯೆ ಮಾಡಿದ್ದರು. ಹೀಗಾಗಿ ಕೊಲೆಗೆ ಪ್ರತೀಕಾರವಾಗಿ ಕಿರಣ್ ಸಹೋದರ ಅಭಿಷೇಕ್​ನನ್ನು ಬಟನ್ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ.

ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಇರ್ಫಾನ್, ಮಹೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Published On - 5:28 pm, Fri, 8 May 20