ನೆಲಮಂಗಲ: 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಬಸ್ ಕ್ಲೀನರ್: ಆರೋಪಿ ಅರೆಸ್ಟ್

ಶಾಲೆಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಖಾಸಗಿ ಬಸ್​ ಕ್ಲೀನರ್ ಅತ್ಯಾಚಾರ ಎಸಗಿದ ಪ್ರಕರಣ ನೆಲಮಂಗಲದಲ್ಲಿ ನಡೆದಿದೆ. ಮಗಳು ನಾಪತ್ತೆಯಾಗಿರುವ ಬಗ್ಗೆ ಪೋಷಕರು ದೂರು ನೀಡಿದ್ದರು. ಕರೆ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಬಾಲಕಿಯನ್ನು ರಕ್ಷಣೆ ಮಾಡಿದ್ದು, ಈ ವೇಳೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲ: 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಬಸ್ ಕ್ಲೀನರ್: ಆರೋಪಿ ಅರೆಸ್ಟ್
ಪ್ರಾತಿನಿಧಿಕ ಚಿತ್ರ
Edited By: Rakesh Nayak Manchi

Updated on: Jan 12, 2024 | 8:25 AM

ನೆಲಮಂಗಲ, ಜ.12: ಶಾಲೆಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಖಾಸಗಿ ಬಸ್​ ಕ್ಲೀನರ್ ಅತ್ಯಾಚಾರ (Rape) ಎಸಗಿದ ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ದೊಡ್ಡಬಳ್ಳಾಪುರದ ಆನಂದ್​ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಾರದ ಹಿಂದೆ ಶಾಲೆಗೆ ಹೋಗಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಸಿದ್ದರು. ಮೊಬೈಲ್ ಕರೆ ಆಧಾರದ ಮೇಲೆ ಯಲಹಂಕ ಬಳಿ ಬಾಡಿಗೆ ಮನೆಯಲ್ಲಿರಿಸಿದ್ದ 14 ವರ್ಷದ ಬಾಲಕಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಸಂತ್ರಸ್ತ ಬಾಲಕಿ ದಾಬಸ್ ಪೇಟೆಯಿಂದ ತ್ಯಾಮಗೊಂಡ್ಲುನಲ್ಲಿರುವ ಶಾಲೆಗೆ ದಿನನಿತ್ಯ ಖಾಸಗಿ ಬಸ್​ನಲ್ಲಿ ಬಾಲಕಿ ಹೋಗಿ ಬರುತ್ತಿದ್ದಳು.

ಇದನ್ನೂ ಓದಿ: ರಾಮನಗರ: 12 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ: ಸ್ಥಳೀಯರಿಂದ ಧರ್ಮದೇಟು!

ದಿನನಿತ್ಯ ಖಾಸಗಿ ಬಸ್ ದಾಬಸ್ ಪೇಟೆ-ದೊಡ್ಡಬಳ್ಳಾಪುರ ಮಾರ್ಗವಾಗಿ ಬರುತ್ತಿದ್ದ ಬಸ್​ನಲ್ಲಿ ಅರೋಪಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದನು. 2021ರಲ್ಲಿ ಬ್ಯಾಡರಹಳ್ಳಿ ಠಾಣೆಯಲ್ಲಿ ಇದೇ ರೀತಿ ಪೋಕ್ಸೊ ಪ್ರಕರಣದಲ್ಲಿ ಮೂರು ವರ್ಷ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾಗಿದ್ದನು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us