ಬೆಂಗಳೂರು, ಡಿ.16: ನಗರದಲ್ಲಿ (Bengaluru) ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಪತ್ನಿಯನ್ನು ವಿಧವೆ ಎಂದು ಹೇಳಿ ನೋಡಿಕೊಳ್ಳುವಂತೆ ಉದ್ಯಮಿ ಜೊತೆ ಬಿಟ್ಟು ಹನಿಟ್ಯ್ರಾಪ್ (Honeytrap) ನಡೆಸಿದ ಪ್ರಕರಣ ಸಂಬಂಧ ದಂಪತಿ ಸಹಿತ ನಾಲ್ವರು ಆರೋಪಿಗಳನ್ನು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ.
ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಬಂಧಿತ ಆರೋಪಿಗಳಾಗಿದ್ದು, ಈ ಪೈಕಿ ಖಲೀಮ್ ಮತ್ತು ಸಭಾ ದಂಪತಿಯಾಗಿದ್ದಾರೆ. ಈ ಗ್ಯಾಂಗ್ ಅತೀವುಲ್ಲಾ ಎಂಬ ಉದ್ಯಮಿಯನ್ನ ಟ್ರ್ಯಾಪ್ ಮಾಡಿದ್ದ ಹನಿಟ್ರ್ಯಾಪ್ ಮಾಡಿತ್ತು.
ಅತೀವುಲ್ಲಾಗೆ ಪತ್ನಿ ಸಭಾಳನ್ನ ವಿಧವೆ ಅಂತಾ ಪರಿಚಯ ಮಾಡಿಸಿಕೊಟ್ಟು ಆಕೆಯನ್ನು ನೋಡಿಕೊಳ್ಳುವಂತೆ ಹೇಳಿದ್ದ. ನಂತರ ಸಭಾ ಮತ್ತು ಅತೀವುಲ್ಲಾ ನಡುವೆ ದೈಹಿಕ ಸಂಪರ್ಕ ನಡೆದಿತ್ತು. ಕೆಲ ದಿನಗಳ ನಂತರ ಆರ್ ಆರ್ ನಗರದಲ್ಲಿ ರೂಮ್ ಬುಕ್ ಮಾಡಲು ಆಧಾರ್ ಕಾರ್ಡ್ ಜೊತೆ ಬಾ ಎಂದು ಅತೀವುಲ್ಲಾನನ್ನು ಕರೆದಿದ್ದಾಳೆ.
ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಪತ್ನಿ ಅಡ್ಡಿ ಎಂದು ವಿಷದ ಇಂಜೆಕ್ಷನ್ ಚುಚ್ಚಿ ಕೊಲೆ ಆರೋಪ, ಪತಿಯ ಲವರ್ ಜೊತೆ ಪತ್ನಿ ಮಾತನಾಡಿದ ಆಡಿಯೋ ಪತ್ತೆ
ಅದರಂತೆ, ಆರ್ಅರ್ ನಗರಕ್ಕೆ ಬಂದಿದ್ದ ಅತೀವುಲ್ಲಾ, ರೂಮ್ ಬುಕ್ ಮಾಡಿ ಒಳಗಡೆ ಹೋದ ಕೆಲ ಹೊತ್ತಲ್ಲೇ ಖಲೀಮ್, ರಕೀಬ್, ಅತೀಕ್ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಸೀನ್ ಕ್ರಿಯೇಟ್ ಮಾಡಿದ್ದ ಆರೋಪಿಗಳು, ಆರು ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದರೆ ಈ ವಿಚಾರ ನಿಮ್ಮ ಮನೆಯವರಿಗೆ ಹೇಳುತ್ತೇವೆ ಅಂತ ಬೆದರಿಕೆ ಹಾಕುತ್ತಾರೆ.
ಅಷ್ಟರಲ್ಲೇ ಮಾಹಿತಿ ತಿಳಿದು ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದೇ ರೀತಿ ಹಲವರಿಗೆ ಸುಲಿಗೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 am, Sat, 16 December 23