AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಪತ್ನಿಯ ಕತ್ತು ಸೀಳಿ ಹತ್ಯೆ – ಇಬ್ಬರೂ ಜೀವನದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು

ಬೆಂಗಳೂರಿನಲ್ಲಿ ಪತಿಯು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಅದಾದ ಮೇಲೆ ರಮ್ಯಾ ಪತಿಯನ್ನು ಭದ್ರಾವತಿಗೆ ಕರೆದುಕೊಂಡು ಬಂದಿದ್ದಳು. ಇಬ್ಬರ ನಡುವೆ ಅನೈತಿಕ ಸಂಬಂಧ ವಿಚಾರವಾಗಿ ಜಗಳ ಶುರುವಾಗಿತ್ತು. ಡಿ.​​ 13ರ ರಾತ್ರಿ ಪತಿ-ಪತ್ನಿ ನಡುವೆ ಇದೇ ವಿಚಾರಕ್ಕಾಗಿ ಗಲಾಟೆ ಆಗಿದೆ.

ಗಂಡನ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಪತ್ನಿಯ ಕತ್ತು ಸೀಳಿ ಹತ್ಯೆ - ಇಬ್ಬರೂ ಜೀವನದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು
ಪತಿಯ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಪತ್ನಿ ರಮ್ಯಾ ಕತ್ತು ಸೀಳಿ ಹತ್ಯೆ
Basavaraj Yaraganavi
| Edited By: |

Updated on: Dec 16, 2023 | 2:23 PM

Share

ಆತನಿಗೆ ಮದುವೆಯಾಗಿ ಪತ್ನಿಗೆ ವಿಚ್ಛೇದನ ಕೊಟ್ಟಿದ್ದ. ಈ ನಡುವೆ ಮೂರು ವರ್ಷದ ಹಿಂದೆ ಮತ್ತೊಬ್ಬಳ ಜೊತೆ ಮದುವೆಯಾಗಿದ್ದನು. ಅವಳಿಗೂ ಪತಿಯಿಂದ ವಿಚ್ಛೇದನವಾಗಿತ್ತು ( Divorce). ಇಬ್ಬರೂ ಜೀವನದ ಸೆಕೆಂಡ್ ಇನ್ನಿಂಗ್ಸ್ ( illicit relationship) ಆರಂಭಿಸಿದ್ದರು. ಈ ನಡುವೆ ಪತಿರಾಯ ಎರಡನೇ ಪತ್ನಿಗೂ ಮೋಸ ಮಾಡಿ ಮತ್ತೊ ಇನ್ನೊಬ್ಬಳ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ. ಆ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಎರಡನೇ ಪತ್ನಿ ಈಗ ಜೀವ ಕಳೆದುಕೊಂಡಿದ್ದಾಳೆ. ಭದ್ರಾವತಿ (Bhadravathi) ತಾಲೂಕಿನ ಬೊಮ್ಮಕಟ್ಟೆ ಬಡಾವಣೆಯಲ್ಲಿ ನಡೆದ ಘಟನೆ ಇದು. ರಮ್ಯಾ ಮತ್ತು ನಾಗಭೂಷಣ ಇಬ್ಬರ ಮದುವೆಯಾಗಿ ಮೂರು ವರ್ಷ ಆಗಿತ್ತು. ನಾಗಭೂಷಣದ್ದು ಮತ್ತು ರಮ್ಯಾಳದ್ದು ಇದು ಎರಡನೇ ಮದುವೆ. ಮೊದಲ ಪತ್ನಿಯ ಜೊತೆ ವಿಚ್ಛೇದನ ಪಡೆದುಕೊಂಡಿದ್ದ ಈ ಕಥಾನಕದ ಖಳನಾಯಕ ಪತಿರಾಯ.

ರಮ್ಯಾಗೂ ಕೂಡಾ ಇದು ಎರಡನೇ ಮದುವೆ. ಮೊದಲ ಪತಿ ಜೊತೆ ವಿಚ್ಛೇದನವಾಗಿದೆ. ಇಬ್ಬರೂ ಸೆಕೆಂಡ್ ಇನ್ನಿಂಗ್ ಶುರುಮಾಡಿದ್ದರು. ರಮ್ಯಾ ಭದ್ರಾವತಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಪತಿಗೆ ಒಂದು ಹೊಸ ಆಟೋ ಕೊಡಿಸಿದ್ದಳು. ಆತ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡಿದ್ದ. ಮದುವೆಯಾದ ಬಳಿಕ ಪತ್ನಿ ರಮ್ಯಾ ಭದ್ರಾವತಿ ನಗರದ ಬೊಮ್ಮಕಟ್ಟೆಯಲ್ಲಿ ಪತಿಯ ವಯಸ್ಸಾದ ತಂದೆಯ ಜೊತೆ ವಾಸವಾಗಿದ್ದಳು.

ಎರಡನೇ ಪತ್ನಿಗೂ ವಂಚನೆ ಮಾಡಿ ಬೆಂಗಳೂರಿನಲ್ಲಿ ಸಂಬಂಧಿ ಮಹಿಳೆಯ ಜೊತೆ ಅನೈತಿಕ ಸಂಬಂಧ:

ನಾಗಭೂಷಣ ಭದ್ರಾವತಿಗೆ ಬಂದು-ಹೋಗಿ ಮಾಡುತ್ತಿದ್ದ. ಮೊದಲ ಪತ್ನಿಗೆ ಒಂದು ಗಂಡು ಮಗು ಇದೆ. ಸದ್ಯ ಆ ಮಗು ತುಮಕೂರಿನ ಸಿದ್ದಗಂಗಾ ಮಠದಲ್ಲಿ ವ್ಯಾಸಾಂಗ ಮಾಡುತ್ತಿದೆ. ಈ ನಡುವೆ ಪತಿಯು ಎರಡನೇ ಪತ್ನಿ ರಮ್ಯಾಗೂ ವಂಚನೆ ಮಾಡಿ ಬೆಂಗಳೂರಿನಲ್ಲಿ ಸಂಬಂಧಿ ಮಹಿಳೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಈ ಸುದ್ದಿಯು ಪತ್ನಿ ರಮ್ಯಾಗೆ ಗೊತ್ತಾಗಿದೆ.

ಬೆಂಗಳೂರಿನಲ್ಲಿ ಪತಿಯು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಈ ಘಟನೆ ಬಳಿಕ ಪತಿಯನ್ನು ರಮ್ಯಾ ಭದ್ರಾವತಿಗೆ ಕರೆದುಕೊಂಡು ಬಂದಿದ್ದಳು. ಪತಿ ಮತ್ತು ಪತ್ನಿ ನಡುವೆ ಅನೈತಿಕ ಸಂಬಂಧ ವಿಚಾರವಾಗಿ ಪದೇ ಪದೇ ಜಗಳ ಶುರುವಾಗಿತ್ತು. ಮೊನ್ನೆ ಡಿಸೆಂಬರ್​​ 13ರ ರಾತ್ರಿ ಪತಿ-ಪತ್ನಿ ನಡುವೆ ಇದೇ ವಿಚಾರಕ್ಕಾಗಿ ಗಲಾಟೆ ಆಗಿದೆ.

ಗಲಾಟೆಯು ವಿಕೋಪಕ್ಕೆ ತಿರುಗಿದೆ. ಪತಿಯು ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಪತ್ನಿಯ ಕತ್ತು ಸೀಳಿದ್ದಾನೆ. ಪತ್ನಿಯು ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ. ಪತಿಯು 112 ಗೆ ಕಾಲ್ ಮಾಡಿದ್ದಾನೆ. ಯಾರೂ ಕಾಲ್ ರೀಸಿವ್ ಮಾಡಿಲ್ಲ. ಬಳಿಕ ಈತನೇ ಪೇಪರ್ ಟೌನ್ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಪತ್ನಿಯ ಕೊಲೆ ಮಾಡಿರುವ ಮಾಹಿತಿಯನ್ನು ನೀಡಿದ್ದನು.

ಇಬ್ಬರೂ ಎರಡನೇ ಮದುವೆಯಾಗಿದ್ದರು. ರಮ್ಯಾಳದ್ದು ಚಿಕ್ಕಬಳ್ಳಾಪುರ ಜಿಲ್ಲೆ. ಅಲ್ಲಿಂದ ಬದುಕು ಕಟ್ಟಿಕೊಳ್ಳಲು ಭದ್ರಾವತಿಗೆ ಬಂದಿದ್ದಳು. ನಾಗಭೂಷಣ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದನು. ಇಬ್ಬರ ನಡುವೆ ಚಾಟಿಂಗ್, ಟಾಕಿಂಗ್ ಶುರುವಾಗಿತ್ತು. ಬಳಿಕ ಪರಸ್ಪರ ಭೇಟಿಯಾದ ಬಳಿಕ ಇಬ್ಬರು ತಮ್ಮ ತಮ್ಮ ಮೊದಲ ಮದುವೆ ಹಾಗೂ ವಿಚ್ಚೇದನ ವಿಚಾರ ಹಂಚಿಕೊಂಡಿದ್ದಾರೆ.

ಬಳಿಕ ಪರಸ್ಪರ ಒಪ್ಪಿಕೊಂಡು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆರಂಭದಲ್ಲಿ ಇಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಈ ಮೊದಲು ಬೆಂಗಳೂರಿನಲ್ಲಿ ಓಲಾ ದಲ್ಲಿ ಕೆಲಸ ಮಾಡಿರುವ ಅನುಭವ ಪತಿ ನಾಗಭೂಷಣಗೆ ಇತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿ ದುಡಿಯುತ್ತೇನೆಂದು ನಾಗಭೂಷಣ ಮುಂದಾಗಿದ್ದ. ಪತಿಗೆ ಸಾಲ ಮಾಡಿ ಆಟೋ ಕೊಡಿಸಿದ್ದಳು ರಮ್ಯಾ.

ಇದನ್ನೂ ಓದಿ: ಗೋಡಂಬಿ ತೋಪಿನಲ್ಲಿ ಮೋಜು ಮಸ್ತಿ ಮಾಡಲು ಗಂಡನನ್ನು ಕರೆದುಕೊಂಡು ಹೋದವಳು.. ಆಮೇಲೆ ಎನು ಮಾಡಿದಳು ಗೊತ್ತಾ!?

ಆದ್ರೆ ಆರು ತಿಂಗಳ ಹಿಂದೆ ಬೆಂಗಳೂರಿಗೆ ಹೋಗಿದ್ದ ಪತಿ ವಾಪಸ್ ಬಂದಿರಲಿಲ್ಲ. ಇದರ ಜೊತೆಗೆ ಪತ್ನಿ ರಮ್ಯಾಳಿಂದ ದೂರವಾಗುತ್ತಿದ್ದ. ಇದನ್ನು ಗಮಸಿಸಿದ ರಮ್ಯಾ ಬೆಂಗಳೂರಿಗೆ ಹೋಗಿ ನೋಡಿದಾಗ ಅಲ್ಲಿ ಅತ್ತೆ ಮಗಳ ಜೊತೆ ನಾಗಭೂಷಣ ಅನೈತಿಕ ಸಂಬಂಧ ಹೊಂದಿದ್ದು ಬೆಳಕಿಗೆ ಬಂದಿತ್ತು. ಈ ಘಟನೆ ಬಳಿಕ ನಾಗಭೂಷಣ ವಾಪಸ್ ಭದ್ರಾವತಿಗೆ ಬಂದಿದ್ದನು. ಪದೇ ಪದೇ ಪತಿಯು ಮೋಸ ಮಾಡಿರುವುದಾಗಿ ಪತ್ನಿಯು ಗಲಾಟೆ ಮಾಡುತ್ತಿದ್ದಳಂತೆ. ಇದೇ ವಿಚಾರಕ್ಕೆ ಮೊನ್ನೆ ರಾತ್ರಿ ಕೂಡಾ ಗಲಾಟೆ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿ ಪತ್ನಿಯ ಸಾವಿನಲ್ಲಿ ಅಂತ್ಯವಾಗಿತ್ತು.

ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ಜೋಡಿಗಳ ಸಂಸಾರ ಕೆಲವೇ ವರ್ಷದಲ್ಲಿ ಬಿರುಕು ಬಿಟ್ಟಿತ್ತು. ದುಡಿಯುತ್ತೇನೆಂದು ಬೆಂಗಳೂರಿಗೆ ಹೋಗಿದ್ದ ಪತಿಯು ಅಲ್ಲಿ ಅತ್ತೆ ಮಗಳ ಜೊತೆ ಅನೈತಿಕ ಸಂಬಂಧ ಶುರು ಮಾಡಿದ್ದ. ಎರಡನೇ ಪತ್ನಿ ರಮ್ಯಾ ತನಗೆ ಆಗಿರುವ ಮೋಸ.. ವಂಚನೆಯಿಂದ ನೊಂದಿದ್ದಳು. ಈ ವಿಚಾರಕ್ಕೆ ಪತಿಯನ್ನು ಪತ್ನಿ ಪದೇ ಪದೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. ಇದೇ ವಿಚಾರಕ್ಕೆ ಎರಡನೇ ಪತ್ನಿಯ ಕಥೆಯನ್ನೇ ಎರಡನೇ ಪತಿಯು ಮಗಿಸಿದ್ದು ವಿಪರ್ಯಾಸವೇ ಸರಿ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ