AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಡಂಬಿ ತೋಪಿನಲ್ಲಿ ಮೋಜು ಮಸ್ತಿ ಮಾಡಲು ಗಂಡನನ್ನು ಕರೆದುಕೊಂಡು ಹೋದವಳು.. ಆಮೇಲೆ ಎನು ಮಾಡಿದಳು ಗೊತ್ತಾ!?

ಪತ್ನಿಯ ವಿವಾಹೇತರ ಸಂಬಂಧವೇ ಗಂಡನ ಕೊಲೆಗೆ ಕಾರಣವಾಗಿತ್ತು. ತನ್ನ ಅಕ್ರಮ ಸಂಬಂಧಕ್ಕೆ ಪತಿ ಅಡ್ಡವಾಗುತ್ತಿದ್ದಾನೆ ಎಂದು ಭಾವಿಸಿದ ವಿವಾಹಿತ ಮಹಿಳೆಯೋರ್ವಳು ತನ್ನ ಪ್ರಿಯಕರನೊಂದಿಗೆ ಪ್ಲಾನ್ ಮಾಡಿ ಸುತ್ತಿಗೆ ಕಲ್ಲುಗಳಿಂದ ಹೊಡೆದು ಗಂಡನನ್ನು ಕೊಂದಿರುವುದು ಹೀಗೆ. ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿ ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಅನಕಾಪಲ್ಲಿ ಜಿಲ್ಲೆಯ ಗೋಲುಗೊಂಡ ಮಂಡಲದ ಮಲ್ಲಂಪೇಟೆಯ ಗುಡಿವಾಡ ಅಪ್ಪಲನಾಯ್ಡು ಮತ್ತು ಜಾನಕಿ ಪತಿ-ಪತ್ನಿಯಾಗಿದ್ದರು.

ಗೋಡಂಬಿ ತೋಪಿನಲ್ಲಿ ಮೋಜು ಮಸ್ತಿ ಮಾಡಲು ಗಂಡನನ್ನು ಕರೆದುಕೊಂಡು ಹೋದವಳು.. ಆಮೇಲೆ ಎನು ಮಾಡಿದಳು ಗೊತ್ತಾ!?
ವಿವಾಹೇತರ ಸಂಬಂಧ, ಪತಿಯ ಹತ್ಯೆ
ಸಾಧು ಶ್ರೀನಾಥ್​
|

Updated on: Aug 23, 2023 | 9:46 AM

Share

ಅನಕಾಪಲ್ಲಿ ಜಿಲ್ಲೆ, ಆಗಸ್ಟ್ 23: ಅವರಿಬ್ಬರೂ ಗಂಡ ಹೆಂಡತಿ..! ದೇವಸ್ಥಾನಕ್ಕೆ ಕರೆದುಕೊಂಡು ಹೋಗುವಂತೆ ಪತ್ನಿ, ತನ್ನ ಪತಿಯನ್ನು ಕೇಳಿದಳು. ಅವನು ಓಕೆ ಎಂದು ಹೇಳಿ ಅವಳನ್ನು ಕರೆದುಕೊಂಡು ಹೋದನು. ವಾಪಸು ಬರುವಾಗ ಒಂದು ತೋಟದ ಬಳಿ ನಿಲ್ಲಿಸಿ, ಮೋಜು ಮಾಡೋಣ ಎಂದಳು. ಗಂಡನ ತಲೆಯನ್ನು ಮಡಿಲಲ್ಲಿ ಇಟ್ಟುಕೊಂಡು ನೇವರಿಸತೊಡಗಿದಳು (Woman). ಅಬ್ಬೋ ಎಷ್ಟು ಪ್ರೀತಿ.. ಎಂದುಕೊಂಡ ಗಂಡ. ಆ ಪ್ರೀತಿಯ ಹಿಂದಿನ ದುರುದ್ದೇಶವನ್ನು ಗಂಡನಿಗೆ ಗುರುತಿಸಲಾಗಲಿಲ್ಲ. ತನ್ನ ಮಡಿಲಲ್ಲಿ ತಲೆ ಹೂತು ಮೈಮರೆತಿದ್ದ ಗಂಡನನ್ನು ಕೆಲವೇ ಕ್ಷಣಗಳಲ್ಲಿ ಅವನು ಕೊಲ್ಲಲ್ಪಟ್ಟನು. ಆ ಬಳಿಕ ಪತಿಯ ಕೊಲೆಯನ್ನು, ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾಳೆ. ಪ್ರಿಯಕರನ ಮೋಜಿನಲ್ಲಿ ಓಲಾಡುವುದಕ್ಕೆ ಅಡ್ಡವಾಗಿದ್ದ ಗಂಡನನ್ನು ಹೋಗಲಾಡಿಸಲು ಹೆಂಡತಿ ಮಾಡಿದ್ದ ಹತ್ಯೆ ಯೋಜನೆ ಯಶಸ್ವಿಯಾಗಿದೆ (illicit relation) ಎಂದು ಪತ್ನಿ ಮತ್ತು ಅವಳ ಪ್ರಿಯಕರ ಆಮೇಲೆ ಜಬರದಸ್ಥಾಗಿ ಚರ್ಚಿಸುತ್ತಿದ್ದರು. ಆದರೆ ರಂಗಸ್ಥಳಕ್ಕೆ ಪೊಲೀಸರು ಪ್ರವೇಶಿಸಿದಾಗ ಕೊಲೆಯ ರೇಖಾಚಿತ್ರ ಬೆಳಕಿಗೆ ಬಂದಿದ್ದು, ಆರೋಪಿಗಳು ಈಗ ಕಂಬಿ ಹಿಂದೆ ಬಿದ್ದಿದ್ದಾರೆ. ಅನಕಪಲ್ಲಿ (Anakapalle) ಜಿಲ್ಲೆಯಲ್ಲಿ ಪೊಲೀಸರಿಗೆ (AP Police) ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ ಮಹಿಳೆ ಹಾಕಿದ ಮರ್ಡರ್ ಸ್ಕೆಚ್ ಇದು..!

ಪತ್ನಿಯ ವಿವಾಹೇತರ ಸಂಬಂಧವೇ ಗಂಡನ ಕೊಲೆಗೆ ಕಾರಣವಾಗಿತ್ತು. ತನ್ನ ಅಕ್ರಮ ಸಂಬಂಧಕ್ಕೆ ಪತಿ ಅಡ್ಡವಾಗುತ್ತಿದ್ದಾನೆ ಎಂದು ಭಾವಿಸಿದ ವಿವಾಹಿತ ಮಹಿಳೆಯೋರ್ವಳು ತನ್ನ ಪ್ರಿಯಕರನೊಂದಿಗೆ ಪ್ಲಾನ್ ಮಾಡಿ ಸುತ್ತಿಗೆ ಕಲ್ಲುಗಳಿಂದ ಹೊಡೆದು ಗಂಡನನ್ನು ಕೊಂದಿರುವುದು ಹೀಗೆ. ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿ ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಅನಕಾಪಲ್ಲಿ ಜಿಲ್ಲೆಯ ಗೋಲುಗೊಂಡ ಮಂಡಲದ ಮಲ್ಲಂಪೇಟೆಯ ಗುಡಿವಾಡ ಅಪ್ಪಲನಾಯ್ಡು ಮತ್ತು ಜಾನಕಿ ಪತಿ-ಪತ್ನಿ. ಜಾನಕಿ ಹಳೆ ಕೇದಿಪೇಟೆಯ ಚಿಂತಲ ರಾಮು ಅವರೊಂದಿಗೆ ಕೆಲ ವರ್ಷಗಳಿಂದ ಅನ್ಯೋನ್ಯವಾಗಿದ್ದರು. ಈ ಮಧ್ಯೆ, ತನ್ನ ಹೆಂಡತಿ ವಿವಾಹೇತರ ಸಂಬಂಧ ಹೊಂದಿರುವುದರ ವಾಸನೆ ಮೂಗಿಗೆ ಬಡಿದು, ಗಂಡ ಛೀಮಾರಿ ಹಾಕಿದ್ದಾನೆ. ಆ ನಂತರ ಜಾನಕಿ ತನ್ನ ಪತಿಯೊಂದಿಗೆ ಅಕ್ರಮ ಬಿಟ್ಟು ಗಂಟನ ಜೊತೆಗೇ ಸಕ್ರಮ ಸೌಹಾರ್ದ ಸಂಬಂಧ ಹೊಂದಿರುವುದಾಗಿ ನಂಬಿಸಿದ್ದಳು. ಆದರೂ ಬರುಬರುತ್ತಾ, ಅವಳು ಅಕ್ರಮ ದಾರಿಯಲ್ಲಿ ನಡೆಯತೊಡಗಿದ್ದಳು.

ಜಾನಕಿಯ ಭಕ್ತಿ, ದೇವಸ್ಥಾನಕ್ಕೆ ಹೋಗೋಣ ಎಂದಳು..

ಜಾನಕಿ ತನ್ನ ಪತಿಯೊಂದಿಗೆ ಇದ್ದುಕೊಂಡು ತನ್ನ ಗೆಳೆಯನೊಂದಿಗೆ ಅಕ್ರಮ ವ್ಯವಹಾರಗಳನ್ನು ಮುಂದುವರೆಸುತ್ತಾಳೆ. ಆದರೆ, ವಿವಾಹೇತರ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂದು ಭಾವಿಸಿದ ಜಾನಕಿ, ಪತಿ ಅಪ್ಪಲನಾಯ್ಡುನನ್ನು ಕೊನೆಗಾಣಿಸಲು ಪ್ರಿಯಕರನೊಟ್ಟಿಗೆ ಸೇರಿ ನಿರ್ಧರಿಸಿದ್ದಳು. ಲವರ್ ರಾಮು ಜೊತೆ ಪ್ಲಾನ್ ಮಾಡಿದಳು. ಇದರ ಭಾಗವಾಗಿ ಇದೇ ತಿಂಗಳ 20ರಂದು ಕೋಟವುರತ್ಲ ಮಂಡಲದ ಪಾಮುಳವಾಕ ಗ್ರಾಮದ ಪಟ್ಟಲಮ್ಮನ ತಾಯಿ ದೇವಸ್ಥಾನಕ್ಕೆ ಹೋಗಬೇಕು ಎಂದು ಜಾನಕಿ ಪತಿಗೆ ಪುಸಲಾಯಿಸಿದ್ದಾಳೆ. ಪತಿ ಅಪ್ಪಲನಾಯ್ಡು ಪತ್ನಿ ಪರವಾಗಿಲ್ಲ, ಸುದಾರಿಸಿದ್ದಾಳೆ ಎಂದುಕೊಂಡು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗಿದರು.

ಜಾನಕಿ-ರಾಮ ಜೋಡಿಯ ಮೂಲ ಸ್ಕೆಚ್ ಆ ತೋಟದಲ್ಲಿತ್ತು…

ತಾಂಡವ ರಸ್ತೆಗೆ ಹೋಗಿ ಮೋಜು ಮಸ್ತಿ ಮಾಡೋಣ ಎಂದ ಹೆಂಡತಿ, ಹೆಂಡತಿಯ ಮಾತಿನ ಹಿಂದಿನ ಗುಟ್ಟು ಅರ್ಥವಾಗದ ಪತಿ… ಇಬ್ಬರೂ ಬೈಕಿನಲ್ಲಿ ಹೊರಟರು. ಸ್ವಲ್ಪ ದೂರದಲ್ಲಿ ಅವರ ಹಿಂದೆ ಜಾನಕಿಯ ಪ್ರೇಮಿಯಾದ ರಾಮ ನೆರಳಿನಂತೆ ಹಿಂಬಾಲಿಸಿದ್ದಾನೆ. ಜಾನಕಿ ಮತ್ತು ಚಿಂತಲ ರಾಮನ ಹಿಂದಿನ ಯೋಜನೆಯ ಪ್ರಕಾರ, ತಾಂಡವ ನದಿಯ ದಡವನ್ನು ದಾಟಿದ ನಂತರ, ಪತಿ ಜಾನಕಿ ಬಹಿರ್ದೆಸೆಗೆ ಹೋಗಬೇಕು ನಿಲ್ಲಿಸು ಎಂದಿದ್ದಾಳೆ. ಅದಾದಮೇಲೆ ಅಲ್ಲೇ ಇದ್ದ ಗೋಡಂಬಿ ತೋಟದಲ್ಲಿ ಇಬ್ಬರೂ ನವ ಪ್ರೇಮಿಗಳಂತೆ ಕುಳಿತಿದ್ದರು. ಗಂಡನ ತಲೆಯನ್ನು ತೆಗೆದುಕೊಂಡು ತನ್ನ ಮಡಿಲಲ್ಲಿ ಇಟ್ಟುಕೊಂಡಳು.. ಅಪ್ಪಲನಾಯ್ಡು ತನ್ನ ಹೆಂಡತಿ ತನ್ನನ್ನು ಪ್ರೀತಿಸುತ್ತಾಳೆ ಎಮದೇ ಭಾವಿಸಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ಆತ ಕೊಲ್ಲಲ್ಪಟ್ಟ. ಜಾನಕಿಯ ಗೆಳೆಯ ರಾಮು ಹಿಂದಿನಿಂದ ಬಂದು ಸುತ್ತಿಗೆಯಿಂದ ಅಪ್ಪಲನಾಯ್ಡು ತಲೆಗೆ ಬಲವಾಗಿ ಹೊಡೆದಿದ್ದಾನೆ. ಸಾಲದೂ ಅಂತಾ ಜಾನಕಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ತಾನೂ ಕಲ್ಲಿನಿಂದ ಹೊಡೆದು ಕೊಂದಿದ್ದಾಳೆ ಎಂದು ನರಸೀಪಟ್ಟಣಂ ಎಎಸ್‌ಸಿ ಆದಿರಾಜ್ ಸಿಂಗ್ ರಾಣಾ ಹೇಳಿದ್ದಾರೆ.

ರಸ್ತೆ ಅಪಘಾತದ ದೃಶ್ಯವನ್ನು ರಚಿಸಿ…

ಆ ನಂತರ ಜಾನಕಿ-ರಾಮರ ಬೃಹತ್ ಮತ್ತೊಂದು ಪ್ಲಾನ್ ಮಾಡಿದ್ದಾರೆ. ಪತಿ ಅಪ್ಪಲನಾಯ್ಡು ಮೃತಪಟ್ಟಿರುವುದನ್ನು ದೃಢಪಡಿಸಿದ ಬಳಿಕ ಯಾರೂ ಇಲ್ಲದ ವೇಳೆ ಶವವನ್ನು ತೋಟದಿಂದ ರಸ್ತೆಗೆ ಎಳೆದುತಂದಿದ್ದಾರೆ. ರಸ್ತೆಯಲ್ಲಿ ಶವ ಇಟ್ಟು, ಪಕ್ಕದಲ್ಲೇ ದ್ವಿಚಕ್ರವಾಹನ ಬಿದ್ದಿರುವ ದೃಶ್ಯ ಸೃಷ್ಟಿಸಿದ್ದಾರೆ. ಜಾನಕಿ ರಸ್ತೆಯಲ್ಲಿ ಅಳಲು ಶುರುಮಾಡಿದ್ದಾಳೆ. ತನ್ನ ಪತಿ ರಸ್ತೆ ಅಪಘಾತದಲ್ಲಿ ಸತ್ತಿದ್ದಾನೆ ಎಂದು ದಾರಿಹೋಕರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾಳೆ. ಮೊದಲಿಗೆ ಅದೆಲ್ಲವೂ ನಿಜವೆಂದು ಜನರೂ ಭಾವಿಸಿದ್ದರು. ಈ ಮಧ್ಯೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಮೃತನ ದೇಹದ ಮೇಲಿದ್ದ ಗಾಯಗಳು ಮತ್ತು ನಂತರದ ಘಟನಾವಳಿಗಳು ಅವರಲ್ಲಿ ಅನುಮಾನ ಮೂಡಿಸಿದೆ. ಆಗಷ್ಟೇ… ಅಸಲಿ ವಿಷಯ ಬೆಳಕಿಗೆ ಬಂದಿದೆ. ಅಪ್ಪಲನಾಯುಡು ಅವರನ್ನು ಕೊಲೆ ಮಾಡಲಾಗಿದೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ. ಮುಂದೆ… ಜಾನಕಿಯ ಗೆಳೆಯ ರಾಮನನ್ನು ಬಂಧಿಸಲಾಗಿದೆ ಎಂದು ಎಎಸ್ಪಿ ಆದಿರಾಜ್ ಸಿಂಗ್ ರಾಣಾ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ