Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನೈತಿಕ ಸಂಬಂಧಕ್ಕೆ ಪತ್ನಿ ಅಡ್ಡಿ ಎಂದು ವಿಷದ ಇಂಜೆಕ್ಷನ್ ಚುಚ್ಚಿ ಕೊಲೆ ಆರೋಪ, ಪತಿಯ ಲವರ್ ಜೊತೆ ಪತ್ನಿ ಮಾತನಾಡಿದ ಆಡಿಯೋ ಪತ್ತೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ದೇವವೃಂದದಲ್ಲಿ ವಿಷದ ಇಂಜೆಕ್ಷನ್ ಚುಚ್ಚಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಶ್ವೇತಾ ಮೃತಪಟ್ಟಿದ್ದಾಳೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಶ್ವೇತಾಳನ್ನು ಪತಿ ದರ್ಶನ್ ಕೊಲೆ ಮಾಡಿದ್ದಾನೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಅನೈತಿಕ ಸಂಬಂಧಕ್ಕೆ ಪತ್ನಿ ಅಡ್ಡಿ ಎಂದು ವಿಷದ ಇಂಜೆಕ್ಷನ್ ಚುಚ್ಚಿ ಕೊಲೆ ಆರೋಪ, ಪತಿಯ ಲವರ್ ಜೊತೆ ಪತ್ನಿ ಮಾತನಾಡಿದ ಆಡಿಯೋ ಪತ್ತೆ
ಕುಟುಂಬಸ್ಥರ ಆಕ್ರಂದನ
Follow us
TV9 Web
| Updated By: ಆಯೇಷಾ ಬಾನು

Updated on: Dec 12, 2023 | 2:43 PM

ಚಿಕ್ಕಮಗಳೂರು, ಡಿ.12: ತನ್ನ ಅನೈತಿಕ ಸಂಬಂಧಕ್ಕೆ ಪತ್ನಿ ಅಡ್ಡಿಯಾಗುತ್ತಿದ್ದಾಳೆ ಎಂದು ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಚಿಕ್ಕಮಗಳೂರಿನಲ್ಲಿ ಕೇಳಿಬಂದಿದೆ (Murder). ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ಪತಿಯೇ ವಿಷದ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಮೃತ ಗೃಹಿಣಿ ಪೋಷಕರು ಆರೋಪ ಮಾಡಿದ್ದಾರೆ. ಶ್ವೇತಾ(31) ಮೃತ ದುರ್ದೈವಿ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ದೇವವೃಂದದಲ್ಲಿ ವಿಷದ ಇಂಜೆಕ್ಷನ್ ಚುಚ್ಚಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಶ್ವೇತಾ ಮೃತಪಟ್ಟಿದ್ದಾಳೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಶ್ವೇತಾಳನ್ನು ಪತಿ ದರ್ಶನ್ ಕೊಲೆ ಮಾಡಿದ್ದಾನೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹಾರ್ಟ್ ಅಟ್ಯಾಕ್ ಆಗಿದೆ ಎಂದು ಪತ್ನಿ ಪೋಷಕರಿಗೆ ಪತಿ ದರ್ಶನ್ ಮಾಹಿತಿ ನೀಡಿದ್ದ ಅಷ್ಟೇ ಅಲ್ಲ ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪತಿ ದರ್ಶನ್ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. 7 ವರ್ಷದ ಹಿಂದೆ ದರ್ಶನ್ ಜೊತೆ ಶ್ವೇತಾ ವಿವಾಹವಾಗಿತ್ತು. ದರ್ಶನ್, ಶ್ವೇತಾ ದಂಪತಿಗೆ 4 ವರ್ಷದ ಗಂಡು ಮಗು ಇದೆ. 4 ದಿನದ ಹಿಂದೆ ದಂಪತಿ ಬೆಂಗಳೂರಿನಿಂದ ದೇವವೃಂದಕ್ಕೆ ಬಂದಿದ್ದರು. ಅನೈತಿಕ ಸಂಬಂಧದ ಬಗ್ಗೆ ಶ್ವೇತಾ ತನ್ನ ಪೋಷಕರಿಗೆ ಆಡಿಯೋ ಕಳಿಸಿದ್ದಳು. ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಈ ಸಂಬಂಧ ಗೋಣಿಬೀಡು ಠಾಣೆಯಲ್ಲಿ ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪಾಕಿಸ್ತಾನದ ಪೊಲೀಸ್​ ಠಾಣೆಯಲ್ಲಿ ಆತ್ಮಾಹುತಿ ದಾಳಿ, ನಾಲ್ವರು ಸಾವು, 28 ಮಂದಿಗೆ ಗಾಯ

ಶ್ವೇತಾ ಸಾವಿಗೂ ಮುನ್ನ ಮಾತನಾಡಿದ ಆಡಿಯೋ ವೈರಲ್

ಇನ್ನು ಶ್ವೇತಾ ಪತಿ ತನ್ನ ಸಹೋದ್ಯೋಗಿ ಜೊತೆಗಿನ ಲವ್ ಕಹಾನಿ ರಿವಿಲ್ ಆಗಿದೆ. ದರ್ಶನ್ ಪತ್ನಿ ಶ್ವೇತಾ ಜೊತೆ ದರ್ಶನ್ ಲವರ್ ಮಾತನಾಡಿರೋ ಆಡಿಯೋ ಪತ್ತೆಯಾಗಿದೆ. ನಾವು ಲವ್ ಮಾಡಿ ಮದುವೆಯಾಗಿ ಜೀವನ ಮಾಡುತ್ತಿದ್ದೇವೆ. ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದೇವೆ. ನನ್ನ ಗಂಡ ನನ್ನನ್ನು ರಿಕ್ವೆಸ್ಟ್ ಮಾಡಿ ಲವ್ ಮಾಡಿ ಮದುವೆಯಾದ್ರು. ರಾಣಿ ತರ ನೋಡ್ಕಂತೀನಿ, ಕಣ್ಣೀರಾಕಿಸಲ್ಲ ಎಂದಿದ್ರು. ಯಾರ್ದೋ ಕಾಲಿಡಿದು, ಎಲ್ಲೋ ಮೊದಲೇ ಮದುವೆ ಆಗಿದ್ವಿ. ಆಮೇಲೆ ಮನೆಯವರು ಮತ್ತೆ ಮದುವೆ ಮಾಡಿದ್ರು. ಆದರೆ ನೀನು ನನಗೆ ಮೋಸ ಮಾಡ್ತಿದ್ದೀಯಾ? ನಿನಗೆ ಈಗಾಗಲೇ ತುಂಬಾ ಸಲ ಹೇಳಿದ್ದೀನಿ ಈ ತಪ್ಪು ಮಾಡಬೇಡ ಅಂತ. ಆದರೆ ಮತ್ತೆ ಅದು ತಪ್ಪು ಮಾಡಿದ್ದೀರಾ. ನಮ್ಮ ಬದುಕಲ್ಲಿ ನೀನು ಬರಬೇಡ, ನನ್ನ ಪಾಡಿಗೆ ನನ್ನ ಬಿಡು. ದರ್ಶನ್ ಅವರ ಅಣ್ಣನ ಮೇಲೆ ಆಣೆ ಶ್ವೇತಾಗೆ ಮೋಸ ಮಾಡಿದ್ದೇನೆ, ಇನ್ಮುಂದೆ ಮಾಡಲ್ಲ ಅಂದಿದ್ರು. ಆದರೆ ಈಗ ಮತ್ತೆ ಮೋಸ ಮಾಡಿದ್ದಾರೆ ಎಂದು ದರ್ಶನ್ ಪತ್ನಿ ದರ್ಶನ್ ಲವರ್ ಗೆ ಫೋನ್ ಮಾಡಿ ಬೇಡಿಕೊಂಡಿರಿವ ಆಡಿಯೋ ಪತ್ತೆಯಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ