ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ, ಐಡಿಬಿಐ ಬ್ಯಾಂಕ್ನಿಂದ 65.33ಕೋಟಿ ರೂ. ಸಾಲ ಪಡೆದು ವಂಚಿಸಿದ ಉದ್ಯಮಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಗ್ರೀನ್ ಆರ್ಗ್ಯಾನಿಕ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾದ ರಮೇಶ್ ಬಿ.ಗೌಡ, ಜೆ.ಸಿ ರಮ್ಯಾ, ಚಂದ್ರಶೇಖರ್ ಬಾಲಸುಬ್ರಹ್ಮಣ್ಯ ವಿರುದ್ಧ ಸಂಚು, ನಂಬಿಕೆ ದ್ರೋಹ, ವಂಚನೆ ಪ್ರಕರಣದಡಿ ಎಫ್ಐಆರ್ ದಾಖಲಾಗಿದೆ. ಇವರಲ್ಲಿ ರಮೇಶ್ ಮತ್ತು ರಮ್ಯಾ ದಂಪತಿ. ಈ ಎಲ್ಲರ ವಿರುದ್ಧ ಐಡಿಬಿಐ ಬ್ಯಾಂಕ್ನ ಉಪಪ್ರಬಂಧಕ ಜಿ.ಬಸಂತ್ ಚಕ್ರವರ್ತಿ ದೂರು ನೀಡಿದ್ದರು.
ದೊಡ್ಡಬಳ್ಳಾಪುರ, ಶ್ರೀರಂಗಪಟ್ಟಣ, ಬೇಲೂರಿನಲ್ಲಿ ಒಟ್ಟು 65 ಎಕರೆ ವಿಸ್ತೀರ್ಣದಲ್ಲಿ ಔಷಧೀಯ ಸಸ್ಯ ಬೆಳೆದು ನಮ್ಮ ಕಂಪನಿಯಿಂದಲೇ ವಿದೇಶಕ್ಕೆ ರಫ್ತು ಮಾಡುತ್ತೇವೆ. ಹಾಗಾಗಿ ಸಾಲ ಬೇಕು ಎಂದು ಹೇಳಿ 2009ರಲ್ಲಿ ಬ್ಯಾಂಕ್ನ ಕೃಷಿಸಾಲ ವಿಭಾಗದ ಅಧಿಕಾರಿಯನ್ನು ಸಂಪರ್ಕ ಮಾಡಿದ್ದರು. ಕೆನರಾ ಬ್ಯಾಂಕ್ನಲ್ಲಿ 41.07 ಕೋಟಿ ರೂ. ಸಾಲ ವರ್ಗಾಯಿಸಿಕೊಂಡು, ಹೆಚ್ಚುವರಿ ಸಾಲ ನೀಡುವಂತೆ ರಮೇಶ್ ಮತ್ತು ಟೀಂ ಮನವಿ ಮಾಡಿತ್ತು. 2015ರಲ್ಲಿ ವಿವಿಧ ಹಂತದಲ್ಲಿ ಐಡಿಬಿಐ ಬ್ಯಾಂಕ್ನಿಂದ 65.33 ಕೋಟಿ ರೂ.ಸಾಲ ಪಡೆದಿದ್ದರು. ಆದರೆ ಹಣ ಪಾವತಿಸಿರಲಿಲ್ಲ..125.63 ಕೋಟಿ ರೂ. ಬಾಕಿ ನೀಡದ ಹಿನ್ನೆಲೆಯಲ್ಲಿ ತನಿಖೆಯೂ ಪ್ರಾರಂಭವಾಗಿತ್ತು.
ಬೇರೆ ಬೇರೆ ಕಂಪನಿಗಳ ಮೇಲಿದ್ದ ಸಾಲವನ್ನು ಜಿಒಐಪಿಎಲ್ ಸಾಲ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಐಡಿಬಿಐ ಬ್ಯಾಂಕ್ಗೆ ಹಣ ರ್ಗಾವಣೆ ಮಾಡಲಾಗಿತ್ತು. ಅಲ್ಲದೆ ಬ್ಯಾಂಕ್ ನೀಡಿದ ಸಾಲದ ಪೈಕಿ 15 ಕೋಟಿ ರೂ.ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಮತ್ತೆ ಇದೇ ಕಂಪನಿಯ ಹೆಸರಿನಲ್ಲಿ ಕೆನರಾಬ್ಯಾಂಕ್ ಸೇರಿ, ವಿವಿಧ ಬ್ಯಾಂಕ್ಗಳಲ್ಲಿ ಸಾಲ ಪಡೆದು, ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ.
ಕೇಂದ್ರ ಸಚಿವರ ಜೊತೆ ರೈತರ 5ನೇ ಸುತ್ತಿನ ಮಾತುಕತೆ ಆರಂಭ: ಬಸ್ನಲ್ಲೇ ಸಭೆಗೆ ಆಗಮಿಸಿದ ಕೃಷಿಕರು