ವಿಕಲಚೇತನರಂತೆ ಪೋಸ್ ಕೊಟ್ಕೊಂಡು.. ಮನೆಗಳ್ಳತನ ಮಾಡುತ್ತಿದ್ದ ಕಿಲಾಡಿ ಲೇಡಿ ಕೊನೆಗೂ ಅಂದರ್​

ವಿಕಲಚೇತನರ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ತಲಘಟ್ಟಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿನಗರ ನಿವಾಸಿಯಾದ 45 ವರ್ಷದ ಮಂಜುಶ್ರೀ ಬಂಧಿತ ಆರೋಪಿ.

ವಿಕಲಚೇತನರಂತೆ ಪೋಸ್ ಕೊಟ್ಕೊಂಡು.. ಮನೆಗಳ್ಳತನ ಮಾಡುತ್ತಿದ್ದ ಕಿಲಾಡಿ ಲೇಡಿ ಕೊನೆಗೂ ಅಂದರ್​
Follow us
shruti hegde
| Updated By: KUSHAL V

Updated on: Dec 06, 2020 | 6:13 PM

ಬೆಂಗಳೂರು: ವಿಕಲಚೇತನರ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ತಲಘಟ್ಟಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿನಗರ ನಿವಾಸಿಯಾದ 45 ವರ್ಷದ ಮಂಜುಶ್ರೀ ಬಂಧಿತ ಆರೋಪಿ.

ಬಂಧಿತಳಿಂದ 27 ಲಕ್ಷಕ್ಕೂ  ಹೆಚ್ಚು ಬೆಲೆಬಾಳುವ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಮಂಜುಶ್ರೀ 18ಕ್ಕೂ ಹೆಚ್ಚು ಮನೆಗಳ್ಳತನ ಕೇಸ್​ನಲ್ಲಿ ಭಾಗಿಯಾಗಿದ್ದಳು ಎಂಬ ಮಾಹಿತಿ ಸಿಕ್ಕಿದೆ.

ಅಂದ ಹಾಗೆ, ಈ ಐನಾತಿ ಲೇಡಿ ಕನ್ನ ಹಾಕಲು ಖುದ್ದು ಕಾರು ಚಲಾಯಿಸಿಕೊಂಡು ಬರುತ್ತಿದ್ದಳಂತೆ. ಈ ವೇಳೆ ಬೀಗ ಹಾಕಿರುವ ಮನೆಗಳನ್ನು ಗಮನಿಸಿ ಅವುಗಳ ಲೂಟಿಗೆ ಸ್ಕೆಚ್ ಹಾಕುತ್ತದ್ದಳಂತೆ. ಬಳಿಕ, ರಾತ್ರಿ ವೇಳೆ ಏಕಾಂಗಿಯಾಗಿ ಬೀಗ ಹಾಕಿದ ಮನೆಗೆ ಬಂದು ಕಳ್ಳತನ ಮಾಡುತ್ತಿದ್ದಳು ಎಂದು ಹೇಳಲಾಗಿದೆ.

ವಿಕಲಚೇತನಳಂತೆ ಆ್ಯಕ್ಟ್​ ಮಾಡುತ್ತಾ, ಕುಂಟುತ್ತಾ ಬರುತ್ತಿದ್ದ ಮಂಜುಶ್ರೀ  ತನ್ನ ಬಳಿಯಿದ್ದ 100ಕ್ಕೂ ಹೆಚ್ಚು ಕೀಗಳನ್ನು ಬಳಸಿ ಬಾಗಿಲಿನ ಬೀಗ ತೆಗೆಯುತ್ತಿದ್ದಳಂತೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಹಾಗೇ ಕುಂಟುತ್ತಾ ಎಸ್ಕೇಪ್​ ಆಗ್ತಿದ್ದಳು. ಸದ್ಯ, ಈ ಕಿಲಾಡಿ ಲೇಡಿಯನ್ನು ಬಂಧಿಸಿರುವ ಖಾಕಿ ಪಡೆ ತನಿಖೆ ಚುರುಕುಗೊಳಿಸಿದ್ದಾರೆ.