AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಡಿಬಿಐ ಬ್ಯಾಂಕ್​ನಿಂದ 65.33ಕೋಟಿ ರೂ.ಸಾಲ ಪಡೆದು ವಂಚಿಸಿದ ಉದ್ಯಮಿಗಳಿಗೆ ಬಲೆ ಬೀಸಿದ ಸಿಬಿಐ; ಎಫ್​ಐಆರ್ ದಾಖಲು

ದೊಡ್ಡಬಳ್ಳಾಪುರ, ಶ್ರೀರಂಗಪಟ್ಟಣ, ಬೇಲೂರಿನಲ್ಲಿ ಒಟ್ಟು 65 ಎಕರೆ ವಿಸ್ತೀರ್ಣದಲ್ಲಿ ಔಷಧೀಯ ಸಸ್ಯ ಬೆಳೆದು ನಮ್ಮ ಕಂಪನಿಯಿಂದಲೇ ವಿದೇಶಕ್ಕೆ ರಫ್ತು ಮಾಡುತ್ತೇವೆ. ಹಾಗಾಗಿ ಸಾಲ ಬೇಕು ಎಂದು ಹೇಳಿ 2009ರಲ್ಲಿ ಬ್ಯಾಂಕ್​ನ ಕೃಷಿಸಾಲ ವಿಭಾಗದ ಅಧಿಕಾರಿಯನ್ನು ಸಂಪರ್ಕ ಮಾಡಿದ್ದರು.

ಐಡಿಬಿಐ ಬ್ಯಾಂಕ್​ನಿಂದ 65.33ಕೋಟಿ ರೂ.ಸಾಲ ಪಡೆದು ವಂಚಿಸಿದ ಉದ್ಯಮಿಗಳಿಗೆ ಬಲೆ ಬೀಸಿದ ಸಿಬಿಐ; ಎಫ್​ಐಆರ್ ದಾಖಲು
ಸಿಬಿಐ ಕಚೇರಿ
Lakshmi Hegde
|

Updated on: Dec 05, 2020 | 6:44 PM

Share

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ, ಐಡಿಬಿಐ ಬ್ಯಾಂಕ್​ನಿಂದ 65.33ಕೋಟಿ ರೂ. ಸಾಲ ಪಡೆದು ವಂಚಿಸಿದ ಉದ್ಯಮಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.

ಗ್ರೀನ್​ ಆರ್ಗ್ಯಾನಿಕ್ ಪ್ರೈವೇಟ್ ಲಿಮಿಟೆಡ್​ನ ನಿರ್ದೇಶಕರಾದ ರಮೇಶ್​ ಬಿ.ಗೌಡ, ಜೆ.ಸಿ ರಮ್ಯಾ, ಚಂದ್ರಶೇಖರ್​ ಬಾಲಸುಬ್ರಹ್ಮಣ್ಯ ವಿರುದ್ಧ ಸಂಚು, ನಂಬಿಕೆ ದ್ರೋಹ, ವಂಚನೆ ಪ್ರಕರಣದಡಿ ಎಫ್​ಐಆರ್ ದಾಖಲಾಗಿದೆ. ಇವರಲ್ಲಿ ರಮೇಶ್ ಮತ್ತು ರಮ್ಯಾ ದಂಪತಿ. ಈ ಎಲ್ಲರ ವಿರುದ್ಧ ಐಡಿಬಿಐ ಬ್ಯಾಂಕ್​ನ ಉಪಪ್ರಬಂಧಕ ಜಿ.ಬಸಂತ್ ಚಕ್ರವರ್ತಿ ದೂರು ನೀಡಿದ್ದರು.

ದೊಡ್ಡಬಳ್ಳಾಪುರ, ಶ್ರೀರಂಗಪಟ್ಟಣ, ಬೇಲೂರಿನಲ್ಲಿ ಒಟ್ಟು 65 ಎಕರೆ ವಿಸ್ತೀರ್ಣದಲ್ಲಿ ಔಷಧೀಯ ಸಸ್ಯ ಬೆಳೆದು ನಮ್ಮ ಕಂಪನಿಯಿಂದಲೇ ವಿದೇಶಕ್ಕೆ ರಫ್ತು ಮಾಡುತ್ತೇವೆ. ಹಾಗಾಗಿ ಸಾಲ ಬೇಕು ಎಂದು ಹೇಳಿ 2009ರಲ್ಲಿ ಬ್ಯಾಂಕ್​ನ ಕೃಷಿಸಾಲ ವಿಭಾಗದ ಅಧಿಕಾರಿಯನ್ನು ಸಂಪರ್ಕ ಮಾಡಿದ್ದರು. ಕೆನರಾ ಬ್ಯಾಂಕ್​ನಲ್ಲಿ 41.07 ಕೋಟಿ ರೂ. ಸಾಲ ವರ್ಗಾಯಿಸಿಕೊಂಡು, ಹೆಚ್ಚುವರಿ ಸಾಲ ನೀಡುವಂತೆ ರಮೇಶ್​ ಮತ್ತು ಟೀಂ ಮನವಿ ಮಾಡಿತ್ತು. 2015ರಲ್ಲಿ ವಿವಿಧ ಹಂತದಲ್ಲಿ ಐಡಿಬಿಐ ಬ್ಯಾಂಕ್​ನಿಂದ 65.33 ಕೋಟಿ ರೂ.ಸಾಲ ಪಡೆದಿದ್ದರು. ಆದರೆ ಹಣ ಪಾವತಿಸಿರಲಿಲ್ಲ..125.63 ಕೋಟಿ ರೂ. ಬಾಕಿ ನೀಡದ ಹಿನ್ನೆಲೆಯಲ್ಲಿ ತನಿಖೆಯೂ ಪ್ರಾರಂಭವಾಗಿತ್ತು.

ಬೇರೆ ಬೇರೆ ಕಂಪನಿಗಳ ಮೇಲಿದ್ದ ಸಾಲವನ್ನು ಜಿಒಐಪಿಎಲ್ ಸಾಲ ಎಂದು ಸುಳ್ಳು ದಾಖಲೆ‌ ಸೃಷ್ಟಿಸಿ ಐಡಿಬಿಐ ಬ್ಯಾಂಕ್​​ಗೆ ಹಣ ರ್ಗಾವಣೆ ಮಾಡಲಾಗಿತ್ತು. ಅಲ್ಲದೆ ಬ್ಯಾಂಕ್‌ ನೀಡಿದ ಸಾಲದ ಪೈಕಿ 15 ಕೋಟಿ ರೂ.ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಮತ್ತೆ ಇದೇ ಕಂಪನಿಯ ಹೆಸರಿನಲ್ಲಿ ಕೆನರಾಬ್ಯಾಂಕ್ ಸೇರಿ, ವಿವಿಧ ಬ್ಯಾಂಕ್​ಗಳಲ್ಲಿ ಸಾಲ ಪಡೆದು, ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ.

ಕೇಂದ್ರ ಸಚಿವರ ಜೊತೆ ರೈತರ 5ನೇ ಸುತ್ತಿನ ಮಾತುಕತೆ ಆರಂಭ: ಬಸ್​ನಲ್ಲೇ ಸಭೆಗೆ ಆಗಮಿಸಿದ ಕೃಷಿಕರು

ಮಗಳ ಮೇಲೆ ಅಪ್ಪ-ಅಣ್ಣನಿಂದ ತೀವ್ರ ಹಲ್ಲೆ.. ಯುವತಿಯ ಕೈ ಬೆರಳು ಕಟ್!

Follow Us
Lakshmi Hegde
Lakshmi Hegde
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು