ಪಿಕ್ಚರ್ ಅಭಿ ಬಾಕಿ ಹೈ ಅಂತಿದೆ CCB.. ಮತ್ತೆ 3 ನಟರು, 2 ನಟಿಯರಿಗೆ ನೋಟಿಸ್?

|

Updated on: Sep 19, 2020 | 10:18 AM

ಬೆಂಗಳೂರು: ಸ್ಯಾಂಡಲ್​ವುಡ್​​ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳ ಬಳಿ ಹಲವು ನಟ-ನಟಿಯರ ಪಟ್ಟಿ ಇದ್ದು, ಮತ್ತೆ ಮೂವರು ನಟರು ಮತ್ತು ಇಬ್ಬರು ನಟಿಯರಿಗೆ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಸ್ಯಾಂಡಲ್​ವುಡ್​​ಗೆ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಇದುವರೆಗಿನ ತನಿಖೆಯಲ್ಲಿ ಕಂಡು ಬಂದಿದ್ದು ಕೇವಲ ಟ್ರೈಲರ್ ಎನ್ನಲಾಗುತ್ತಿದೆ. ಸಿಸಿಬಿ ಬಳಿ ಹಲವು ಸೆಲಬ್ರಟಿಗಳ ಲಿಸ್ಟ್ ಇದ್ದು, ಸಿಸಿಬಿ ಮೂಲಗಳು ಪಿಕ್ಚರ್ ಅಭಿ ಬಾಕಿ ಹೈ ಎನ್ನುತ್ತಿವೆ. ಐವರ ಚಲನವಲನಗಳೂ ಸಿಸಿಬಿ ರಾಡಾನ್​ನಲ್ಲಿದೆ CCBಯ ಈ […]

ಪಿಕ್ಚರ್ ಅಭಿ ಬಾಕಿ ಹೈ ಅಂತಿದೆ CCB.. ಮತ್ತೆ 3 ನಟರು, 2 ನಟಿಯರಿಗೆ ನೋಟಿಸ್?
ಸಂದೀಪ್ ಪಾಟೀಲ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಸ್ಯಾಂಡಲ್​ವುಡ್​​ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳ ಬಳಿ ಹಲವು ನಟ-ನಟಿಯರ ಪಟ್ಟಿ ಇದ್ದು, ಮತ್ತೆ ಮೂವರು ನಟರು ಮತ್ತು ಇಬ್ಬರು ನಟಿಯರಿಗೆ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಸ್ಯಾಂಡಲ್​ವುಡ್​​ಗೆ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಇದುವರೆಗಿನ ತನಿಖೆಯಲ್ಲಿ ಕಂಡು ಬಂದಿದ್ದು ಕೇವಲ ಟ್ರೈಲರ್ ಎನ್ನಲಾಗುತ್ತಿದೆ. ಸಿಸಿಬಿ ಬಳಿ ಹಲವು ಸೆಲಬ್ರಟಿಗಳ ಲಿಸ್ಟ್ ಇದ್ದು, ಸಿಸಿಬಿ ಮೂಲಗಳು ಪಿಕ್ಚರ್ ಅಭಿ ಬಾಕಿ ಹೈ ಎನ್ನುತ್ತಿವೆ.

ಐವರ ಚಲನವಲನಗಳೂ ಸಿಸಿಬಿ ರಾಡಾನ್​ನಲ್ಲಿದೆ
CCBಯ ಈ ಲಿಸ್ಟ್​ನಲ್ಲಿ ಹೊಸ ನಟಿಯರು, ಉದ್ಯಮಿಗಳೇ ಇದ್ದಾರೆ. ಸದ್ಯ ಇಬ್ಬರು ನಟಿಯರು & ಐದು ಪೆಡ್ಲರ್​ಗಳು ಜೈಲುಪಾಲಾಗಿದ್ದಾರೆ. ಕೇಸ್ ಸಂಬಂಧ ಈಗಾಗಲೇ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ವಿಚಾರಣೆ ಮುಕ್ತಾಯವಾಗಿದೆ.

ಇಂದು ವಿಚಾರಣೆಗೆ ಬರುವಂತೆ ಸಿಸಿಬಿ ನೋಟಿಸ್​ ನೀಡಿದ ಹಿನ್ನೆಲೆಯಿಂದ ಸಿಸಿಬಿ ಕಚೇರಿಗೆ ಆರ್ ವಿ ಯುವರಾಜ್,ನಟ ಸಂತೋಷ್ ಕುಮಾರ್ ಆಗಮಿಸಿದ್ದಾರೆ. ನಿರೂಪಕ ಅಕುಲ್ ಬಾಲಾಜಿ ಕೂಡ ಹಾಜರಾಗಿದ್ದಾರೆ. ಈ ಮೂವರ ಬಳಿಕ ಮತ್ತೆ ಮೂರು ನಟರು ಮತ್ತು ಇಬ್ಬರು ನಟಿಯರಿಗೆ ನೋಟಿಸ್ ನೀಡುವ ಸಾಧ್ಯತೆಗಳಿವೆ. ಸದ್ಯ ಈ ಐವರ ಚಲನವಲನಗಳನ್ನು ಸಿಸಿಬಿ ಅಧಿಕಾರಿಗಳು ಮಾನಿಟರ್ ಮಾಡುತ್ತಿದ್ದಾರೆ.