ಬೆಂಗಳೂರು: ಪಾತಕಿ ರವಿ ಪೂಜಾರಿ ಸಹಚರ ಗುಲಾಮ್ನನ್ನು ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಗುಲಾಮ್, ರವಿಪೂಜಾರಿ ಜೊತೆ ಸುಲಿಗೆಯಲ್ಲಿ ಕೈ ಜೊಡಿಸಿದ್ದ ಕುಖ್ಯಾತ ಸಹಚರ.
ಎರಡು ದಶಕಗಳ ಕಾಲ ಭೂಗತವಾಗಿದ್ದ ರವಿ ಪೂಜಾರಿ ಅಜ್ಜಾತ ಸ್ಥಳದಲ್ಲಿದ್ದು ಬಿಲ್ಡರ್, ಬಿಸಿನೆಸ್ ಮೆನ್ಗಳಿಗೆ ಬೆದರಿಕೆ ಹಾಕ್ತಿದ್ದ. ಈ ವೇಳೆ ರವಿ ಪೂಜಾರಿ ಬೆದರಿಕೆ ಹಾಕಿದವರ ಬಳಿ ಗುಲಾಮ್ ಸುಲಿಗೆ ಮಾಡ್ತಿದ್ದ. ರವಿ ಪೂಜಾರಿ ಮಾಹಿತಿಯ ಮೆರೆಗೆ ಗುಲಾಮನನ್ನು ಮಂಗಳೂರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ಕೋರ್ಟ್ಗೆ ಹಾಜರು ಪಡಿಸಿ ನಂತರ 10ದಿನಗಳ ಕಷ್ಟಡಿಗೆ ಪಡೆದಿದ್ದಾರೆ. ಪೂಜಾರಿಯ ಬಲಗೈ ಬಂಟನಾಗಿರುವ ಗುಲಾಮ್ನನ್ನು ಸದ್ಯ ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತೆ. ಈ ವೇಳೆ ಮತ್ತಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ.
Published On - 11:15 am, Wed, 3 June 20