ಫೇಸ್‌ಬುಕ್‌‌ನಲ್ಲಿ ಸುಳ್ಳು ಪೋಸ್ಟ್‌ ಮಾಡಿದ ಕಿಡಿಗೇಡಿ ಈಗ ಎಲ್ಲಿದ್ದಾನೆ ಗೊತ್ತಾ ?

|

Updated on: Jul 19, 2020 | 5:05 PM

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿದ್ದಾರೆಂದು ಫೇಸ್‌ ಬುಕ್‌ನಲ್ಲಿ ಸುಳ್ಳು ಪೋಸ್ಟ್​ ಮಾಡಿದ್ದ ಕಿಡಿಗೇಡಿಯನ್ನ ಬೆಂಗಳೂರು ಪೊಲೀಸರು ಪತ್ತೆ ಹಚ್ಚಿ ಕಂಬಿ ಹಿಂದೆ ಕಳಿಸಿದ್ದಾರೆ. ಹೌದು ಕೆಲ ದಿನಗಳ ಹಿಂದೆ ತಿಲಕ್‌ ನಗರದ ನಿವಾಸಿ ಸಮೀರ್‌ ಎಂಬ ಅವಿವೇಕಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ತುಂಬಾ ರೋಗಿಗಳು ತುಂಬಿದ್ದಾರೆಂದು ಸುಳ್ಳು ಪೋಸ್ಟ್​ ಹಾಕಿದ್ದ. ಇದು ಬೇರೆ ರಾಜ್ಯದ ಆಸ್ಪತ್ರೆಯ ವಿಡಿಯೋ ಆಗಿತ್ತು. ಆದ್ರೆ ಸಾಮಾಜಿಕ ತಾಣದಲ್ಲಿ ಈ ವಿಡಿಯೋ ನೋಡಿದ್ದ ಸಾರ್ವಜನಿಕರಲ್ಲಿ ಆತಂಕ, ಭಯ ಮೂಡಿತ್ತು. ಈ ಸಂಬಂಧ […]

ಫೇಸ್‌ಬುಕ್‌‌ನಲ್ಲಿ ಸುಳ್ಳು ಪೋಸ್ಟ್‌ ಮಾಡಿದ ಕಿಡಿಗೇಡಿ ಈಗ ಎಲ್ಲಿದ್ದಾನೆ ಗೊತ್ತಾ ?
Follow us on

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿದ್ದಾರೆಂದು ಫೇಸ್‌ ಬುಕ್‌ನಲ್ಲಿ ಸುಳ್ಳು ಪೋಸ್ಟ್​ ಮಾಡಿದ್ದ ಕಿಡಿಗೇಡಿಯನ್ನ ಬೆಂಗಳೂರು ಪೊಲೀಸರು ಪತ್ತೆ ಹಚ್ಚಿ ಕಂಬಿ ಹಿಂದೆ ಕಳಿಸಿದ್ದಾರೆ.

ಹೌದು ಕೆಲ ದಿನಗಳ ಹಿಂದೆ ತಿಲಕ್‌ ನಗರದ ನಿವಾಸಿ ಸಮೀರ್‌ ಎಂಬ ಅವಿವೇಕಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ತುಂಬಾ ರೋಗಿಗಳು ತುಂಬಿದ್ದಾರೆಂದು ಸುಳ್ಳು ಪೋಸ್ಟ್​ ಹಾಕಿದ್ದ. ಇದು ಬೇರೆ ರಾಜ್ಯದ ಆಸ್ಪತ್ರೆಯ ವಿಡಿಯೋ ಆಗಿತ್ತು. ಆದ್ರೆ ಸಾಮಾಜಿಕ ತಾಣದಲ್ಲಿ ಈ ವಿಡಿಯೋ ನೋಡಿದ್ದ ಸಾರ್ವಜನಿಕರಲ್ಲಿ ಆತಂಕ, ಭಯ ಮೂಡಿತ್ತು. ಈ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್ ಕೂಡಾ ದಾಖಲಾಗಿತ್ತು.

ತನಿಖೆ ಆರಂಭಿಸಿದ ಸಿಸಿಬಿ ಪೊಲೀಸರಿಗೆ ಸುಳ್ಳು ವಿಡಿಯೋ ಪೋಸ್ಟ್‌ ಮಾಡಿದ್ದ ಕಿರಾತಕ ಆರೋಪಿ ಸಮೀರ್‌ ಬೆಂಗಳೂರಿನ ತಿಲಕ್‌ನಗರದಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಆತನನ್ನು ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ. ಈ ಆರೋಪಿ ಟಿಂಬರ್ ವ್ಯವಹಾರ ನಡೆಸುತಿದ್ದು, ಕೆಲ ಸಿನಿಮಾ ಇವೆಂಟ್‌ಗಳಲ್ಲೂ ಪಾಲ್ಗೊಂಡಿದ್ದ ಎನ್ನಲಾಗಿದೆ. ಜೊತೆಗೆ ಕಾಂಗ್ರೆಸ್‌ ನಾಯಕರೊಂದಿಗೆ ಗುರುತಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

Published On - 4:54 pm, Sun, 19 July 20