ಬೆಂಗಳೂರು: ಉಪೇಂದ್ರ ನಟನೆಯ ಬುದ್ಧಿವಂತ ಸಿನಿಮಾದಂತೆ ಹುಡುಗಿಯರನ್ನ ಮೋಹಿಸಿ ನಂತರ ಅವರನ್ನ ವಂಚಿಸುತ್ತಿದ್ದ ಕಿರಾತಕನೊಬ್ಬನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ರಮೇಶ್ ಎಸ್ ಅಲಿಯಾಸ್ ಜಗನ್ನಾಥ ಎಸ್ ಸಜ್ಜನ್ ಬಂಧಿತ ಆರೋಪಿ.
ಮ್ಯಾಟ್ರಿಮೊನಿ ಆ್ಯಪ್ನಲ್ಲಿ ನಕಲಿ ID ಕ್ರಿಯೆಟ್ ಮಾಡಿಕೊಂಡ ಭೂಪ ಮೂಲತಃ ವಿಜಯಪುರದ ಹಿಪ್ಪರಿಗೆಯನಾದ ಈ ಭೂಪ ಹಲವು ವರ್ಷಗಳಿಂದ ನಗರದಲ್ಲಿ ಉದ್ಯೋಗ ಮಾಡುತ್ತಿದ್ದ. ಈ ಮಧ್ಯೆ ಸುಂದರ ಯುವತಿಯರನ್ನ ಮದುವೆಯಾಗೊದಾಗಿ ನಂಬಿಸಿ ಅವರಿಂದ ಹಣ ಪಡೆಯಲು ಪ್ಲಾನ್ ಮಾಡಿದ. ಅಂತೆಯೇ ಪ್ರತಿಷ್ಠಿತ ಮ್ಯಾಟ್ರಿಮೊನಿ ಆ್ಯಪ್ನಲ್ಲಿ ರಾಮ್ ಎಂದು ನಕಲಿ ID ಕ್ರಿಯೆಟ್ ಮಾಡಿಕೊಂಡ.
ಮದ್ವೆ ಆಗು ಅಂತಾ ಕೇಳಿದರೆ ಜೀವ ಬೆದರಿಕೆ
ಆ್ಯಪ್ ಮೂಲಕ ಹಲವು ಯುವತಿಯರನ್ನ ಪರಿಚಯ ಮಾಡಿಕೊಂಡಿದ್ದ ರಮೇಶ್ ಅವರನ್ನ ಮದುವೆಯಾಗೋದಾಗಿ ನಂಬಿಸಿ ಲಕ್ಷ ಲಕ್ಷ ಹಣ ಪಡೆಯುತಿದ್ದನಂತೆ. ನಂತರ ನಾನವನಲ್ಲ, ನಾನವನಲ್ಲ ಅಂತಾ ಹೇಳಿ ಹುಡುಗಿಯರಿಗೆ ಉಂಡೇ ನಾಮ ಹಾಕುತ್ತಿದ್ದನಂತೆ.
ಒಂದು ವೇಳು ಯುವತಿ ಕೊಂಚ ಧೈರ್ಯ ಮಾಡಿ ಮದ್ವೆ ಆಗು ಅಂತಾ ಕೇಳಿದರೆ ಜೀವ ಬೆದರಿಕೆ ಒಡ್ಡೋನಂತೆ ಈ ಕಿರಾತಕ. ಇದೇ ರೀತಿ 5ಕ್ಕೂ ಹೆಚ್ಚು ಯುವತಿಯರಿಗೆ ಟೋಪಿ ಹಾಕಿರುವ ಜಗನ್ನಾಥ ಬರೋಬ್ಬರಿ 25 ಲಕ್ಷ ರೂಪಾಯಿ ವಂಚಿಸಿದ್ದಾನಂತೆ.
ಕೊರೊನಾ ಭಯದಿಂದಲೋ ಏನೋ ನಗರದಿಂದ ಪರಾರಿಯಾಗಿದ್ದ ಖದೀಮ ಹಾಸನದಲ್ಲಿ ಮನೆ ಮಾಡಿದ್ದನಂತೆ. ಕೊನೆಗೂ ಧೈರ್ಯ ಮಾಡಿಕೊಂಡು ಬನಶಂಕರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಓರ್ವ ಯುವತಿ ವಂಚನೆ ಬಗ್ಗೆ ಕಂಪ್ಲೇಂಟ್ ಕೊಟ್ಟೇಬಿಟ್ಟಳು.
ದೂರು ಸಂಬಂಧ ತನಿಖೆ ಕೈಗೊಂಡ ಪೊಲೀಸರು ಕೊನೆಗೂ ರಮೇಶ್ನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 6.8 ಲಕ್ಷ ನಗದು, 25 ಸಿಮ್ ಕಾರ್ಡ್, ಒಂದು ಕಾರ್ ಸಹ ಪಡೆದಿದ್ದಾರಂತೆ. ಜೊತೆಗೆ ಆರೋಪಿ ಮೂರು ವೋಟರ್ ID ಸಹ ಮಾಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ.