ಬೆಂಗಳೂರು: YMIA Club ಮೇಲೆ ಸಿಸಿಬಿ ಪೊಲೀಸರ ದಾಳಿ, ಜೂಜು ಆಡುತ್ತಿದ್ದವರು ವಶಕ್ಕೆ

| Updated By: ಆಯೇಷಾ ಬಾನು

Updated on: Dec 12, 2023 | 6:50 AM

ಅಕ್ರಮವಾಗಿ ಜೂಜು ದಂಧೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಹಲಸೂರು ರಸ್ತೆಯಲ್ಲಿರುವ ವೈಎಂಐಎ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ಜೂಜು ಆಡುತ್ತಿದ್ದವರನ್ನ ವಶಕ್ಕೆ ಪಡೆದಿದ್ದಾರೆ. ಭಾರತೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: YMIA Club ಮೇಲೆ ಸಿಸಿಬಿ ಪೊಲೀಸರ ದಾಳಿ, ಜೂಜು ಆಡುತ್ತಿದ್ದವರು ವಶಕ್ಕೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಡಿ.12: ಅಕ್ರಮವಾಗಿ ಅಂದರ್ ಬಾಹರ್ ದಂಧೆ (Gambling) ನಡೆಸುತ್ತಿದ್ದ ಆರೋಪದ ಮೇಲೆ ನಗರದ ಕ್ಲಬ್​ವೊಂದರ ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿ ಅನೇಕರನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಜೂಜು ದಂಧೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಹಲಸೂರು ರಸ್ತೆಯಲ್ಲಿರುವ ವೈಎಂಐಎ ಕ್ಲಬ್ (YMIA Club) ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ಜೂಜು ಆಡುತ್ತಿದ್ದವರನ್ನ ವಶಕ್ಕೆ ಪಡೆದಿದ್ದಾರೆ. ಭಾರತೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

CBI ಕಚೇರಿಗೆ FBI ಅಧಿಕಾರಿಗಳ ಭೇಟಿ

ಸಿಬಿಐ ಪ್ರಧಾನ ಕಛೇರಿಗೆ ಎಫ್ ಬಿ ಐ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಎಫ್ ಬಿಐ ಕ್ರಿಸ್ಟೋಪರ್ ಎ ವ್ರೇ ನೇತೃತ್ವದ ನಿಯೋಗ ಭೇಟಿ ನೀಡಿದ್ದು, ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಸಿಬಿಐ ನ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ರು. ಕ್ರಿಮಿನಲ್ ವಿಷಯಗಳ ಕುರಿತು ಮಾಹಿತಿ ವಿನಿಮಯ ಬಲಪಡಿಸೋದು, ತಂತ್ರಜ್ಞಾನ ಬಳಸಿ ಅಪರಾಧಗಳ ತನಿಖೆಯಲ್ಲಿ ಪರಿಣಿತಿ ಸಾಧಿಸುವಿಕೆ, ಎರಡು ಏಜೆನ್ಸಿಗಳ ಮೂಲಕ ಸಂಘಟಿತ ಅಪರಾಧ ಜಾಲ, ಸೈಬರ್ ಅರ್ಥಿಕ ಅಪರಾಧಗಳು, ದೇಶಕ್ಕೆ ಸವಾಲನೊಡ್ಡುವ ಅಪರಾಧಗಳ ಭೆದಿಸುವಿಕೆಗೆ ಸಹಾಯ ಮಾಡುವ ವಿಚಾರಗಳಿಗೆ ಕುರಿತಂತೆ ಮಾತುಕತೆ ನಡೆಸಿದ್ರು.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ 3542 ಕೋಟಿ ರೂ ಪೂರಕ ಅಂದಾಜು ಮಂಡನೆ

50ಕ್ಕೂ ಹೆಚ್ಚು ಕುರಿಗಳು ಸಜೀವಹದನ

ಆಕಸ್ಮಿಕ ಅಗ್ನಿ ಅವಘಡದಿಂದಾಗಿ 50ಕ್ಕೂ ಹೆಚ್ಚು ಕುರಿಗಳು ಸಜೀವಹದನವಾಗಿವೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ರಾಮಘಟ್ಟ ಗ್ರಾಮದಲ್ಲಿ ಬೆಂಕಿ ದುರಂತದಿಂದಾಗಿ 50ಕ್ಕೂ ಹೆಚ್ಚು ಕುರಿಗಳು, 200 ಕೋಳಿಗಳು, 6 ಹಸುಗಳು ದುರ್ಮರಣವನ್ನಪ್ಪಿವೆ. ರೈತ ಚೇತನ್​ಕುಮಾರ್ ಎಂಬುವರಿಗೆ ಸೇರಿದ ಕುರಿ, ಹಸು, ಕೋಳಿಗಳು ಸಾವನ್ನಪ್ಪಿವೆ. ಶಾರ್ಟ್ ಸರ್ಕ್ಯೂಟ್​ನಿಂದ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ