ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್‌ಗಳ ಬಂಧನ.. 75 ಲಕ್ಷ ಮೌಲ್ಯದ ಡ್ರಗ್ ಸೀಜ್

|

Updated on: Mar 17, 2021 | 9:02 AM

ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ಇಂದು ಇಬ್ಬರು ನೈಜಿರಿಯನ್ ಡ್ರಗ್ ಪೆಡ್ಲರ್​ಗಳು ಅರೆಸ್ಟ್ ಆಗಿದ್ದಾರೆ. ಓರ್ವ ಬಿಸಿನೆಸ್ ವೀಸಾದಲ್ಲಿ ಬಂದು ಅಕ್ರಮವಾಗಿ ನೆಲೆಸಿದ್ದ. ಮತ್ತೊಬ್ಬ ಟೂರಿಸ್ಟ್ ವೀಸಾದಲ್ಲಿ ಬಂದು ಅಕ್ರಮವಾಗಿ ನೆಲೆಸಿದ್ದ ಎಂಬ ಮಾಹಿತಿ ಸಿಕ್ಕಿದೆ.

ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್‌ಗಳ ಬಂಧನ.. 75 ಲಕ್ಷ ಮೌಲ್ಯದ ಡ್ರಗ್ ಸೀಜ್
ಯ್ಯುಚೋಹುಕ್ವು ಮಾರ್ಕ್ ಮೌರಿಸ್, ಜೋಸೆಫ್ ಡುಕ್ವೆ ಒಕಾಫಾರ್
Follow us on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಮೃತಹಳ್ಳಿ, ಜಕ್ಕೂರಿನಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನೈಜೀರಿಯಾದ ಯ್ಯುಚೋಹುಕ್ವು ಮಾರ್ಕ್ ಮೌರಿಸ್, ಜೋಸೆಫ್ ಡುಕ್ವೆ ಒಕಾಫಾರ್ ಬಂಧಿತ ಆರೋಪಿಗಳು. ಬಂಧಿತರಿಂದ 65 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಕೊಕೇನ್, ಎಕ್ಸ್ಟಸಿ, ಎಲ್‌ಎಸ್‌ಡಿ ಸ್ಟ್ರಿಪ್ಸ್, ಎಂಡಿಎಂ ಜಪ್ತಿ ಮಾಡಲಾಗಿದೆ.

ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ಇಂದು ಇಬ್ಬರು ನೈಜಿರಿಯನ್ ಡ್ರಗ್ ಪೆಡ್ಲರ್​ಗಳು ಅರೆಸ್ಟ್ ಆಗಿದ್ದಾರೆ. ಓರ್ವ ಬಿಸಿನೆಸ್ ವೀಸಾದಲ್ಲಿ ಬಂದು ಅಕ್ರಮವಾಗಿ ನೆಲೆಸಿದ್ದ. ಮತ್ತೊಬ್ಬ ಟೂರಿಸ್ಟ್ ವೀಸಾದಲ್ಲಿ ಬಂದು ಅಕ್ರಮವಾಗಿ ನೆಲೆಸಿದ್ದ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರು ಡ್ರಗ್ ಪೆಡ್ಲರ್ ಸಂಬಂಧ ಅಮೃತಹಳ್ಳಿ, ಸಂಪಿಗೆಹಳ್ಳಿ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ನೈಜೀರಿಯಾದ ಯ್ಯುಚೋಹುಕ್ವು ಮಾರ್ಕ್ ಮೌರಿಸ್, ಬಿಸಿನೆಸ್ ವೀಸಾದಡಿ ಬಂದು ಅಕ್ರಮವಾಗಿ ಡ್ರಗ್ ಬಿಸಿನೆಸ್ ಮಾಡುತ್ತಿದ್ದ ಈತ ಅಮೃತಹಳ್ಳಿ ಜಕ್ಕೂರ್ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನಿಂದ 50 ಲಕ್ಷ ಮೌಲ್ಯದ 500ಗ್ರಾಂ ಎಂಡಿಎಂ, 91 ಎಕ್ಸ್ ಟಸಿ ಮಾತ್ರೆ, 56 ಎಲ್​ಎಸ್​ಡಿ ಸ್ಟ್ರಿಪ್ಸ್ ಜಪ್ತಿ ಮಾಡಲಾಗಿದೆ.

ಇನ್ನು ಮತ್ತೋರ್ವ ಆರೋಪಿ ಜೋಸೆಫ್ ಡುಕ್ವೆ ಒಕಾಫಾರ್​ನನ್ನು ಯಲಹಂಕದಲ್ಲಿ ಬಂಧಿಸಿಲಾಗಿದ್ದು ಈತ ಟೂರಿಸ್ಟ್ ವೀಸಾದಡಿ ಬಂದು ಅಕ್ರಮವಾಗಿ ನೆಲೆಸಿದ್ದ. ಬಂಧಿತನಿಂದ 15 ಲಕ್ಷ ಮೌಲ್ಯದ 65 ಗ್ರಾಂ ಕೊಕೇನ್, 50 ಎಕ್ಸ್ ಟಿಸಿ ಮಾತ್ರೆ, 58 ಎಲ್​ಎಸ್​ಡಿ ಸ್ಟ್ರಿಪ್ಸ್ ಜಪ್ತಿ ಮಾಡಲಾಗಿದೆ. ಈ ಸಂಬಂಧ ಅಮೃತಹಳ್ಳಿ ಹಾಗೂ ಸಂಪಿಗೆಹಳ್ಳಿ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಬಂಧಿತರಿಂದ 65 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ

ಇದನ್ನೂ ಓದಿ: Drug Case​: ಡ್ರಗ್​ ಕೇಸ್​ನಲ್ಲಿ CCB ಬಿಜಿಯಾಗಿದ್ದಾಗ ಸ್ಟಾರ್ ಹೋಟೆಲ್​ನಲ್ಲಿ ನಡೆಯುತ್ತಿತ್ತು ಹೈಫೈ ಡ್ರಗ್​ ಪಾರ್ಟಿಗಳು! 5 ಮಂದಿ ಅರೆಸ್ಟ್