ಬೌನ್ಸ್​ ಬೈಕಲ್ಲಿ ಬರ್ತಾರೆ, ದೊಣ್ಣೆಯಿಂದ ಹೊಡೆದು ಸರ ಕದೀತಾರೆ ಹುಷಾರ್!

ಬೆಂಗಳೂರು: ‌‌ವೃದ್ಧರೋರ್ವರಿಗೆ ದೊಣ್ಣೆಯಿಂದ ಹೊಡೆದು ಸರಗಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‌‌ಭಟ್ಟರಹಳ್ಳಿಯ ಶ್ರೀನಿವಾಸ್ ಲೇಔಟ್​ನಲ್ಲಿ ಬೈಕ್​ನಲ್ಲಿ ಬಂದ ಖದೀಮರು ‌‌ಲೀಲಾವತಿ ಹೆಬ್ಬಾರ್ ಎಂಬುವರಿಗೆ ದೊಣ್ಣೆಯಿಂದ ಹೊಡೆದು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ‌‌ಡಿಸೆಂಬರ್​ 10ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‌‌ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅದೇ ದಿನ ದೊಣ್ಣೆಯಿಂದ ಹೊಡೆದು ಸರಕಿತ್ತುಕೊಂಡು ಹೋದ ಮತ್ತೊಂದು ಘಟನೆಯೂ ಬೆಳಕಿಗೆ ಬಂದಿತ್ತು. ‌‌ಒಂದೇ ಗ್ಯಾಂಗ್​ ಒಂದೇ ದಿನ ಈ ಎರಡು ಕೃತ್ಯಗಳನ್ನ ಎಸಗಿದ್ದಾರೆ‌. ‌ಮೊದಲು ಕೆ.ಆರ್.ಪುರದಲ್ಲಿ […]

ಬೌನ್ಸ್​ ಬೈಕಲ್ಲಿ ಬರ್ತಾರೆ, ದೊಣ್ಣೆಯಿಂದ ಹೊಡೆದು ಸರ ಕದೀತಾರೆ ಹುಷಾರ್!
ಸಾಧು ಶ್ರೀನಾಥ್​

Updated on: Dec 13, 2019 | 1:22 PM

ಬೆಂಗಳೂರು: ‌‌ವೃದ್ಧರೋರ್ವರಿಗೆ ದೊಣ್ಣೆಯಿಂದ ಹೊಡೆದು ಸರಗಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‌‌ಭಟ್ಟರಹಳ್ಳಿಯ ಶ್ರೀನಿವಾಸ್ ಲೇಔಟ್​ನಲ್ಲಿ ಬೈಕ್​ನಲ್ಲಿ ಬಂದ ಖದೀಮರು ‌‌ಲೀಲಾವತಿ ಹೆಬ್ಬಾರ್ ಎಂಬುವರಿಗೆ ದೊಣ್ಣೆಯಿಂದ ಹೊಡೆದು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ‌‌ಡಿಸೆಂಬರ್​ 10ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

‌‌ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅದೇ ದಿನ ದೊಣ್ಣೆಯಿಂದ ಹೊಡೆದು ಸರಕಿತ್ತುಕೊಂಡು ಹೋದ ಮತ್ತೊಂದು ಘಟನೆಯೂ ಬೆಳಕಿಗೆ ಬಂದಿತ್ತು. ‌‌ಒಂದೇ ಗ್ಯಾಂಗ್​ ಒಂದೇ ದಿನ ಈ ಎರಡು ಕೃತ್ಯಗಳನ್ನ ಎಸಗಿದ್ದಾರೆ‌. ‌ಮೊದಲು ಕೆ.ಆರ್.ಪುರದಲ್ಲಿ ಕೃತ್ಯವೆಸಗಿ ಬಳಿಕ ಆವಲಹಳ್ಳಿಯ ಬಳಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. 2 ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ‌ಕೆ.ಆರ್.ಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Published On - 1:21 pm, Fri, 13 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us