‘ಇನ್ಮುಂದೆ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ರೆ ಅಮಾನತು ಶಿಕ್ಷೆ’
ಬೆಂಗಳೂರು: ಇನ್ಮುಂದೆ ನಗರದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ರೆ ಅಮಾನತು ಶಿಕ್ಷೆ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ತಮ್ಮ ವ್ಯಾಪ್ತಿಗೆ ಬರಲ್ಲವೆಂದು ದೂರು ದಾಖಲಿಸಿಕೊಳ್ಳದಿದ್ರೆ ಅಥವಾ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ರೆ ಅಮಾನತು ಮಾಡಲಾಗುವುದು. ಯಾರೇ ದೂರು ಕೊಟ್ರೂ ಮೊದಲು ಕೇಸ್ ದಾಖಲಿಸಿ, ಆನಂತರ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಲು ಭಾಸ್ಕರ್ ರಾವ್ ಎಲ್ಲ ಠಾಣೆಗಳಿಗೂ ಸೂಚನೆ ನೀಡಿದ್ದಾರೆ. ಸುರಕ್ಷಾ ಆ್ಯಪ್ ದೂರುಗಳಿಗೆ ತಕ್ಷಣ ಸ್ಪಂದಿಸಿ: ಇದರ ಜೊತೆಗೆ […]
ಬೆಂಗಳೂರು: ಇನ್ಮುಂದೆ ನಗರದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ರೆ ಅಮಾನತು ಶಿಕ್ಷೆ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ತಮ್ಮ ವ್ಯಾಪ್ತಿಗೆ ಬರಲ್ಲವೆಂದು ದೂರು ದಾಖಲಿಸಿಕೊಳ್ಳದಿದ್ರೆ ಅಥವಾ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ರೆ ಅಮಾನತು ಮಾಡಲಾಗುವುದು. ಯಾರೇ ದೂರು ಕೊಟ್ರೂ ಮೊದಲು ಕೇಸ್ ದಾಖಲಿಸಿ, ಆನಂತರ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಲು ಭಾಸ್ಕರ್ ರಾವ್ ಎಲ್ಲ ಠಾಣೆಗಳಿಗೂ ಸೂಚನೆ ನೀಡಿದ್ದಾರೆ.
ಸುರಕ್ಷಾ ಆ್ಯಪ್ ದೂರುಗಳಿಗೆ ತಕ್ಷಣ ಸ್ಪಂದಿಸಿ: ಇದರ ಜೊತೆಗೆ ಸುರಕ್ಷಾ ಆ್ಯಪ್ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ದೂರು ಬಂದ ಕೂಡಲೇ ಹೊಯ್ಸಳ ವಾಹನದಲ್ಲಿ ಪೊಲೀಸರು ಸ್ಥಳಕ್ಕೆ ಹೋಗಬೇಕು. ಹೊಯ್ಸಳ ಇಲ್ಲದಿದ್ರೆ ಇನ್ಸ್ ಪೆಕ್ಟರ್ ಮೊದಲು ಜೀಪ್ ಕಳುಹಿಸಲಿ, ಇನ್ಸ್ಪೆಕ್ಟರ್ ಬೇಕಿದ್ರೆ ಬಸ್ನಲ್ಲಿ ಬರಲಿ ಖಡಕ್ ಸೂಚನೆ ನೀಡಿದ್ದಾರೆ.
Published On - 5:45 pm, Thu, 12 December 19