ಬೌನ್ಸ್ ಬೈಕಲ್ಲಿ ಬರ್ತಾರೆ, ದೊಣ್ಣೆಯಿಂದ ಹೊಡೆದು ಸರ ಕದೀತಾರೆ ಹುಷಾರ್!
ಬೆಂಗಳೂರು: ವೃದ್ಧರೋರ್ವರಿಗೆ ದೊಣ್ಣೆಯಿಂದ ಹೊಡೆದು ಸರಗಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭಟ್ಟರಹಳ್ಳಿಯ ಶ್ರೀನಿವಾಸ್ ಲೇಔಟ್ನಲ್ಲಿ ಬೈಕ್ನಲ್ಲಿ ಬಂದ ಖದೀಮರು ಲೀಲಾವತಿ ಹೆಬ್ಬಾರ್ ಎಂಬುವರಿಗೆ ದೊಣ್ಣೆಯಿಂದ ಹೊಡೆದು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಡಿಸೆಂಬರ್ 10ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅದೇ ದಿನ ದೊಣ್ಣೆಯಿಂದ ಹೊಡೆದು ಸರಕಿತ್ತುಕೊಂಡು ಹೋದ ಮತ್ತೊಂದು ಘಟನೆಯೂ ಬೆಳಕಿಗೆ ಬಂದಿತ್ತು. ಒಂದೇ ಗ್ಯಾಂಗ್ ಒಂದೇ ದಿನ ಈ ಎರಡು ಕೃತ್ಯಗಳನ್ನ ಎಸಗಿದ್ದಾರೆ. ಮೊದಲು ಕೆ.ಆರ್.ಪುರದಲ್ಲಿ […]
ಬೆಂಗಳೂರು: ವೃದ್ಧರೋರ್ವರಿಗೆ ದೊಣ್ಣೆಯಿಂದ ಹೊಡೆದು ಸರಗಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭಟ್ಟರಹಳ್ಳಿಯ ಶ್ರೀನಿವಾಸ್ ಲೇಔಟ್ನಲ್ಲಿ ಬೈಕ್ನಲ್ಲಿ ಬಂದ ಖದೀಮರು ಲೀಲಾವತಿ ಹೆಬ್ಬಾರ್ ಎಂಬುವರಿಗೆ ದೊಣ್ಣೆಯಿಂದ ಹೊಡೆದು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಡಿಸೆಂಬರ್ 10ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅದೇ ದಿನ ದೊಣ್ಣೆಯಿಂದ ಹೊಡೆದು ಸರಕಿತ್ತುಕೊಂಡು ಹೋದ ಮತ್ತೊಂದು ಘಟನೆಯೂ ಬೆಳಕಿಗೆ ಬಂದಿತ್ತು. ಒಂದೇ ಗ್ಯಾಂಗ್ ಒಂದೇ ದಿನ ಈ ಎರಡು ಕೃತ್ಯಗಳನ್ನ ಎಸಗಿದ್ದಾರೆ. ಮೊದಲು ಕೆ.ಆರ್.ಪುರದಲ್ಲಿ ಕೃತ್ಯವೆಸಗಿ ಬಳಿಕ ಆವಲಹಳ್ಳಿಯ ಬಳಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. 2 ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆ.ಆರ್.ಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Published On - 1:21 pm, Fri, 13 December 19