ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 10ಸಾವಿಕ್ಕೂ ಅಧಿಕ ದೂರು ದಾಖಲಾಗಿತ್ತು. ಸೈಬರ್ ಕ್ರೈಂ ಪೊಲೀಸರಿಗೆ ಅಪರಾಧ ಪ್ರಕರಣಗಳನ್ನ ಪತ್ತೆಹಚ್ಚುವುದಕ್ಕೆ ಸಾಕಷ್ಟು ತಲೆನೋವಾಗಿತ್ತು. ಹೀಗಾಗಿ ನಗರದ 8 ವಿಭಾಗಗಳಲ್ಲಿ ಪ್ರತ್ಯೆಕ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
CEN-ಸೈಬರ್ ಕ್ರೈಂ, ಆರ್ಥಿಕ ಅಪರಾಧ, ಮಾದಕದ್ರವ್ಯ ನಿಗ್ರಹ ಘಟಕವಾಗಿದೆ. ನಗರದ 8 ಡಿಸಿಪಿ ವಿಭಾಗಗಳಲ್ಲಿ ಪ್ರತ್ಯೇಕ ಸೈಬರ್ ಕ್ರೈಂ ಠಾಣೆಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಅಧಿಕೃತವಾಗಿ ಸಿಎಂ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ರಿಜ್ವಾನ್ ಅರ್ಷದ್, ಡಿಜಿ & ಐಜಿಪಿ ನೀಲಮಣಿ ಎನ್.ರಾಜು ಸೇರಿ ಹಲವರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಶ್ರೀ @BSYBJP ಅವರು ಸಿಇಎನ್ ಪೊಲೀಸ್ ಠಾಣೆಗಳ ಮತ್ತು ಭಯೋತ್ಪಾದಕ ನಿಗ್ರಹ ದಳದ ಉದ್ಘಾಟನೆ ನೆರವೇರಿಸಿದರು
ಇದೇ ಸಂದರ್ಭದಲ್ಲಿ 88 ಹೆದ್ದಾರಿ ಸಂಚಾರಿ ಗಸ್ತು ವಾಹನಗಳನ್ನು ಲೋಕಾರ್ಪಣೆ ಮಾಡಿದರು
ಡಿಸಿಎಮ್ @LaxmanSavadi, ಸಚಿವ @BSBommai, ಶಾಸಕ ರಿಜ್ವಾನ್ ಅರ್ಷದ್, ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಉಪಸ್ಥಿತರಿದ್ದರು pic.twitter.com/KgQzJVi8oA
— CM of Karnataka (@CMofKarnataka) December 17, 2019
Published On - 12:45 pm, Tue, 17 December 19