ನಟಿ ಪ್ರಣೀತಾ ಹೆಸರು ಹೇಳಿ ವಂಚನೆ: ಗ್ಯಾಂಗ್ ವಿರುದ್ಧ FIR ದಾಖಲು

ಬೆಂಗಳೂರು: ಬಹುಭಾಷಾ ನಟಿ ಪ್ರಣೀತಾ ಸುಭಾಷ್​ ಹೆಸರು ಹೇಳಿ ಗ್ಯಾಂಗ್​ ಒಂದು ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. SV ಗ್ರೂಪ್ ಌಂಡ್​ ಡೆವಲಪರ್ಸ್​ ಎಂಬ ಕಂಪನಿಗೆ ಪ್ರಣೀತಾರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡೋದಾಗಿ ಹೇಳಿದ್ದ ವಂಚಕರು ಸಂಸ್ಥೆಯ ಮ್ಯಾನೇಜರ್​ನ ನಗರದ ಖಾಸಗಿ ಹೋಟೆಲ್​ಗೆ ಕರೆಸಿ ಹಣ ಕೊಟ್ರೇ ಒಂದು ಗಂಟೆಯಲ್ಲಿ ಪ್ರಣೀತಾ ಬಂದು ಅಗ್ರಿಮೆಂಟ್​ಗೆ ಸಹಿ ಹಾಕ್ತಾರೆ ಎಂದು ಹೇಳಿದ್ದರಂತೆ. ವಂಚಕರ ಮಾತು ನಂಬಿ SV ಗ್ರೂಪ್ ಮ್ಯಾನೇಜರ್ ಅವರಿಗೆ 13.5 ಲಕ್ಷ ರೂಪಾಯಿ ಸಹ […]

ನಟಿ ಪ್ರಣೀತಾ ಹೆಸರು ಹೇಳಿ ವಂಚನೆ: ಗ್ಯಾಂಗ್ ವಿರುದ್ಧ FIR ದಾಖಲು
Updated By: ಸಾಧು ಶ್ರೀನಾಥ್​

Updated on: Oct 12, 2020 | 6:14 PM

ಬೆಂಗಳೂರು: ಬಹುಭಾಷಾ ನಟಿ ಪ್ರಣೀತಾ ಸುಭಾಷ್​ ಹೆಸರು ಹೇಳಿ ಗ್ಯಾಂಗ್​ ಒಂದು ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

SV ಗ್ರೂಪ್ ಌಂಡ್​ ಡೆವಲಪರ್ಸ್​ ಎಂಬ ಕಂಪನಿಗೆ ಪ್ರಣೀತಾರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡೋದಾಗಿ ಹೇಳಿದ್ದ ವಂಚಕರು ಸಂಸ್ಥೆಯ ಮ್ಯಾನೇಜರ್​ನ ನಗರದ ಖಾಸಗಿ ಹೋಟೆಲ್​ಗೆ ಕರೆಸಿ ಹಣ ಕೊಟ್ರೇ ಒಂದು ಗಂಟೆಯಲ್ಲಿ ಪ್ರಣೀತಾ ಬಂದು ಅಗ್ರಿಮೆಂಟ್​ಗೆ ಸಹಿ ಹಾಕ್ತಾರೆ ಎಂದು ಹೇಳಿದ್ದರಂತೆ.

ವಂಚಕರ ಮಾತು ನಂಬಿ SV ಗ್ರೂಪ್ ಮ್ಯಾನೇಜರ್ ಅವರಿಗೆ 13.5 ಲಕ್ಷ ರೂಪಾಯಿ ಸಹ ನೀಡಿದ್ದರಂತೆ. ಇಲ್ಲೇ ಇರಿ, ಬರುತ್ತೇವೆ ಎಂದು ರೂಮ್ ಒಳಗೆ ಹೋದ ಖದೀಮರು ಹಣದ ಜೊತೆ ಎಸ್ಕೇಪ್ ಆಗಿದ್ದಾರಂತೆ. ಇನ್ನು ವಂಚಕರ ಕರಾಮತ್ತು ಬೆಳಕಿಗೆ ಬರುತ್ತಿದ್ದಂತೆ ಸಂಸ್ಥಯು ಮಹಮ್ಮದ್ ಜುನಾಯತ್ ಹಾಗೂ ವರ್ಷಾ ಎಂಬ ಈ ಖತರ್​ನಾಕ ಕಿಲಾಡಿಗಳ ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.