ಬೆಂಗಳೂರು: ATMನಲ್ಲಿ ಗ್ರಾಹಕರಿಗೆ ವಂಚಿಸುತ್ತಿದ್ದ ಖದೀಮನೊಬ್ಬನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಅರುಣ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಬ್ಯಾಂಕ್ ಸಿಬ್ಬಂದಿಯಂತೆ ATMನಲ್ಲಿ ಕುಳಿತಿರುತ್ತಿದ್ದ ಅರುಣ್ ಅಲ್ಲಿಗೆ ಬರುವವರಿಗೆ ಸಹಾಯ ಮಾಡೋ ಸೋಗಿನಲ್ಲಿ ವಂಚನೆ ಮಾಡುತ್ತಿದ್ದನು. ನಯವಂಚಕ ಗ್ರಾಹಕರಿಂದ ಡೆಬಿಟ್ ಕಾರ್ಡ್ ಪಿನ್ ತಿಳಿದು ಕಾರ್ಡ್ ಬದಲಾಯಿಸ್ತಿದ್ದನಂತೆ. ಬಳಿಕ ಗ್ರಾಹಕರ ಕಾರ್ಡ್‌ನಿಂದ ಅರುಣ್ ಹಣ ಲಪಟಾಯಿಸ್ತಿದ್ದ.
ಸದ್ಯ, ಅರೋಪಿಯನ್ನು ಪೊಲೀಸರು ಬಂಧಿಸಿದ್ದು ಆತನ ಬಳಿಯಿದ್ದ 1.6 ಲಕ್ಷ ರೂಪಾಯಿ ಮೌಲ್ಯದ 2 ಮೊಬೈಲ್, ಚಿನ್ನಾಭರಣ ಮತ್ತು ಹಣವನ್ನು ಸಹ ಜಪ್ತಿ ಮಾಡಲಾಗಿದೆ. ಆರೋಪಿ ಈ ಹಿಂದೆ ಸಹ ಶಿರಾ ಮತ್ತು ತಮಕೂರು ಟೌನ್ನಲ್ಲಿ ಇಂಥದ್ದೇ ಕೆಲಸಕ್ಕೆ ಇಳಿದಿದ್ದ ಎಂಬ ಮಾಹಿತಿ ಸಹ ಸಿಕ್ಕಿದೆ.