ಅಲಯನ್ಸ್​ ಅಯ್ಯಪ್ಪ ಹತ್ಯೆ: ಸ್ಕೆಚ್ ಹಾಕಿದ್ದ ಗಣೇಶ್ ಮೇಲೆ ಪೊಲೀಸ್ ಫೈರಿಂಗ್

|

Updated on: Oct 24, 2019 | 6:00 PM

ಬೆಂಗಳೂರು: ಅಲಯನ್ಸ್ ವಿವಿ ವಿಶ್ರಾಂತ ಕುಲಪತಿ ಅಯ್ಯಪ್ಪ ಹತ್ಯೆ ಪ್ರಕರಣದ ಕೊಲೆ ಆರೋಪಿ ಮೇಲೆ ಪೊಲೀಸರು ಫೈರಿಂಗ್  ಮಾಡಿದ್ದಾರೆ. ಬೆಂಗಳೂರಿನ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಗಣೇಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪ್ರಕರಣ ಸಂಬಂಧ ಗಣೇಶ್ ಬಂಧಿಸಲು ತೆರಳಿದ್ದ ಪೊಲೀಸರು ಶರಣಾಗುವಂತೆ ಆರೋಪಿ ಗಣೇಶ್​ಗೆ ಸೂಚಿಸಿದ್ದರು ಆದರೆ ಆರೋಪಿ ಗಣೇಶ್ ಶರಣಾಗದೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ, ಈ ವೇಳೆ ಆತ್ಮರಕ್ಷಣೆಗಾಗಿ ಆರ್​.ಟಿ.ನಗರ ಠಾಣೆ ಇನ್ಸ್ ಪೆಕ್ಟರ್ ಮಿಥುನ್ ಶಿಲ್ಪಿ ಫೈರಿಂಗ್ ಮಾಡಿದ್ದಾರೆ. ಇನ್ನೂ ಆರೋಪಿ […]

ಅಲಯನ್ಸ್​ ಅಯ್ಯಪ್ಪ ಹತ್ಯೆ: ಸ್ಕೆಚ್ ಹಾಕಿದ್ದ ಗಣೇಶ್ ಮೇಲೆ ಪೊಲೀಸ್ ಫೈರಿಂಗ್
Follow us on

ಬೆಂಗಳೂರು: ಅಲಯನ್ಸ್ ವಿವಿ ವಿಶ್ರಾಂತ ಕುಲಪತಿ ಅಯ್ಯಪ್ಪ ಹತ್ಯೆ ಪ್ರಕರಣದ ಕೊಲೆ ಆರೋಪಿ ಮೇಲೆ ಪೊಲೀಸರು ಫೈರಿಂಗ್  ಮಾಡಿದ್ದಾರೆ. ಬೆಂಗಳೂರಿನ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಗಣೇಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಪ್ರಕರಣ ಸಂಬಂಧ ಗಣೇಶ್ ಬಂಧಿಸಲು ತೆರಳಿದ್ದ ಪೊಲೀಸರು ಶರಣಾಗುವಂತೆ ಆರೋಪಿ ಗಣೇಶ್​ಗೆ ಸೂಚಿಸಿದ್ದರು ಆದರೆ ಆರೋಪಿ ಗಣೇಶ್ ಶರಣಾಗದೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ, ಈ ವೇಳೆ ಆತ್ಮರಕ್ಷಣೆಗಾಗಿ ಆರ್​.ಟಿ.ನಗರ ಠಾಣೆ ಇನ್ಸ್ ಪೆಕ್ಟರ್ ಮಿಥುನ್ ಶಿಲ್ಪಿ ಫೈರಿಂಗ್ ಮಾಡಿದ್ದಾರೆ.

ಇನ್ನೂ ಆರೋಪಿ ಗಣೇಶ್ ಮುನಿರೆಡ್ಡಿ ಪಾಳ್ಯದಲ್ಲಿ ಪಂಕ್ಚರ್ ಅಂಗಡಿಇಟ್ಟುಕೊಂಡಿದ್ದ. ನಂತರ ಬ್ಯಾಟರಾಯನಪುರಕ್ಕೆ ಶಿಫ್ಟ್ ಆಗಿದ್ದ, ಬ್ಯಾಟರಾಯನಪುರಕ್ಕೆ ಶಿಫ್ಟ್ ಆದಾಗ ಅಯ್ಯಪ್ಪ ಹತ್ಯೆಗೆ ಸಹಾಯ ಕೋರಿ ಸೂರಜ್​ನಿಂದ ಕರೆ ಬರುತ್ತೆ. ನಂತರ ಅಯ್ಯಪ್ಪ ಹತ್ಯೆ ಗೆ ಪಂಕ್ಚರ್ ಅಂಗಡಿಯಲ್ಲಿ ಗಣೇಶ್​ನಿಂದಲೇ ಸ್ಕೆಚ್ ರೆಡಿಯಾಗಿತ್ತು.

ಅಯ್ಯಪ್ಪ ದೊರೆ ಹತ್ಯೆಗೆ ಗಣೇಶ್​ನಿಂದಲೇ ಮಾರಕಾಸ್ತ್ರಗಳು ಸಪ್ಲೈ ಆಗಿದ್ದವು. ಕೊಲೆ ಮಾಡುವಾಗ ಕೊನೆಯಲ್ಲಿ ಬಂದು ಇರಿದಿದ್ದ ಪಾಪಿಗೆ ಈಗ ಪೊಲೀಸರ ಗುಂಡು ಹಾರಿಸಿದ್ದು, ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂಜಯನಗರದ ಕಾರ್ಪೊರೇಷನ್ ಗೋಡೌನ್ ಬಳಿ ಆರೋಪಿ ಗಣೇಶ್ ಇರುವ ಮಾಹಿತಿ ಸಿಕ್ಕ ಹಿನ್ನೆಲೆ ಬಂಧನಕ್ಕೆ ತೆರಳಿದ್ದ ಪೊಲೀಸರಿಂದ ಹಲ್ಲೆಗೆ ಮುಂದಾದ ಗಣೇಶ್ ಮೇಲೆ ಫೈರಿಂಗ್ ಮಾಡಿಲಾಗಿದೆ.

Published On - 10:35 am, Sun, 20 October 19