ನ್ಯೂಯಾರ್ಕ್: ನ್ಯೂಜೆರ್ಸಿಯ ಕಾಂಡೋಮಿನಿಯಂನಲ್ಲಿ ತನ್ನ ಅಜ್ಜ-ಅಜ್ಜಿ ಮತ್ತು ಚಿಕ್ಕಪ್ಪನನ್ನು ಕೊಲೆ ಮಾಡಿದ ಆರೋಪದ ಮೇಲೆ 23 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ನ್ಯೂಜೆರ್ಸಿಯಲ್ಲಿರುವ ಓಂ ಬ್ರಹ್ಮ ಭಟ್ ಎಂಬ 23 ವರ್ಷದ ವಿದ್ಯಾರ್ಥಿ 72 ವರ್ಷದ ದಿಲೀಪ್‌ಕುಮಾರ್ ಬ್ರಹ್ಮ ಭಟ್, 72 ವರ್ಷದ ಬ್ರಹ್ಮಭಟ್ ಮತ್ತು 38 ವರ್ಷದ ಯಶ್‌ಕುಮಾರ್ ಬ್ರಹ್ಮ ಭಟ್ ಅವರನ್ನು ಕೊಲೆ ಮಾಡಿದ್ದಾರೆ.
ಓಂ ಬ್ರಹ್ಮ ಭಟ್ ದಕ್ಷಿಣ ಪ್ಲೇನ್‌ಫೀಲ್ಡ್ ಪೊಲೀಸ್ ಇಲಾಖೆ ಮತ್ತು ಮಿಡ್ಲ್‌ಸೆಕ್ಸ್ ಕೌಂಟಿ ಪ್ರಾವಸಿಕ್ಯೂಟರ್ ಕಚೇರಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸೌತ್ ಪ್ಲೇನ್‌ಫೀಲ್ಡ್ ಟ್ರೆಡಿಶನ್ಸ್ ಕಾಂಡೋ ಕಾಂಪ್ಲೆಕ್ಸ್‌ನಲ್ಲಿ ಗುಂಡು ಹಾರಿಸಿದ ಶಬ್ದ ಕೇಳಿದ್ದರಿಂದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದ ನಂತರ ಅಧಿಕಾರಿಗಳು ಮೂವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡರು. ಇಬ್ಬರು ಪುರುಷರು ಮತ್ತು ಒಬ್ಬರು ಮಹಿಳೆ ಗುಂಡೇಟಿನ ಗಾಯಗಳಿಂದ ಬಳಲುತ್ತಿದ್ದರು.
ಇದನ್ನೂ ಓದಿ: ರಾಜಸ್ಥಾನ: ಮಗಳ ಕತ್ತು ಸೀಳಿ ಕೊಲೆ ಮಾಡಿ ದೇಹಕ್ಕೆ ಬೆಂಕಿ ಇಟ್ಟ ತಂದೆ
ದಂಪತಿಗಳಾದ ದಿಲೀಪ್‌ಕುಮಾರ್ ಮತ್ತು ಬಿಂದು ಬ್ರಹ್ಮಭಟ್ ಅವರು ಎರಡನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಮಗ ಯಶ್‌ಕುಮಾರ್ ಬ್ರಹ್ಮಭಟ್ ಕೂಡ ಗುಂಡೇಟಿನಿಂದ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು.
ಘಟನಾ ಸ್ಥಳದಲ್ಲಿ ವಿಚಾರಣೆಗಾಗಿ ಒಬ್ಬ ಕೊಲೆಗೀಡಾದ ದಂಪತಿಯ ಮೊಮ್ಮಗನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ನಂತರ ಆತನೇ ಕೊಲೆ ಮಾಡಿರುವುದು ಸಾಬೀತಾಯಿತು. ಗುಜರಾತ್ ಮೂಲದ ಓಂ ಬ್ರಹ್ಮ ಭಟ್ ತನ್ನ ಅಜ್ಜ, ಅಜ್ಜಿ, ಚಿಕ್ಕಪ್ಪನ ಜೊತೆ ವಾಸಿಸುತ್ತಿದ್ದರು. ಓಂ ಕಳೆದ 2 ತಿಂಗಳುಗಳ ಹಿಂದೆ ನ್ಯೂಜೆರ್ಸಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ. ಅವರು ಕಾಂಡೋದಲ್ಲಿ ವಾಸಿಸುತ್ತಿದ್ದರು. ಆದರೆ, ಓಂ ತನ್ನ ಮನೆಯ ಮೂವರನ್ನು ಯಾಕೆ ಕೊಲೆ ಮಾಡಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ