ಕಲಬುರಗಿ: ಭವಿಷ್ಯ ಹೇಳ್ತಿದ್ದವಳ ತಲೆ ಸೀಳಿದ ಹಂತಕರು! ಅತ್ಯಾಚಾರವೆಸಗಿ ಕೊಲೆ ಮಾಡಿರೋ ಶಂಕೆ
ಕಲಬುರಗಿಯಲ್ಲಿ ಒಂಟಿ ವೃದ್ದೆಯ ಭೀಕರ ಹತ್ಯೆ ಪ್ರಕರಣ ದಾಖಲಿಸಿಕೊಂಡಿರೋ ಆರ್ ಜೆ ನಗರ ಪೊಲೀಸರು ಹಂತಕರ ಪತ್ತೆಗೆ ಜಾಲ ಬೀಸಿದ್ದಾರೆ. ಅದೆನೇ ಇರಲಿ ದೇವರ ಹೆಸರಿನ ಮೇಲೆ ಭವಿಷ್ಯ ಹೇಳ್ತಿದ್ದ ರತ್ನಾಬಾಯಿ, ತನ್ನ ಭವಿಷ್ಯ ಹಿಗೇ ಅಂತ್ಯವಾಗುತ್ತೆ ಅನ್ನೊದು ತಿಳಿಯದೇ ಇರೋದು ದುರಂತವೇ ಸರಿ. ಹಂತಕರ ಬಂಧನದ ನಂತರವೇ ರತ್ನಾಬಾಯಿ ಹತ್ಯೆಗೆ ಕಾರಣ ಏನು ಅನ್ನೊದು ತಿಳಿಯಲಿದೆ.
ಆ ವೃದ್ದೆ ದೇವರ ಹೆಸರಿನ ಮೇಲೆ ಭವಿಷ್ಯ ಹೇಳ್ತಾ ಜನರ ಕಷ್ಟಕಾರ್ಪಣ್ಯಗಳನ್ನ ದೂರ ಮಾಡುತ್ತ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಳು. ಆದರೆ ತನ್ನ ಭವಿಷ್ಯದ ಬಗ್ಗೆನೇ ತಿಳಿಯದೇ ಆಕೆ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾಳೆ.. ಮನೆಗೆ ನುಗ್ಗಿದ ಹಂತಕರ ತಂಡ ಒಂಟಿ ವೃದ್ದೆಯನ್ನ ಭೀಕರವಾಗಿ ಕೊಂದು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಬರ್ಬರವಾಗಿ ಹತ್ಯೆಯಾಗಿ ಬಿದ್ದಿರೋ ವೃದ್ದೆ.. ಪೊಲೀಸರಿಂದ ಸ್ಥಳ ಪರಿಶೀಲನೆ.. ಮತ್ತೊಂದೆಡೆ ತಮ್ಮವರನ್ನ ಕಳೆದುಕೊಂಡು ರೋಧಿಸುತ್ತಿರೋ ಕುಟುಂಬಸ್ಥರು.. ಅಷ್ಟಕ್ಕೂ ಈ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ನಗರದಲ್ಲಿ. ಮೇಲಿನ ಫೋಟೊದಲ್ಲಿ ಕಾಣ್ತಾಯಿರೋ ವೃದ್ದೆಯ ಹೆಸರು 65 ವರ್ಷದ ರತ್ನಾಬಾಯಿ ಅಂತ. ಕಲಬುರಗಿಯ ಬಿದನೂರ್ ಗ್ರಾಮದ ನಿವಾಸಿಯಾದ ರತ್ನಾಬಾಯಿ ಕಳೆದ 30 ವರ್ಷಗಳಿಂದ ನಗರದ ಸಂತೋಷ್ ಕಾಲೋನಿಯಲ್ಲಿ ಟಿನ್‌ಶೆಡ್‌ನಲ್ಲಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಳು.
ಹಿಗೇ ಅನೇಕ ವರ್ಷಗಳಿಂದ ರತ್ನಾಬಾಯಿ ಕೂಲಿ ಕೆಲಸ ಮಾಡ್ತಾ ಗುಡ್ಡಾಪುರದ ದಾನಮ್ಮ ದೇವಿಯ ಹೆಸರಿನ ಮೇಲೆ ಭವಿಷ್ಯ ಹೇಳುತ್ತ ಜನರ ಕಷ್ಟಕಾರ್ಪಣ್ಯಗಳನ್ನ ದೂರ ಮಾಡುತ್ತಿದ್ದಳು. ಆದರೆ ನಿನ್ನೆ ಶೆಡ್‌ಗೆ ನುಗ್ಗಿದ ಹಂತಕರು, ತಲೆಗೆ ಕಲ್ಲಿನಿಂದ ಜಜ್ಜಿ ಆಕೆಯನ್ನ ಅರೆನಗ್ನ ಸ್ಥಿತಿಯಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ. ಆಕೆಯ ಬಟ್ಟೆ ಚೆಲ್ಲಾಪಿಲ್ಲಿಯಾಗಿದ್ದನ್ನ ನೋಡಿದ್ರೆ ಅತ್ಯಾಚಾರವೆಸಗಿ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.
ರತ್ನಾಬಾಯಿ ಯಾಕೆ ಹತ್ಯೆಯಾದಳು ಅನ್ನೊದು ನಿಗೂಢವಾಗಿದೆ.. ಅಷ್ಟಕ್ಕೂ ದೇವರ ಹೆಸರಿನ ಮೇಲೆ ಭವಿಷ್ಯ ಕೇಳಲು ವಾರಕ್ಕೆ ಎರಡ್ಮೂರು ಸಲ ಸಾಕಷ್ಟು ಜನ ಬಂದು ಹೋಗುತ್ತಿದ್ದರು. ಹೀಗೆ ಬಂದವರೇ ಯಾರಾದರೂ ದ್ವೇಷ ಇಟ್ಟುಕೊಂಡು ರತ್ನಾಬಾಯಿಯನ್ನ ಕೊಲೆ ಮಾಡಿದರಾ ಅನ್ನೊದು ಶಂಕೆ ಕೂಡಾ ವ್ಯಕ್ತವಾಗ್ತಿದೆ.
ಇದನ್ನೂ ಓದಿ:ಸ್ತ್ರೀರೋಗ ತಜ್ಞೆ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ.. ಅಶ್ಲೀಲ ವಿಡಿಯೋ ಕಳಿಸಿ ಎಂದ ಕಿರಾತಕರು!
ರತ್ನಾಬಾಯಿಯನ್ನ ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ರತ್ನಾಬಾಯಿ ಕಾಲ್ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಕೆಲ ಸ್ಥಳೀಯರು ಮನೆಗೆ ಬಂದಿದ್ದಾರೆ. ಈ ವೇಳೆ ಶೆಡ್‌ನಿಂದ ಕೆಟ್ಟ ವಾಸನೆ ಬರ್ತಿದ್ದನ್ನ ನೋಡಿ ಬೀಗ ಮುರಿದು ಒಳಗೆ ಹೋಗಿ ನೋಡಿದ್ದಾರೆ.
ಈ ವೇಳೆ ರತ್ನಾಬಾಯಿ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದ್ದು, ಆಕೆಯ ಮೇಲಿನ ಬಟ್ಟೆ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದಾರೆ… ಇನ್ನೂ ಸ್ಥಳಕ್ಕೆ ಆರ್‌ಜೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಚಯಸ್ಥರೆ ಅತ್ಯಾಚಾರವೆಸಗಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ