AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಾರ್ಟ್ ಕಾರ್ಡ್ ಹೆಸರಲ್ಲಿ ಜನರಿಗೆ ವಂಚನೆ: ಪ್ರತಿಷ್ಠಿತ ಕಂಪನಿ ವಿರುದ್ಧ ಗಂಭೀರ ಆರೋಪ

ಹಸುಗೂಸನ್ನು ತಾಯಿ ಬೀದಿಯಲ್ಲಿ ಬಿಟ್ಟು ಹೋಗಿರುವಂತಹ ಅಮಾನವೀಯ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಕುರೆಕುಪ್ಪ ಗ್ರಾಮದಲ್ಲಿ ನಡೆದಿದೆ.

ಸ್ಮಾರ್ಟ್ ಕಾರ್ಡ್ ಹೆಸರಲ್ಲಿ ಜನರಿಗೆ ವಂಚನೆ: ಪ್ರತಿಷ್ಠಿತ ಕಂಪನಿ ವಿರುದ್ಧ ಗಂಭೀರ ಆರೋಪ
ಸ್ಮಾರ್ಟ್ ಬಜಾರ್ ಮುಂದೆ ಕಾರ್ಡ್ ಹಿಡಿದು ನಿಂತಿರುವ ಜನರು.
TV9 Web
| Edited By: |

Updated on: Aug 20, 2022 | 9:35 AM

Share

ಮಂಡ್ಯ: ಸ್ಮಾರ್ಟ್ ಕಾರ್ಡ್ (smart card) ಹೆಸರಲ್ಲಿ ಜನರಿಗೆ ಮಕ್ಮಲ್ ಟೋಪಿ ಹಾಕಿರುವಂತಹ ಘಟನೆ ನಡೆದಿದ್ದು, ಮಂಡ್ಯ ಮೈಸೂರು ಮುಖ್ಯ ರಸ್ತೆಯಲ್ಲಿರುವ ಸ್ಮಾರ್ಟ್ ಬಜಾರ್ (Smart Bazaar) ಕಂಪನಿ ಮುಂದೆ ಸ್ಮಾರ್ಟ್ ಕಾರ್ಡ್ ಕೈಯಲ್ಲಿ ಹಿಡಿದು ಗ್ರಾಹಕರು ಪ್ರತಿಭಟಿಸುತ್ತಿದ್ದಾರೆ. ಪ್ರತಿಷ್ಠಿತ ಬಿಗ್ ಬಜಾರ್ ಕಂಪನಿಯ ಮೇಲೆ ಗಂಭೀರ ಆರೋಪ ಮಾಡಲಾಗಿದೆ. ಕಳೆದೊಂದು ವರ್ಷದಿಂದ ಹತ್ತು ಸಾವಿರ ಹಣ ಪಡೆದು ದೋಖ ಮಾಡಲಾಗಿದೆ ಎನ್ನಲಾಗುತ್ತಿದ್ದು, ಬಿಗ್ ಬಜಾರ್ ಪ್ರಾಫಿಟ್ ಕ್ಲಬ್ ಹೆಸರಲ್ಲಿ ನೂರಾರು ಜನರಿಗೆ ವಂಚನೆ ಆರೋಪ ಕೇಳಿಬಂದಿದೆ. 10 ಸಾವಿರ ಹಣ ಕಟ್ಟಿದ್ರೆ 12 ಸಾವಿರ ಖರೀದಿ ಮಾಡುವ ಅವಕಾಶವೆಂದು ಹೇಳಿ ವಂಚನೆ ಮಾಡಿದ್ದು, ಸ್ಮಾರ್ಟ್ ಕಾರ್ಡ್ ಕೈಯಲ್ಲಿ ಹಿಡಿದು ಗ್ರಾಹಕರು ಪ್ರತಿಭಟಸುತ್ತಿದ್ದಾರೆ. ಹಣ ಕಟ್ಟಿಸಿಕೊಂಡು ಇದ್ದಕಿದ್ದಂತೆ ಬಿಗ್ ಬಜಾರ್​ಗೆ ಬೀಗ ಹಾಕಲಾಗಿದೆ.

ಇದನ್ನೂ ಓದಿ: ಕೋವಿಡ್​ನಲ್ಲಿ ಕೆಲಸ ಹೋಯ್ತು ಅಂತ ಕಳ್ಳತನದ ದಾರಿ: ದೆಹಲಿಯಿಂದ ಫ್ಲೈಟ್ ನಲ್ಲಿ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮ ಅರೆಸ್ಟ್

ಬಿಗ್ ಬಜಾರ್ ಸ್ಥಳದಲ್ಲೇ ಈಗ ಸ್ಮಾರ್ಟ್ ಬಜಾರ ಓಪನ್ ಮಾಡಿದ್ದು, ಸ್ಮಾರ್ಟ್ ಬಜಾರ್ ಮುಂದೆ ಕಾರ್ಡ್ ಹಿಡಿದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಗ್ ಬಜಾರ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ಧ ಸಿಬ್ಬಂದಿಗಳೇ ಈಗ ಸ್ಮಾರ್ಟ್ ಬಜಾರ್​ನಲ್ಲಿ ಕೆಲಸ ಮಾಡುತ್ತಿದ್ದು, ಹಾಗಾಗಿ ಸಿಬ್ಬಂದಿಯನ್ನ ಜನರು ತರಾಟೆ ತೆಗೆದುಕೊಂಡರು. ನಮ್ಮ ಹಣ ಮರು ಪಾವತಿ ಮಾಡುವಂತೆ ತಾಕೀತು ಮಾಡಿದ್ದು, ಜನರ ಪ್ರತಿಭಟನೆ ಹಿನ್ನಲೆ 112 ಪೊಲೀಸರು ಸ್ಥಳಕ್ಕಾಗಮಿಸಿದರು. ಎರೆಡು ಕಡೆ ಮಾಹಿತಿ ಪಡೆದ 112 ಪೊಲೀಸರು, ಆದಷ್ಟು ಬೇಗ ಸಮಸ್ಯೆ ಬಗೆ ಹರಿಸುವುದಾಗಿ ಸ್ಮಾರ್ಟ್ ಬಜಾರ್​ ಸ್ಟೋರ್ ಮ್ಯಾನೇಜರ್ ಮಾರ್ಟೀನ್ ಮಾತು ಕೊಟ್ಟರು.

ಬೀದಿಯಲ್ಲಿ ಹಸುಗೂಸನ್ನು ಬಿಟ್ಟು ಹೋದ ತಾಯಿ: ನಾಯಿಗಳು ಎಳೆದಾಡಿ ಮಗು ಸಾವು

ಬಳ್ಳಾರಿ: ಹಸುಗೂಸನ್ನು ತಾಯಿ ಬೀದಿಯಲ್ಲಿ ಬಿಟ್ಟು ಹೋಗಿರುವಂತಹ ಅಮಾನವೀಯ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಕುರೆಕುಪ್ಪ ಗ್ರಾಮದಲ್ಲಿ ನಡೆದಿದೆ. ಹುಟ್ಟಿ ಕೆಲವೇ ಹೊತ್ತಿನಲ್ಲಿ ಮಗುವನ್ನ ಬಿದಿಯಲ್ಲಿ ಪೋಷಕರು ಬಿಟ್ಟು ಹೋಗಿದ್ದಾರೆ. ಅನಾಥವಾಗಿ ಬಿದ್ದಿರುವ ಹೆಣ್ಣು ಮಗುವನ್ನು ನಾಯಿಗಳು ಎಳೆದಾಡಿದ್ದು, ಮಗು ಸಾವನ್ನಪ್ಪಿದೆ. ತಡರಾತ್ರಿ ಮಗು ಹುಟ್ಟಿದ್ದು, ಹೆಣ್ಣು ಮಗುವಾದ್ದರಿಂದ ಪೋಷಕರು ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದೆ. ಸ್ಥಳಿಯರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಮೂರು ವರ್ಷದ ಬಾಲಕಿ ಕಿಡ್ನ್ಯಾಪ್​ಗೆ ಯತ್ನ: ಸ್ಥಳೀಯರಿಗೆ ಹೆದರಿ ಮಗು ಬಿಟ್ಟು ಪರಾರಿ

ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ವಿಡಿಯೋ ಚಿತ್ರೀಕರಿಸ್ತಿದ್ದ ಆರೋಪಿ ಅರೆಸ್ಟ್;

ಬೆಂಗಳೂರು: ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ವಿಡಿಯೋ ಚಿತ್ರೀಕರಿಸುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧನ ಮಾಡಿದ್ದಾರೆ. ಮಹೇಶ್ (30) ಬಂಧಿತ ಆರೋಪಿ. ಪರಿಚಯಸ್ಥ ಮಹಿಳೆಯರು ಮನೆಗೆ ಬಂದಾಗ ಸೀಕ್ರೆಟ್ ಆಗಿ ಆರೋಪಿ ವಿಡಿಯೋ ಮಾಡಿಕೊಂಡಿದ್ದ. ಮೊಬೈಲ್ ಚಾರ್ಜರ್​ನಲ್ಲಿ ಕ್ಯಾಮರಾ ಇಟ್ಟು ಮಹಿಳೆಯ ವಿಡಿಯೋ ಮಾಡಿಕೊಂಡಿದ್ದ. ನಂತರ ಮಹಿಳೆಗೆ ಇನ್ಸ್ಟಾಗ್ರಾಂನಲ್ಲಿ‌ ಫೇಕ್ ಅಕೌಂಟ್​ನ ಮಹಿಳೆಗೆ ಅಶ್ಲೀಲವಾಗಿ ಮೆಸೆಜ್ ಮಾಡುತ್ತಿದ್ದು, ಅಶ್ಲೀಲವಾಗಿ ಮಾತಾಡುವಂತೆ ಆರೋಪಿ ಒತ್ತಾಯಿಸಿದ್ದ. ಇಲ್ಲವಾದರೆ ಆತನ‌ ಬಳಿ ಇದ್ದ ಮಹಿಳೆ ವಿಡಿಯೋ ಪೋಸ್ಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ. ಕೆಲ ವಿಡಿಯೋ ತುಣುಕು ಕಳಿಸಿ ಆರೋಪಿ ಬೆದರಿಕೆವೊಡ್ಡಿದ್ದು, ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿದ್ದು, ಬಂಧಿತನಿಂದ ಎರಡು ಸ್ಪೈ ಕ್ಯಾಮೆರಾ, ಲ್ಯಾಪ್ ಟಾಪ್, 2 ಪೆನ್ ಡ್ರೈವ್, 2 ಮೆಮೋರಿಕಾರ್ಡ್, ಎರಡು ಮೊಬೈಲ್ ಜಪ್ತಿ ಮಾಡಿದ್ದಾರೆ. ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೈಸೂರಿನಲ್ಲಿ ಮೂವರು ಹಸು ಕಳ್ಳರ ಬಂಧನ

ಮೈಸೂರು: ಹುಣಸೂರು ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಹಸು ಕಳ್ಳತನ ಮಾಡಿದ್ದ ಅಪ್ರಾಪ್ತ ಸೇರಿದಂತೆ ಮೂವರು ಕಳ್ಳರ ಬಂಧನ ಮಾಡಲಾಗಿದೆ. ಮಾರುತಿ ಬಡಾವಣೆಯ ಮೊಹಮ್ಮದ್ ರಫೀಕ್, ರತ್ನಪುರಿಯ ಮೊಹಮ್ಮದ್ ನಿಷಾದ್ ಹಾಗೂ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 6 ಹಸುಗಳ ರಕ್ಷಣೆ ಮಾಡಿದ್ದು, ಕೃತ್ಯಕ್ಕೆ ಬಳಸಿದ್ದ ಬೊಲೆರೋ ಪಿಕಪ್ ವಾಹನವನ್ನು ಹುಣಸೂರು ಗ್ರಾಮಾಂತರ ಪೊಲೀಸರು ಜಪ್ತಿ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.