ಕೋವಿಡ್​ನಲ್ಲಿ ಕೆಲಸ ಹೋಯ್ತು ಅಂತ ಕಳ್ಳತನದ ದಾರಿ: ದೆಹಲಿಯಿಂದ ಫ್ಲೈಟ್ ನಲ್ಲಿ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮ ಅರೆಸ್ಟ್

ಬಿಎಸ್ಸಿ ಪದವೀಧರನಾಗಿರುವ ರಾಹುಲ್ ಆಗಾಗ ಬೆಂಗಳೂರಿಗೆ ಬಂದು ಚಿನ್ನದ ಅಂಗಡಿಗಳಲ್ಲಿ ಕಳ್ಳತನ ಮಾಡ್ತಿದ್ದ. ದೆಹಲಿಗಿಂತ ಬೆಂಗಳೂರಿನಲ್ಲಿ ಕಳ್ಳತನ ಮಾಡೋದು ತುಂಬಾ ಸುಲಭ ಅಂತ ಇಲ್ಲಿಗೆ ಬರ್ತಿದ್ದ.

ಕೋವಿಡ್​ನಲ್ಲಿ ಕೆಲಸ ಹೋಯ್ತು ಅಂತ ಕಳ್ಳತನದ ದಾರಿ: ದೆಹಲಿಯಿಂದ ಫ್ಲೈಟ್ ನಲ್ಲಿ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮ ಅರೆಸ್ಟ್
ಕೋವಿಡ್ನಲ್ಲಿ ಕೆಲಸ ಹೋಯ್ತು ಅಂತ ಕಳ್ಳತನದ ದಾರಿ: ದೆಹಲಿಯಿಂದ ಫ್ಲೈಟ್ ನಲ್ಲಿ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮ
Follow us
| Updated By: ಆಯೇಷಾ ಬಾನು

Updated on:Aug 20, 2022 | 8:43 AM

ಬೆಂಗಳೂರು: ಮಹಾಮಾರಿ ಕೊರೊನಾ(Coronavirus) ಸಮಯದಲ್ಲಿ ಅನೇಕರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಆದ್ರೆ ಇಲ್ಲೊಬ್ಬ ಕೋವಿಡ್ನಲ್ಲಿ ಕೆಲಸ ಹೋಯ್ತು ಎಂದು ಹಣ ಮಾಡಲು ಕಳ್ಳತನದ ದಾರಿ ಹಿಡಿದಿದ್ದಾನೆ. ದೆಹಲಿಯಿಂದ ಬೆಂಗಳೂರಿಗೆ ಫ್ಲೈಟ್ ನಲ್ಲಿ ಬಂದು ಚಿನ್ನಾಭರಣಗಳನ್ನು ಕಳ್ಳತನ ಮಾಡ್ತಿದ್ದ ಚಾಲಾಕಿ ಕಳ್ಳ ರಾಹುಲ್ ಯಾದವ್ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಬಿಎಸ್ಸಿ ಪದವೀಧರನಾಗಿರುವ ರಾಹುಲ್ ಆಗಾಗ ಬೆಂಗಳೂರಿಗೆ ಬಂದು ಚಿನ್ನದ ಅಂಗಡಿಗಳಲ್ಲಿ ಕಳ್ಳತನ ಮಾಡ್ತಿದ್ದ. ದೆಹಲಿಗಿಂತ ಬೆಂಗಳೂರಿನಲ್ಲಿ ಕಳ್ಳತನ ಮಾಡೋದು ತುಂಬಾ ಸುಲಭ ಅಂತ ಇಲ್ಲಿಗೆ ಬರ್ತಿದ್ದ. ಚಿನ್ನ ಕಳ್ಳತನ ಮಾಡ್ತಿದಂತೆ ದೆಹಲಿ ಫ್ಲೈಟ್ ಹತ್ತಿ ವಾಪಸ್ ಆಗುತ್ತಿದ್ದ. ಬಳಿಕ ತಾನು ಕದ್ದ ಚಿನ್ನವನ್ನು ದೆಹಲಿಯಲ್ಲಿ ಮಾರಿ ತನ್ನ ಪತ್ನಿಯ ಅಕೌಂಟ್ ಗೆ ಹಣ ಹಾಕ್ತಿದ್ದ. ಕಡಿಮೆ ಜನ ಹಾಗೂ ಒಬ್ಬರೇ ಸೇಲ್ಸ್ ಬಾಯ್ ಇರುವ ಚಿನ್ನದ ಅಂಗಡಿಗಳನ್ನೇ ಈ ಖದೀಮ ಹೆಚ್ಚಾಗಿ ಟಾರ್ಗೆಟ್ ಮಾಡ್ತಿದ್ದ.

ಚಿನ್ನ ಖರೀದಿಸುವ ನೆಪದದಲ್ಲಿ ಗ್ರಾಹಕನಂತೆ ನಟಿಸಿ ಅಂಗಡಿಯವರ ಗಮನ ಬೇರೆಡೆ ಸೆಳೆದು ಚಿನ್ನ ಕದ್ದು ಪರಾರಿಯಾಗ್ತಿದ್ದ. ಅದೇ ರೀತಿ ಬೆಂಗಳೂರಿನ ಜಯನಗರ ಹಾಗೂ ಮಲ್ಲೇಶ್ವರದಲ್ಲಿನ ಅಂಗಡಿಗಳಲ್ಲಿ 230 ಗ್ರಾಂ ಚಿನ್ನ ಕಳವು ಮಾಡಿದ್ದ. ಆರೋಪಿ ಕಳವು ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಸಹಾಯದಿಂದ ಪೊಲೀಸರು ಖದೀಮನನ್ನು ಹಿಡಿದಿದ್ದಾರೆ. ಬಂಧಿತನಿಂದ 120 ಗ್ರಾಂ ಚಿನ್ನ ಹಾಗೂ 7 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರೋಡೆಗೆ ಹೊಂಚು ಹಾಕುತ್ತಿದ್ದ ಐವರ ತಂಡದ ಮೇಲೆ ಪೊಲೀಸರ ದಾಳಿ

ದಾವಣಗೆರೆ: ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿಯ ಕೈದಾಳ್ ಕ್ರಾಸ್ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸರ ದಾಳಿ ವೇಳೆ ನಾಲ್ವರು ಪರಾರಿಯಾಗಿದ್ದು ಸಾಧಿಕ್ವುಲ್ಲಾ ಅಲಿಯಾಸ್ ರಾಜೀಕ್(23) ಅರೆಸ್ಟ್ ಆಗಿದ್ದಾನೆ. ಬಂಧಿತ ಆರೋಪಿಯಿಂದ 3.02 ಲಕ್ಷ ರೂ. ನಗದು 1 ಕಾರು ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ತಾಲೂಕಿನ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 8:42 am, Sat, 20 August 22