ಬಿಎಂಟಿಸಿ ಬಸ್‌ನಲ್ಲಿ ಸ್ವಾತಂತ್ರ್ಯ ದಿನದಂದು 61 ಲಕ್ಷ ಮಂದಿ ಉಚಿತ ಪಯಾಣ? ಅನುಮಾನ ವ್ಯಕ್ತಪಡಿಸಿದ ಜನ!

BMTC ಯಂತೆಯೇ BMRCL ಸಂಸ್ಥೆಯ ನಮ್ಮ ಮೆಟ್ರೋದ ದೈನಂದಿನ ಪ್ರಯಾಣಿಕರ ಸಂಖ್ಯೆಯೂ ಆಗಸ್ಟ್ 15 ರಂದು ದಾಖಲೆ ಮಾಡಿದೆ.

ಬಿಎಂಟಿಸಿ ಬಸ್‌ನಲ್ಲಿ ಸ್ವಾತಂತ್ರ್ಯ ದಿನದಂದು 61 ಲಕ್ಷ ಮಂದಿ ಉಚಿತ ಪಯಾಣ? ಅನುಮಾನ ವ್ಯಕ್ತಪಡಿಸಿದ ಜನ!
ಬಿಎಂಟಿಸಿ ಬಸ್‌ನಲ್ಲಿ ಸ್ವಾತಂತ್ರ್ಯ ದಿನದಂದು 61 ಲಕ್ಷ ಮಂದಿ ಉಚಿತ ಪಯಾಣ? ಅನುಮಾನ ವ್ಯಕ್ತಪಡಿಸಿದ ಜನ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 19, 2022 | 7:06 PM

ಬೆಂಗಳೂರು: ಈ ಬಾರಿಯ ಸ್ವಾತಂತ್ರ್ಯ ದಿನ ದೇಶಕ್ಕೆ ವಿಶೇಷವಾಗಿತ್ತು. ಅಂದು ಸ್ವಾತಂತ್ರ್ಯದ ಅಮೃತಮಹೋತ್ಸವವಾಗಿತ್ತು (Azadi Ka Amrit Mahotsav). ಹಾಗೆಂದೇ ಅನೇಕ ಸೇವಾ ಸಂಸ್ಥೆಗಳು 75ನೇ ಸ್ವಾತಂತ್ರ್ಯ ದಿನಕ್ಕೆ ವಿಶೇಷ ಮಹತ್ವ ನೀಡಿದ್ದವು. ರಾಜಧಾನಿ ಬೆಂಗಳೂರಿನಲ್ಲಿ ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆ (BMTC free bus travel) ಮತ್ತು ನಮ್ಮ ಮೆಟ್ರೋ (ಬಿಎಂಆರ್​ಸಿಎಲ್​) ಉಚಿತವಾದ ಸೇವೆಯನ್ನು ತನ್ನ ಪ್ರಯಾಣಿಕರಿಗೆ ಕೊಡಮಾಡಿತ್ತು.

ಆಗಸ್ಟ್​ 15 ರಂದು ನೀಡಿದ್ದ ಉಚಿತ ಪ್ರಯಾಣ ಸೇವೆಯನ್ನು 61 ಲಕ್ಷ ಮಂದಿ ಪಡೆದುಕೊಂಡಿದ್ದಾರೆ ಎಂದು ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಕಟಣೆ ತಿಳಿಸಿದೆ. ಆದರೆ ನಿಗಮದ ಈ ಅಂಕಿ ಅಂಶಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾಗಿದೆ. ರಾಜಧಾನಿಯ ಬಹುತೇಕ ಭಾಗಗಳಲ್ಲಿ ಸಾರ್ವಜನಿಕರು ಬಸ್ಸಗಳ ಕೊರತೆ ಎದುರಿಸಿದ್ದಾರೆ. ಬಸ್​ ಗಳ ಸಂಖ್ಯೆ ಅಂದು ಕಡಿಮೆಯಿತ್ತು. ಆದರೂ ಬಿಎಂಟಿಸಿ ಅದು ಹೇಗೆ, ಅದು ಯಾವಾಗ, ಅದು ಎಲ್ಲಿಂದ 61 ಲಕ್ಷ ಮಂದಿಯನ್ನು ಉಚಿತವಾಗಿ ಹತ್ತಿಸಿಕೊಂಡು ಹೋಯಿತು? ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಬಿಎಂಟಿಸಿ ಸಾಪನೆಯಾಗಿ 125 ವರ್ಷ ತುಂಬಿದ ಹಿನ್ನೆಲೆಯಲ್ಲಿ 75ನೇ ಸ್ವಾತಂತ್ರ ದಿನದಂದು ಉಚಿತ ಬಸ್‌ ಪ್ರಯಾಣ ಕಲ್ಪಿಸಲಾಗಿತ್ತು. ಉಚಿತ ಪ್ರಯಾಣ ದರ ಕೊಡುಗೆಯ ನಿಮಿತ್ತ ಆಗಸ್ಟ್ 15ರಂದು 5 ಸಾವಿರ ಬಸ್ಸುಗಳು ಸಂಚರಿಸಿದ್ದವು, 61,41,323 ಮಂದಿ ಪ್ರಯಾಣಿಸಿದ್ದಾರೆ. ಸಾಮಾನ್ಯ ದಿನಗಳಲ್ಲಿ ಸಾಮಾನ್ಯವಾಗಿ 6,834 ಬಿಎಂಟಿಸಿ ಬಸ್ಸುಗಳನ್ನು ರಸ್ತೆಗೆ ಬಿಡಲಾಗುತ್ತದೆ. ಆಗ 28 ಲಕ್ಷ ಮಂದಿ ಪ್ರಯಾಣ ಮಾಡುತ್ತಾರೆ (BMTC daily ridership number). ಅಂದು ನಾವು ಕಲ್ಪಿಸಿದ್ದ ಉಚಿತ ಪ್ರಯಾಣವನ್ನು ಜನ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ. ಆದರೆ ಉಚಿತ ಪ್ರಯಾಣ ಎಂಬ ಕಾರಣಕ್ಕೆ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಆ. 15 ರಂದು ಬಸ್‌ಗಳು ಕಡಿಮೆ ಸಂಚರಿಸಿದ್ದವು ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿತ್ತು. ನಗರದ ಹೊರಭಾಗಗಳಲ್ಲಿ ಗಂಟೆಗಟ್ಟಲೆ ಕಾದಿದ್ದವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು.

BMTC ಯಂತೆಯೇ BMRCL ಸಂಸ್ಥೆಯ ನಮ್ಮ ಮೆಟ್ರೋದ ದೈನಂದಿನ ಪ್ರಯಾಣಿಕರ ಸಂಖ್ಯೆಯೂ ಆಗಸ್ಟ್ 15 ರಂದು ದಾಖಲೆ ಮಾಡಿದೆ. ಪರ್ಪಲ್ ಲೈನ್ (Purple Line -2.5 ಲಕ್ಷ), ಗ್ರೀನ್ ಲೈನ್ (Green Line -4.02 ಲಕ್ಷ) ಮತ್ತು ಮೆಜೆಸ್ಟಿಕ್ ಇಂಟರ್‌ಚೇಂಜ್ (Majestic interchange) (1.6 ಲಕ್ಷ) ಸೇರಿದಂತೆ ಒಟ್ಟು 8.2 ಲಕ್ಷ ಪ್ರಯಾಣಿಕರು ಅಂದು ಸಂಚರಿಸಿದ್ದಾರೆ. 2011 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ BMRCL ಸಂಸ್ಥೆ ಇಲ್ಲಿಯವರೆಗಿನ ಅತಿ ಹೆಚ್ಚು ಪ್ರಯಾಣಿಕರ ಸಂಖ್ಯೆಯನ್ನು ಅಂದು ಕಂಡಿತು.

ಪ್ರಮುಖವಾಗಿ ಗ್ರೀನ್ ಲೈನ್ (ನಾಗಸಂದ್ರ-ಸಿಲ್ಕ್ ಇನ್‌ಸ್ಟಿಟ್ಯೂಟ್ -Nagasandra-Silk Institute) ಉದ್ದಕ್ಕೂ ಸವಾರರ ಹೆಚ್ಚಳಕ್ಕೆ ಕಾರಣ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ರ್ಯಾಲಿ ಮತ್ತು ಲಾಲ್‌ಬಾಗ್ ಫಲಪುಷ್ಪ (Lalbagh flower show) ಪ್ರದರ್ಶನವಾಗಿತ್ತು. ಇನ್ನು ಕಾಂಗ್ರೆಸ್ ಸಮಾವೇಶಕ್ಕೆ ಸುಮಾರು 1 ಲಕ್ಷ ಮೆಟ್ರೋ ಪಾಸ್‌ಗಳನ್ನು ಖರೀದಿಸಿದ್ದರು.

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ