AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ವರ್ಷದ ಬಾಲಕಿ ಕಿಡ್ನ್ಯಾಪ್​ಗೆ ಯತ್ನ: ಸ್ಥಳೀಯರಿಗೆ ಹೆದರಿ ಮಗು ಬಿಟ್ಟು ಪರಾರಿ

ವೈಟ್ ಹೆಲ್ಮೆಟ್ ಧರಿಸಿ ಅರ್ಧ ತಾಸಿಗೂ ಹೆಚ್ಚು ಕಾಲ ಹೊಂಚು ಹಾಕಿ ಕುತಿದ್ದ ಈ ಮಗು ಕಳ್ಳರ ಗ್ಯಾಂಗ್, ಅದ್ಯಾಕೆ ಈ ಮಗುವನ್ನೇ ಟಾರ್ಗೆಟ್ ಮಾಡಿತ್ತೋ ಗೊತ್ತಿಲ್ಲ, ಥೇಟ್ ಸಿನಿಮಾ‌ ಸೀನಿನಂತೆ ಅಷ್ಟು ಜನರಿದ್ರೂ ಯಾವ ಭಯವಿಲ್ಲದೇ ಮಗುವನ್ನು ಹೊತ್ತೊಯ್ದಿದ್ದಾರೆ.

ಮೂರು ವರ್ಷದ ಬಾಲಕಿ ಕಿಡ್ನ್ಯಾಪ್​ಗೆ ಯತ್ನ: ಸ್ಥಳೀಯರಿಗೆ ಹೆದರಿ ಮಗು ಬಿಟ್ಟು ಪರಾರಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Aug 20, 2022 | 8:37 AM

Share

ಆನೇಕಲ್: ಆ ಕಿರಾತಕರ ಪ್ಲ್ಯಾನ್ ಮಗುವನ್ನು ಕಿಡ್ನ್ಯಾಪ್ (kidnapp) ‌ಮಾಡೋದಿತ್ತು, ಅಂಗಡಿಗೆಂದು ಓಡಿ ಬಂದ ಮಗುವನ್ನು ಖದೀಮರು ಕಿಡ್ನ್ಯಾಪ್ ಮಾಡೇ ಬಿಟ್ರು. ಆದರೆ ಸ್ಥಳೀಯರು ತಮ್ಮ ಹಿಂದೆ ಚೇಸಿಂಗ್ ಮಾಡೋದು ಕಂಡು ಮಗುವನ್ನು ಕಾಡಿನಲ್ಲಿ ಬಿಟ್ಟು ಪರಾರಿಯಾಗಿರುವಂತಹ ಘಟನೆ ನಡೆದಿದೆ. ಸಮಯ ಸರಿಯಾಗಿ 7 ಗಂಟೆ 52 ನಿಮಿಷ, ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಕಲ್ಕೆರೆ ಗ್ರಾಮದಲ್ಲಿ ಆಗಷ್ಟೇ ಜನ ತಮ್ಮ ತಮ್ಮ ಕೆಲಸ ಮುಗಿಸಿ ಟೀ, ಕಾಫಿ ಅಂತ ರೆಸ್ಟ್ ಮಾಡ್ತಿದ್ರು. ಈ ವೇಳೆ ಮಹಿಳೆಯೊಬ್ಬಳು ತನ್ನ ಮಗಳಿಗೆ ಊಟ ಮಾಡಿಸುತ್ತಾ, ಮೊಸರು ತರಲು ಮನೆ ಬಳಿಯೇ ಇದ್ದ ಅಂಗಡಿಗೆ ಕಳುಹಿಸಿದ್ದಾಳೆ. ಆ ಮೂರು ವರ್ಷದ ಪುಟ್ಟ ಮಗು ಖುಷಿಯಿಂದ ಜಿಗಿಯುತ್ತಾ ಅಂಗಡಿ ಕಡೆ ಓಡಿದೆ. ಇದನ್ನೇ ಕಾಯುತ್ತಿದ್ದ ಕಿರಾತಕ ಕಿಡ್ನ್ಯಾಪರ್ಸ್​​ಗಳು, ಮಗುವನ್ನು ಅಡ್ಡಗಟ್ಟಿ ಆ್ಯಕ್ಟೀವಾ ಗಾಡಿ ಮೇಲೆ‌ ಕೂರಿಸಿ ಹೊತ್ತೊಯ್ದಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನನ್ನು ಅಪಹರಣ ಮಾಡಿಸಿದ್ದ ಹೆಂಡತಿ ಹಾಗೂ ಗ್ಯಾಂಗ್​ನ್ನು ಬಂಧಿಸಿದ ಪೀಣ್ಯ ಪೊಲೀಸ್​

ವೈಟ್ ಹೆಲ್ಮೆಟ್ ಧರಿಸಿ ಅರ್ಧ ತಾಸಿಗೂ ಹೆಚ್ಚು ಕಾಲ ಹೊಂಚು ಹಾಕಿ ಕುತಿದ್ದ ಈ ಮಗು ಕಳ್ಳರ ಗ್ಯಾಂಗ್, ಅದ್ಯಾಕೆ ಈ ಮಗುವನ್ನೇ ಟಾರ್ಗೆಟ್ ಮಾಡಿತ್ತೋ ಗೊತ್ತಿಲ್ಲ, ಥೇಟ್ ಸಿನಿಮಾ‌ ಸೀನಿನಂತೆ ಅಷ್ಟು ಜನರಿದ್ರೂ ಯಾವ ಭಯವಿಲ್ಲದೇ ಮಗುವನ್ನು ಹೊತ್ತೊಯ್ದಿದ್ದಾರೆ. ಮಗುವನ್ನು ಗಾಡಿ ಮೇಲೆ ಕೂರಿಸುವ ಸಂದರ್ಭದಲ್ಲಿಯೇ ಏನೋ ಸಂಚು ನಡಿಯುತ್ತಿದೆ ಅಂತ ಅರಿತ ಕೆಲವರು ಗಾಡಿ ಹಿಂದೆಯೇ ಓಡಿದ್ದಾರೆ, ಕೆಲವರು ಓಡೋದನ್ನು ಕಂಡು ಇನ್ನಷ್ಟು ಜನ ಖದೀಮರ ಹಿಂದೆ ಬಿದ್ದಿದ್ದಾರೆ, ತಮ್ಮ ಹಿಂದೆ ಬಿದ್ದ ಜನರ ದಿಕ್ಕು ತಪ್ಪಿಸಲು ಕಾಡಿನೊಳಗೆ ಗಾಡಿ ಓಡಿಸಿದ ಕಿರಾತಕರ ಗ್ಯಾಂಗ್, ಗಿಡ ಮರಗಳ ಬೈಕ್ ಓಡಿಸಲಾಗದೇ ಬೈಕ್ ಅಲ್ಲೇ ಬಿಟ್ಟಿದ್ದಾರೆ. ಇನ್ನು ತಮ್ಮ ಹಿಂದೆ ಜನ ಬಿದ್ದಿದ್ದರಿಂದ ಮಗುವವನ್ನು ಅರಣ್ಯದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಡಿಎಸ್‌ಪಿ ವಾಹನ ಬೈಕ್ ಸವಾರನಿಗೆ ಡಿಕ್ಕಿ, ಪೊಲೀಸ್ ವಾಹನದ ಚಾಲಕ ಅಮಾನತು

ಮನೆಯಿಂದ ಸುಮಾರು ಎರಡು ಕಿ.ಮೀಟರ್ ದೂರದ ವರೆಗೂ ಮಗುವನ್ನು ಹೊತ್ತೊಯ್ದಿದ್ದ ಕಳ್ಳರ ಗ್ಯಾಂಗ್, ಮಗುವನ್ನು ಕಾಡಿನಲ್ಲೇ ಬಿಟ್ಟಿದ್ದರಿಂದ ಮಗು ಗಾಬರಿಯಾಗಿ ಅಳುತ್ತಾ ನಿಂತಿದೆ. ಮಗು ಅಳುವಿನ ಶಬ್ದ ಕೇಳಿ ಸ್ಥಳೀಯರು ರಕ್ಷಣೆ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ.‌ ಕಿಡ್ನ್ಯಾಪರ್ಸ್ ಉಪಯೋಗಿಸಿದ್ದ ನಂಬರ್ ಪ್ಲೇಟ್ ಇಲ್ಲದ ಆ್ಯಕ್ಟೀವಾ ಗಾಡಿ ಹಾಗೂ ಚಾಕುವನ್ನು ವಶ ಪಡಿಸಿಕೊಳ್ಳಲಾಗಿದೆ. ಹಣದ ಬೇಡಿಕೆ ಇಡಲು ಈ ಕೃತ್ಯ ನಡೆದಿತ್ತಾ ಅಥವಾ ಇದರ ಬೇರೆ ಏನಾದ್ರೂ ಕಾರಣ ಇದೆಯಾ ಅಂತ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಸದ್ಯ ತಮ್ಮ ಮಗು ಸಿಕ್ಕಿದೆ ಅಂತ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ವರದಿ: ಸೈಯ್ಯದ್ ನಿಜಾಮುದ್ದೀನ್ ಟಿವಿ9 ಆನೇಕಲ್ 

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:26 am, Sat, 20 August 22

Follow Us
Web contact
Web contact

TV9 Kannada

Read More
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ