ಡಿಎಸ್‌ಪಿ ವಾಹನ ಬೈಕ್ ಸವಾರನಿಗೆ ಡಿಕ್ಕಿ, ಪೊಲೀಸ್ ವಾಹನದ ಚಾಲಕ ಅಮಾನತು
ತೆಲಂಗಾಣದ ದೇವರಕೊಂಡದಲ್ಲಿ ಪೊಲೀಸ್ ಉಪಾಧೀಕ್ಷಕರ (ಡಿಎಸ್ಪಿ) ಪೊಲೀಸ್ ವಾಹನವು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ. ಆಗಸ್ಟ್ 17ರ ಗುರುವಾರ ಸಂಜೆ 4.40 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ತೆಲಂಗಾಣ: ತೆಲಂಗಾಣದ ನಲ್ಗೊಂಡಾ ಜಿಲ್ಲೆಯ ಬೋಡಂಗಿಪರ್ತಿ ಗ್ರಾಮದ ಬಳಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದ ದೇವರಕೊಂಡ ಡಿಎಸ್ಪಿ ನಾಗೇಶ್ವರ ರಾವ್ ಅವರ ಚಾಲಕನನ್ನು ಅಮಾನತುಗೊಳಿಸಲಾಗಿದೆ. ಡಿಎಸ್ಪಿ ಗಾಯಗೊಂಡ ಬೈಕ್ ಸವಾರನನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಆ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.
ತೆಲಂಗಾಣದ ದೇವರಕೊಂಡದಲ್ಲಿ ಪೊಲೀಸ್ ಉಪಾಧೀಕ್ಷಕರ (ಡಿಎಸ್ಪಿ) ಪೊಲೀಸ್ ವಾಹನವು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ. ಆಗಸ್ಟ್ 17ರ ಗುರುವಾರ ಸಂಜೆ 4.40 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ದೇವರಕೊಂಡ ಡಿಎಸ್ಪಿ ನಾಗೇಶ್ವರ ರಾವ್ ಮತ್ತು ಅವರ ಚಾಲಕ ಚಂಡೂರು ಮಂಡಲದ ಬೋಡಂಗಪರ್ತಿ ಕಡೆಗೆ ಹೋಗುತ್ತಿದ್ದಾಗ ಬೈಕ್ ಸವಾರನಿಗೆ ಮುಖಾಮುಖಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ನಲ್ಗೊಂಡ ಪೊಲೀಸ್ ವರಿಷ್ಠಾಧಿಕಾರಿ ರೆಮಾ ರಾಜೇಶ್ವರಿ ಅವರ ಪ್ರಕಾರ, ಗುರುವಾರ ಸಂಜೆ 4:40 ರ ಸುಮಾರಿಗೆ ದೇವರಕೊಂಡ ಡಿಎಸ್ಪಿ ಅವರ ವಾಹನವು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.
ಡಿಎಸ್ಪಿ ಅವರು ತಮ್ಮ ವಾಹನದಲ್ಲಿ ಬೈಕ್ ಸವಾರನನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು, ಬೈಕ್ ಸವಾರನ ಕಾಲು ಮುರಿದ್ದಿದು ಅಪಾಯದಿಂದ ಪಾರಾಗಿದ್ದಾರೆ ಎಂದು ಎಸ್ಪಿ ಹೇಳಿದರು. ವಾಹನದ ಚಾಲಕನನ್ನು ಅಮಾನತುಗೊಳಿಸಲಾಗಿದೆ. ಡಿಎಸ್ಪಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
Published On - 2:58 pm, Fri, 19 August 22