Shocking News: ಸ್ವಾತಂತ್ರ್ಯಯ ದಿನ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಒಂದೇ ದಿನದಲ್ಲಿ 6 ದರೋಡೆ ಮಾಡಿದ 16 ವರ್ಷದ ಬಾಲಕ! ಎಲ್ಲಿ?
ಆರೋಪಿಯು ಹದಿಹರೆಯದವನಾಗಿದ್ದು ಮಾದಕ ವ್ಯಸನಿಯಾಗಿದ್ದಾನೆ. 13 ದರೋಡೆ, ಕಳ್ಳತನ ಮತ್ತು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮುಖ್ಯವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕುಕೃತ್ಯಗಳನ್ನು ಎಸಗಿದ್ದಾನೆ ಎಂದು ದಕ್ಷಿಣ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಹದಿಹರೆಯದವನಾಗಿದ್ದು ಮಾದಕ ವ್ಯಸನಿಯಾಗಿದ್ದಾನೆ. 13 ದರೋಡೆ, ಕಳ್ಳತನ ಮತ್ತು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮುಖ್ಯವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕುಕೃತ್ಯಗಳನ್ನು ಎಸಗಿದ್ದಾನೆ ಎಂದು ದಕ್ಷಿಣ ದೆಹಲಿ ಪೊಲೀಸರು ತಿಳಿಸಿದ್ದಾರೆ.
24 ಗಂಟೆಗಿಂತ ಕಡಿಮೆ ಅವಧಿಯಲ್ಲಿ, 16 ವರ್ಷದ ಬಾಲಕನೊಬ್ಬ ಸ್ವಾತಂತ್ರ್ಯ ದಿನದಂದು ದಕ್ಷಿಣ ದೆಹಲಿಯ ವಸತಿ ಪ್ರದೇಶಗಳಲ್ಲಿ ಆರು ದರೋಡೆಗಳನ್ನು ನಡೆಸಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ವಿಶೇಷ ಪೊಲೀಸ್ ಸಿಬ್ಬಂದಿ ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.
ಹದಿಹರೆಯದ ಯುವಕ ಮಾದಕ ವ್ಯಸನಿಯಾಗಿದ್ದು, 13 ದರೋಡೆ, ಕಳ್ಳತನ ಮತ್ತು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯವಾಗಿ ಸಂಜೆ ಅಥವಾ ತಡರಾತ್ರಿಯಲ್ಲಿ ಏಕಾಂಗಿಯಾಗಿ ರಸ್ತೆಯಲ್ಲಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಮೊಬೈಲ್ ಅಥವಾ ಚಿನ್ನಾಭರಣಗಳನ್ನು ಕಸಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಆಗಸ್ಟ್ 15 ರಂದು ಮೊದಲ ಘಟನೆ ಹೌಜ್ ಖಾಸ್‌ನಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ನಡೆದಿದೆ. ಆರೋಪಿ ಬಾಲಕನು ಮಹಿಳೆಯೊಬ್ಬರ ಮೊಬೈಲ್ ಕಿತ್ತುಕೊಂಡು ತನ್ನ ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅದೇ ದಿನ ಸಂಜೆ 5.30ರ ಸುಮಾರಿಗೆ ಮತ್ತೊಬ್ಬ ಮಹಿಳೆಯನ್ನು ಗುರಿಯಾಗಿಸಿಕೊಂಡು ಸಾಕೇತ್‌ನಲ್ಲಿ ಆಕೆಯ ಪರ್ಸ್ ಕಸಿದುಕೊಂಡಿದ್ದಾನೆ ಎನ್ನಲಾಗಿದೆ.
ಬಾಲಕ ಲಾಡೋ ಸರಾಯ್ ಮಾರುಕಟ್ಟೆ ಪ್ರದೇಶಕ್ಕೆ ತೆರಳಿ ಸಂಜೆ 5.40-5.50ರ ಸುಮಾರಿಗೆ ವ್ಯಕ್ತಿಯೊಬ್ಬರಿಂದ ಮೊಬೈಲ್ ಕಿತ್ತುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕನೇ ಘಟನೆ ಮಾಳವೀಯ ನಗರದಲ್ಲಿ ಬೆಳಗಿನ ಜಾವ 2.15ರ ಸುಮಾರಿಗೆ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಬ್ಬ ವ್ಯಕ್ತಿ ಆಸ್ಪತ್ರೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಅವರ ಫೋನ್ ಕಸಿದುಕೊಂಡು ತನ್ನ ನೀಲಿ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದರು.
ಮುಂದಿನ ಒಂದು ಗಂಟೆಯಲ್ಲಿ ಆರೋಪಿ ಸಾಕೇತ್ ಮತ್ತು ಗ್ರೇಟರ್ ಕೈಲಾಶ್‌ನಲ್ಲಿ ಫುಡ್ ಡೆಲಿವರಿ ಬಾಯ್ ಮತ್ತು ಒಬ್ಬ ಮಹಿಳೆಯನ್ನು ಗುರಿಯಾಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಾ ದೂರುದಾರರು ಆರೋಪಿಯು ನೀಲಿ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ಎಂಬ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಎಲ್ಲಾ ಸಿಸಿಟಿವಿಗಳನ್ನು ಪರಿಶೀಲಿಸಿ, ಹುಡುಗನನ್ನು ಹುಡುಕಲು ಪ್ರಾರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಆರೋಪಿಯ ಪತ್ತೆಗೆ ಹಲವು ತಂಡಗಳನ್ನು ನಿಯೋಜಿಸಲಾಗಿ, ಆರೋಪಿಯು ಬುಧವಾರ ಅದೇ ಸ್ಕೂಟರ್‌ನೊಂದಿಗೆ ಬಿಆರ್‌ಟಿ ಪ್ರದೇಶಕ್ಕೆ ಬರುತ್ತಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ತಂಡಗಳನ್ನು ಸಿದ್ಧಪಡಿಸಿಕೊಂಡು, ಆರೋಪಿಯನ್ನು ಹೆಡೆಮುರಿಗೆ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು indianexpress ವರದಿ ಮಾಡಿದೆ.