ಸ್ತ್ರೀರೋಗ ತಜ್ಞೆ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ.. ಅಶ್ಲೀಲ ವಿಡಿಯೋ ಕಳಿಸಿ ಎಂದ ಕಿರಾತಕರು!
ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಗ್ಯಾಂಗ್ ಒಂದು ದುಷ್ಕೃತ್ಯ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಡಾ. ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಗ್ಯಾಂಗ್‌ನಿಂದ ವಂಚನೆ ನಡೆದಿದೆ ಎಂದು ತಿಳಿದುಬಂದಿದೆ.
ಬೆಂಗಳೂರು: ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಗ್ಯಾಂಗ್ ಒಂದು ದುಷ್ಕೃತ್ಯ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಡಾ. ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಗ್ಯಾಂಗ್‌ನಿಂದ ವಂಚನೆ ನಡೆದಿದೆ ಎಂದು ತಿಳಿದುಬಂದಿದೆ.
ಮಹಿಳೆಯರನ್ನು ಟಾರ್ಗೆಟ್ ಮಾಡಿ ವಂಚಿಸಿರುವ ಗ್ಯಾಂಗ್ ಡಾ.ಪದ್ಮಿನಿ ಪ್ರಸಾದ್ ಹೆಸರಲ್ಲಿ ಚಾಟಿಂಗ್ ಮಾಡಿದೆ. ಈ ವೇಳೆ, ಮಹಿಳೆಯರಿಗೆ ನಿಮ್ಮ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಮಾಡಿ ಕಳಿಸಲು ಒತ್ತಾಯ ಸಹ ಮಾಡಿದೆ ಎಂದು ಹೇಳಲಾಗಿದೆ.
ಮಹಿಳೆಯರು ಕ್ಲಿನಿಕ್‌ಗೆ ಬರುವುದಾಗಿ ಚಾಟಿಂಗ್ನಲ್ಲಿ ಕೇಳಿದರೆ ಕಿಲಾಡಿಗಳು ಬೇಡವೆಂದು ಹೇಳುತ್ತಿದ್ದರಂತೆ. ಇದರಿಂದ ಅನುಮಾನಗೊಂಡ ಕೆಲ ಮಹಿಳೆಯರು ಪದ್ಮಿನಿ ಪ್ರಸಾದ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಆರೋಪಿಗಳ ದುಷ್ಕೃತ್ಯ ಬಯಲಾಗಿದೆ. ಈ ಹಿನ್ನೆಲೆಯಲ್ಲಿ, ಪದ್ಮಿನಿ ಪ್ರಸಾದ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ನ್ಯೂ ಇಯರ್ ಪಾರ್ಟಿ ವೇಳೆ.. ಡಾಬಾದಲ್ಲಿ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ